* ಭಾರತಕ್ಕೆ  75 ನೇ ಸ್ವಾತಂತ್ರ್ಯೋವ ಸಂಭ್ರಮ* ಐತಿಹಾಸಿಕ ಕೆಂಪುಕೋಟೆಯಿಂದ ಮೋದಿ ಭಾಷಣ, ಈ ಬಾರಿ ವಿಶೇಷ* ಸ್ವಾತಂತ್ರ್ಯೋತ್ಸವದ ಮೋದಿ ಭಾಷಣಕ್ಕೆ ನಿಮ್ಮ ಯೋಚನೆ, ಸಲಹೆಗಳಿಗೆ ಅವಕಾಶ

ನವದೆಹಲಿ(ಜು.30): ಭಾರತ ಈ ಬಾರಿ ತನ್ನ 75 ನೇ ಸ್ವಾತಂತ್ರ್ಯೋವವನ್ನು ಆಚರಿಸುತ್ತಿದೆ. ಈ ಬಾರಿ ಪ್ರಧಾನಿ ಮೋದಿ ಕೆಂಪು ಕೋಟೆಯಿಂದ ದೇಶವನ್ನುದ್ದೆಶಿಸಿ ಮಾಡಲಿರುವ ಭಾಷಣ ಹೊಸದೊಂದು ವಿಚಾರಕ್ಕೆ ಸಾಕ್ಷಿಯಾಗಲಿದೆ. 

Scroll to load tweet…

ಹೌದು ಈ ಬಾರಿ ದೇಶದ ಜನರ ಸಲಹೆ ಹಾಗೂ ಆಲೋಚನೆಗಳನ್ನು ಪ್ರಧಾನಿಯವರ ಭಾಷಣದಲ್ಲಿ ಸೇರಿಸಲು ಯೋಚಿಸಲಾಗಿದ್ದು, ಜನಸಾಮಾನ್ಯರಿಗೆ ಸಲಹೆ ನೀಡುವಂತೆ ಕರೆ ಕೊಡಲಾಗಿದೆ. ಈ ನಿಟ್ಟಿನಲ್ಲಿ PMO ಜನರಿಂದ ಆಗಸ್ಟ್ 14, ರಾತ್ರಿ 11.45 ರವರೆಗೆ ಸಲಹೆ, ಯೋಚನೆಗಳನ್ನು ಸಂಗ್ರಹಿಸಲಿದೆ.

ನಿಮ್ಮ ಸಲಹೆ, ಯೋಚನೆಗಳನ್ನು ಹೀಗೆ ತಿಳಿಸಿ

ಇದಕ್ಕಾಗಿ ನೀವು www.mygov.in ವೆಬ್‌ಸೈಟ್‌ಗೆ ಭೇಟಿ ನೀಡಿ, ಇಲ್ಲಿ Login to Participate ಮೇಲೆ ಕ್ಲಿಕ್ ಮಾಡಿ. ಬಳಿಕ ನೀವು ನಿಮ್ಮ ಸಲಹೆ ಹಾಗೂ ಯೋಚನೆಗಳನ್ನು ತಿಳಿಸಬಹುದು.