ನವದೆಹಲಿ(ಜ.28): ಕೇಂದ್ರ ಸರ್ಕಾರ ಮತ್ತು ನಿಷೇಧಿತ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್(ಎನ್‌ಡಿಎಫ್‌ಬಿ) ನಡುವಿನ ಶಾಂತಿ  ಒಪ್ಪಂದವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.

ಎನ್‌ಡಿಎಫ್‌ಬಿ ಯ ಎಲ್ಲಾ ಬಣಗಳೊಂದಿಗೆ ಕೇಂದ್ರ ಸರ್ಕಾರ ಐತಿಹಾಸಿಕ ‘ಬೋಡೋ ಒಪ್ಪಂದ’ ಮಾಡಿಕೊಂಡಿದೆ. ಗೃಹ ಸಚಿವ ಅಮಿತ್ ಶಾ ಅವರ ತಂಡ ಇದಕ್ಕೆ ಅಭಿನಂದನಾರ್ಹ ಎಂದು ಮೋದಿ ಹೇಳಿದ್ದಾರೆ.

9,400 ಶತ್ರು ಆಸ್ತಿ ಮೇಲೆ ಕಣ್ಣಿಟ್ಟ 'ಚಾಣಕ್ಯ' ಶಾ ನೇತೃತ್ವದ ಸಮಿತಿ!

ಶಾಂತಿ ಒಪ್ಪಂದ ಬೋಡೋ ಜನರ ಬದುಕಿನ ಪರಿವರ್ತನೆಗೆ ಕಾರಣವಾಗಲಿ ಎಂದು ಆಶಿಸಿರುವ ಪ್ರಧಾನಿ ಮೋದಿ, ಶಾಂತಿ, ಸಾಮರಸ್ಯ ಮತ್ತು ಒಗ್ಗಟ್ಟಿನ ಹೊಸ ಉದಯ ಪ್ರಾರಂಭವಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಸಶಸ್ತ್ರ ಪ್ರತಿರೋಧ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದವರು, ಈಗ ಮುಖ್ಯವಾಹಿನಿಗೆ ಪ್ರವೇಶಿಸಿ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಲಿದ್ದಾರೆ ಎಂದು ಪ್ರಧಾನಿ ಮೋದಿ ಹಾರೈಸಿದ್ದಾರೆ.

ಇನ್ನು ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಐತಿಹಾಸಿಕ ಬೋಡೋ ಒಪ್ಪಂದ ಶಾಂತಿಯ ಹೊಸ ಮಾರ್ಗವನ್ನು ತೆರೆದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.