ಟ್ರಾಕ್ಟರ್ ಖರೀದಿಸುವ ರೈತರಿಗೆ ಪಿಎಂ ಕಿಸಾನ್ ಯೋಜನೆಯಡಿ ಭರ್ಜರಿ ಸಬ್ಸಡಿ!

  • ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ಘೋಷಣೆ
  • ರೈತರಿಗೆ ಟ್ರಾಕ್ಟರ್ ಖರೀದಿಸಲು ಸಬ್ಸಡಿ ನೀಡಿದ ಕೇಂದ್ರ
  • ಶೇಕಡಾ 50 ರಷ್ಟು ಸಬ್ಸಡಿ ಘೋಷಿಸಿದ ಸರ್ಕಾರ
PM Modi launch PM Kisan Tractor Scheme 50 percent subsidy to purchase  tractors for small and marginal farmers ckm

ನವದೆಹಲಿ(ಜೂ.11): ರೈತರಿಗೆ ಕೇಂದ್ರ ಸರ್ಕಾರದ ಮತ್ತೊಂದು ಬಂಪರ್ ಯೋಜನೆ ಘೋಷಿಸಿದೆ. ಟ್ರಾಕ್ಟರ್ ಖರೀದಿಸುವ ರೈತರಿಗೆ ಬರೋಬ್ಬರಿ ಶೇಕಡಾ 50 ರಷ್ಟು ಸಬ್ಸಡಿ ಸಿಗಲಿದೆ. ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆಯಡಿ ಈ ಸೌಲಭ್ಯ ಸಿಗಲಿದೆ. ಈ ಸೌಲಭ್ಯ ದೇಶದ ಎಲ್ಲಾ ರೈತರಿಗೆ ಅನ್ವಯವಾಗಲಿದೆ. ಈ ರೈತರಿಗೂ ಅನುಕೂಲವಾಗುವ ಹೊಸ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ  ಚಾಲನೆ ನೀಡಿದ್ದಾರೆ.

ಪಿಎಂ ಕಿಸಾನ್ ಟ್ರಾಕ್ಟರ್ ಯೋಜನಯಡಿ ಟ್ರಾಕ್ಟರ್ ಖರೀದಿಸಲು ಇಚ್ಚಿಸುವ ರೈತರು ಆನ್‌ಲೈನ್ ಅಥವಾ ಸಂಬಂಧ ಪಟ್ಟ ಸ್ಛಳೀಯ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅರ್ಹ ರೈತರು ಟ್ರಾಕ್ಟರ್ ಬೆಲೆಯ ಅರ್ಧದಷ್ಟು ಮಾತ್ರ ಪಾವತಿ ಮಾಡಿದರೆ ಸಾಕು. ಇನ್ನುಳಿದ ಅರ್ಧದಷ್ಟು ಹಣವನ್ನು ಕೇಂದ್ರ ಸರ್ಕಾರ ಪಾವತಿಸಲಿದೆ.

ಉಕ್ರೇನ್ ಯುದ್ಧದಿಂದ ಭಾರತದ ಕೃಷಿ ಆದಾಯ ಹೆಚ್ಚಳ: ಟ್ರ್ಯಾಕ್ಟರ್‌ಗಳಿಗೆ ಭಾರೀ ಬೇಡಿಕೆ

ಶೇಕಡಾ 50 ರಷ್ಟು ಸಬ್ಸಡಿ ಇರುವುದರಿಂದ ರೈತರು ಅರ್ಧದಷ್ಟು ಹಣ ಪಾವತಿಸಿದರೆ ಟ್ರಾಕ್ಟರ್ ಲಭ್ಯವಾಗಲಿದೆ. ಈ ಅರ್ಧ ಹಣಪಾವತಿಗೂ ಸಾಲ ಸೌಲಭ್ಯವಿದೆ. ಕೆಲ ರಾಜ್ಯಗಳು ಕೇಂದ್ರ ಸರ್ಕಾರದ ಸಬ್ಸಿಡಿ ಜೊತೆಗೆ ರಾಜ್ಯ ಸರ್ಕಾರಗಳು ಸಬ್ಸಿಡಿ ಘೋಷಿಸಿದೆ. ಹರ್ಯಾಣ,ಜಾರ್ಖಂಡ್ ಸೇರಿದಂತೆ ಕೆಲ ರಾಜ್ಯಗಳಲ್ಲಿ ಒಟ್ಟು  ಸಬ್ಸಡಿ ಗರಿಷ್ಠ ಶೇಕಡಾ 80 ರಷ್ಟಾಗಲಿದೆ.

ಕೇಂದ್ರ ಸರ್ಕಾರದ ಸಬ್ಸಿಡಿ ಯೋಜನೆಯಡಿ ಟ್ರಾಕ್ಟರ್ ಪಡೆಯಲು ಅರ್ಜಿ ಭರ್ತಿ ಮಾಡಬೇಕು. ಈ ಅರ್ಜಿಯಲ್ಲಿ ಕೆಲ ನಿಬಂಧನೆಗಳಿವೆ. ಅರ್ಹರನ್ನು ಪರಿಶೀಲಿಸಿ ಸರ್ಕಾರ ಸಬ್ಸಡಿ ನೀಡಲಿದೆ.

ಅರ್ಜಿದಾರನ್ನು ಭಾರತೀಯ ನಾಗರೀಕರನಾಗಿರಬೇಕು
ಅರ್ಜಿದಾರನ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು ಹಾಗೂ 60 ವರ್ಷದೊಳಗಿರಬೇಕು
ಅರ್ಜಿದಾರನ ಕುಟುಂಬದ ಆದಾಯ ವಾರ್ಷಿಕ 1.5 ಲಕ್ಷಕ್ಕಿಂತ ಮೀರಬಾರದು
ಅರ್ಜಿದಾರ ಸಣ್ಣ ರೈತರ ಮಾನದಂಡ ಅನ್ವಯವಾಗಬೇಕು
ಟ್ರಾಕ್ಟರ್ ಖರೀದಿಸುವ ರೈತ ತನ್ನ ಹೆಸರಿನಲ್ಲಿ ಕೃಷಿ ಭೂಮಿ ಹೊಂದಿರಬೇಕು
ಅರ್ಜಿದಾರ ಇತರ ಯಾವುದೇ ಸಬ್ಸಿಡಿ ಆಧಾರಿತ ಯೋಜನೆಯ ಫಲಾನುಭವಿಯಾಗಿರಬಾರದು
ಟ್ರಾಕ್ಟರ್‌ಗೆ ಅರ್ಜಿ ಹಾಕುವ ರೈತ ಕಳೆದ 7 ವರ್ಷದಲ್ಲಿ ಯಾವುದೇ ಟ್ರಾಕ್ಟರ್ ಖರೀದಿಸಿರಬಾರದು

ಮಹೀಂದ್ರಾದ ಸ್ವರಾಜ್‌ ಟ್ರಾಕ್ಟರ್‌ ಓಡಿಸಿದ ವಧು: ಫುಲ್ ಖುಷಿಯಾದ ಆನಂದ್ ಮಹೀಂದ್ರಾ

ಸಬ್ಸಿಡಿ ಟ್ರಾಕ್ಟರ್ ಪಡೆಯಲು ಬೇಕಾದ ದಾಖಲೆ ಪತ್ರ
ಆಧಾರ್ ಕಾರ್ಡ್
ಬ್ಯಾಂಕ್ ಖಾತೆ ವಿವರ
ಗುರುತಿನ ಚೀಟಿ ದಾಖಲೆ (ಪ್ಯಾನ್ ಕಾರ್ಡ್, ಮತದಾರನ ಚೀಟಿ, ಪಾಸ್‌ಪೋರ್ಟ್, ಡ್ರೈವಿಂಗ್ ಲೆಸೆನ್ಸ್, ಇತ್ಯಾದಿ ಸೇರಿದಂತೆ)
ಭಾವಚಿತ್ರ (ಪಾಸ್‌ಪೋರ್ಟ್ ಸೈಜ್ ಫೋಟೋ)
ಭೂಮಿಯ ವಿವರ, ದಾಖಲೆ ಪತ್ರ

ಅರ್ಜಿಯಲ್ಲಿ ರೈತ ತುಂಬಬೇಕಾದ ಮಾಹಿತಿ
ಅರ್ಜಿದಾರನ ಹೆಸರು(ಆಧಾರ್ ಕಾರ್ಡ್‌ನಲ್ಲಿರುವ ಹೆಸರು)
ಅರ್ಜಿದಾರನ ಹುಟ್ಟಿದ ದಿನಾಂಕ
ಲಿಂಗ
ತಂದೆ ಅಥವಾ ಪತಿಯ ಹೆಸರು
ಅರ್ಜಿದಾರನ ವಿಳಾಸ, ಜಿಲ್ಲೆ, ತಾಲೂಕು, ಹೊಬಳಿ
ಜಾತಿ ವಿವರ
ಅರ್ಜಿದಾರನ ಮೊಬೈಲ್ ಸಂಖ್ಯೆ

Latest Videos
Follow Us:
Download App:
  • android
  • ios