Asianet Suvarna News

ಮೋದಿ 2.0 ಜಗತ್ತಿಡೀ ಹವಾ; ಕೊರೋನಾ ನಿರ್ವಹಣೆಯಲ್ಲಿ ನಂ.1

ಕೊರೋನಾ ವೈರಸ್‌ ಇಡೀ ಜಗತ್ತನ್ನು ಬಾಧಿಸುತ್ತಿದೆ. ಈ ಸಂದರ್ಭದಲ್ಲಿ ಜಗತ್ತಿನ ಮುಂದುವರಿದ ಹಲವು ದೇಶಗಳಿಗೆ ಹೋಲಿಸಿದರೆ ಕೊರೋನಾ ಅಟಾಟೋಪ ಭಾರತದಲ್ಲಿ ನಿಯಂತ್ರಣದಲ್ಲಿದೆ. ಹೀಗಾಗಿ ಇಡೀ ವಿಶ್ವದಲ್ಲಿ ಕೊರೋನಾ ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ ನಾಯಕ ಭಾರತದ ಪ್ರಧಾನಿ ನರೇಂದ್ರ ಮೋದಿ ಎಂದು ಅಮೆರಿಕ ಮೂಲದ ‘ಮಾರ್ನಿಂಗ್‌ ಕನ್ಸಲ್ಟ್‌’ ಸಂಸ್ಥೆ ನಡೆಸಿದ ಸಮೀಕ್ಷೆ ಇತ್ತೀಚೆಗೆ ಹೇಳಿದೆ. 

PM modi govt no 1 position in Covid 19 Maintenance
Author
Bengaluru, First Published May 30, 2020, 5:42 PM IST
  • Facebook
  • Twitter
  • Whatsapp

ಬೆಂಗಳೂರು (ಮೇ. 30): ಕೊರೋನಾ ವೈರಸ್‌ ಇಡೀ ಜಗತ್ತನ್ನು ಬಾಧಿಸುತ್ತಿದೆ. ಈ ಸಂದರ್ಭದಲ್ಲಿ ಜಗತ್ತಿನ ಮುಂದುವರಿದ ಹಲವು ದೇಶಗಳಿಗೆ ಹೋಲಿಸಿದರೆ ಕೊರೋನಾ ಅಟಾಟೋಪ ಭಾರತದಲ್ಲಿ ನಿಯಂತ್ರಣದಲ್ಲಿದೆ. ಹೀಗಾಗಿ ಇಡೀ ವಿಶ್ವದಲ್ಲಿ ಕೊರೋನಾ ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ ನಾಯಕ ಭಾರತದ ಪ್ರಧಾನಿ ನರೇಂದ್ರ ಮೋದಿ ಎಂದು ಅಮೆರಿಕ ಮೂಲದ ‘ಮಾರ್ನಿಂಗ್‌ ಕನ್ಸಲ್ಟ್‌’ ಸಂಸ್ಥೆ ನಡೆಸಿದ ಸಮೀಕ್ಷೆ ಇತ್ತೀಚೆಗೆ ಹೇಳಿದೆ.

ಈ ಸಮೀಕ್ಷೆಯಲ್ಲಿ ಮೋದಿ ಅವರು 68 ರೇಟಿಂಗ್‌ ಪಡೆಯುವ ಮೂಲಕ ಇತರ ರಾಷ್ಟ್ರಗಳ ನಾಯಕರನ್ನು ಹಿಂದಿಕ್ಕಿ ನಂ.1 ಸ್ಥಾನ ಪಡೆದಿದ್ದಾರೆ. ನಂತರದ ಸ್ಥಾನದಲ್ಲಿ ಮೆಕ್ಸಿಕೋ ಅಧ್ಯಕ್ಷ ಆ್ಯಂಡ್ರೂಸ್‌ ಮ್ಯಾನ್ಯುಯೆಲ್‌ ಮತ್ತು ಮೂರನೇ ಸ್ಥಾನದಲ್ಲಿ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಇದ್ದಾರೆ.

ಜಗತ್ತೇ ಮೆಚ್ಚುವಂತೆ ದೇಶ ಮುನ್ನಡೆಸುತ್ತಿರುವ ಮೋದಿ: ಪ್ರಧಾನಿ ಬಗ್ಗೆ ಮುನಿಸ್ವಾಮಿ ಮಾತು

ಟೆಕ್ಸಾಸ್‌ನಲ್ಲಿ ‘ಹೌಡಿ ಮೋದಿ’ ಅಭೂತಪೂರ್ವ ಸಮಾವೇಶ

ಸೆಪ್ಟೆಂಬರ್‌ 22, 2019ರಂದು ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಟೆಕ್ಸಾಸ್‌ ರಾಜ್ಯದ ಹೂಸ್ಟನ್‌ನಲ್ಲಿ ಅನಿವಾಸಿ ಭಾರತೀಯರು ಆಯೋಜಿಸಿದ್ದ ‘ಹೌಡಿ ಮೋದಿ’ (ಹೌ ಡು ಯು ಡೂ) (ಹೇಗಿದ್ದೀರಿ) ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ವೇಳೆ ಅಲ್ಲಿ 50,000 ಜನರು ಭಾಗಿಯಾಗಿದ್ದರು. ವಿದೇಶಿ ಚುನಾಯಿತ ಪ್ರತಿನಿಧಿಯೊಬ್ಬರು ಭಾಗಿಯಾದ ಸಮಾವೇಶಕ್ಕೆ ಅಮೆರಿಕದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಜನರು ಸೇರಿದ್ದು ಅದೇ ಮೊದಲು ಎಂಬುದು ಮೋದಿ ಅವರ ಹೆಗ್ಗಳಿಕೆ.

ಅಷ್ಟೇ ಅಲ್ಲದೆ, ಈ ಕಾರ‍್ಯಕ್ರಮದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೂಡ ಭಾಗಿಯಾಗಿದ್ದು ಮತ್ತೊಂದು ವಿಶೇಷತೆ. ವಿದೇಶಿ ನಾಯಕರೊಬ್ಬರ ರಾರ‍ಯಲಿಯಲ್ಲಿ ಮೊಟ್ಟಮೊದಲ ಬಾರಿಗೆ ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷರು ಪಾಲ್ಗೊಂಡು, ಉಭಯ ದೇಶಗಳ ನಾಯಕರು ಒಂದೇ ವೇದಿಕೆ ಹಂಚಿಕೊಂಡಿದ್ದರು. ಹಾಗಾಗಿ ಹೌಡಿ ಮೋದಿ ಕಾರ‍್ಯಕ್ರಮ ಎರಡೆರಡು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಈ ಸಮಾವೇಶದಲ್ಲಿ ಜನರು ಸೇರಿದ್ದು ನೋಡಿ ಮೋದಿಯವರ ಜನಪ್ರಿಯತೆ ಬಗ್ಗೆ ಟ್ರಂಪ್‌ ಬೆರಗಾಗಿದ್ದರು.

ಭಾರತದಲ್ಲಿ ‘ನಮಸ್ತೆ ಟ್ರಂಪ್‌’ ದೊಡ್ಡಣ್ಣನಿಗೆ ಐತಿಹಾಸಿಕ ಆತಿಥ್ಯ

ಅಮೆರಿಕದಲ್ಲಿ ‘ಹೌಡಿ ಮೋದಿ’ ಕಾರ‍್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ದೊರೆತಿತ್ತು. ಅದೇ ರೀತಿ ‘ನಮಸ್ತೆ ಟ್ರಂಪ್‌’ ಹೆಸರಿನಲ್ಲಿ ಈ ವರ್ಷ ಫೆಬ್ರವರಿ 24ರಂದು ಗುಜರಾತಿನ ಅಹಮದಾಬಾದಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಆಹ್ವಾನಿಸಲಾಗಿತ್ತು. ಅಮೆರಿಕದ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಪತ್ನಿ ಮೆಲಾನಿಯಾ ಟ್ರಂಪ್‌ ಜೊತೆ ಭಾರತಕ್ಕೆ ಆಗಮಿಸಿದ್ದ ಡೊನಾಲ್ಡ್‌ ಟ್ರಂಪ್‌ ನೂತನವಾಗಿ ನಿರ್ಮಿಸಲಾಗಿದ್ದ ಜಗತ್ತಿನ ಅತಿ ದೊಡ್ಡ ಮೊಟೆರಾ ಕ್ರೀಡಾಂಗಣವನ್ನು ಉದ್ಘಾಟಿಸಿದ್ದರು.

ಸಂಸದರ ಜತೆಗೆ ಮೋದಿ ಒಡನಾಟ ಬೆಸ್ಟ್‌, ಖುದ್ದು ಭೇಟಿ ಮಾಡ್ಬೇಕಂದ್ರೆ ಮನೆಗೇ ಕರೀತಾರೆ ಪ್ರಧಾನಿ

ಈ ವೇಳೆ 1.25 ಲಕ್ಷ ಜನಸ್ತೋಮ ನೆರೆದಿತ್ತು. ಮೊಟೆರಾ ಕ್ರೀಡಾಂಗಣದಲ್ಲಿ ನಿಂತು ಟ್ರಂಪ್‌ ಭಾರತವನ್ನು ಹಾಡಿ ಹೊಗಳಿದ್ದರು. ಭಾರತದ ಜೊತೆ 21,000 ಕೋಟಿ ರು. ಮೊತ್ತದ ರಕ್ಷಣಾ ಒಪ್ಪಂದ, ವ್ಯಾಪಾರ ಒಡಂಬಡಿಕೆಯನ್ನೂ ಘೋಷಿಸಿದರು. ಈ ಭೇಟಿ ಭಾರತ-ಅಮೆರಿಕ ಬಾಂಧವ್ಯವನ್ನು ಗಟ್ಟಿಮಾಡಿದ್ದು ಮಾತ್ರವಲ್ಲದೆ, ನರೇಂದ್ರ ಮೋದಿ ಅವರ ವರ್ಚಸ್ಸನ್ನೂ ಜಾಗತಿಕ ಮಟ್ಟದಲ್ಲಿ ಹೆಚ್ಚಿಸಿತ್ತು.

ದೇಶದ ಸಾರ್ವಕಾಲಿಕ ನಂ.1 ಪ್ರಧಾನಿ, 2024 ರಲ್ಲೂ ಮತ್ತೆ ಮೋದಿ ಅಧಿಕಾರಕ್ಕೆ

2019ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಗಳಿಸುವ ಮೂಲಕ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರುವಲ್ಲಿ ನರೇಂದ್ರ ಮೋದಿ ಯಶಸ್ವಿಯಾಗಿದ್ದರು. ನಂತರವೂ ಅವರ ಜನಪ್ರಿಯತೆ ಕುಂದಲಿಲ್ಲ. ಇಂಡಿಯಾ ಟು ಡೇ-ಕಾರ್ವಿ ಇನ್‌ಸೈಟ್ಸ್‌ ದೇಶಾದ್ಯಂತ ನಡೆಸಿದ ಮೂಡ್‌ ಆಫ್‌ ದಿ ನೇಷನ್‌ ಸಮೀಕ್ಷೆಯಲ್ಲಿ ಮೋದಿ ಈ ದೇಶದ ನಂ.1 ಜನಪ್ರಿಯ ನಾಯಕ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜ.23, 2020ರಂದು ಪ್ರಕಟವಾದ ಈ ವರದಿಯಲ್ಲಿ 68% ಜನ ನಮ್ಮ ದೇಶದ ಜನಪ್ರಿಯ ನಾಯಕ ನರೇಂದ್ರ ಮೋದಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೇ ವೇಳೆ ದೇಶ ಕಂಡ ಸಾರ್ವಕಾಲಿಕ ಅತ್ಯುತ್ತಮ ಪ್ರಧಾನಿ ಪಟ್ಟಿಯಲ್ಲೂ ಪ್ರಧಾನಿ ನರೇಂದ್ರ ಮೋದಿ ನಂ.1 ಸ್ಥಾನದಲ್ಲಿದ್ದರೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ 2ನೇ ಸ್ಥಾನದಲ್ಲಿದ್ದಾರೆ. ಈ ಸಮೀಕ್ಷೆಯ ಇನ್ನೊಂದು ವಿಶೇಷ ಎಂದರೆ, 2024ರಲ್ಲೂ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದೆ. ದೇಶದ 97 ಲೋಕಸಭಾ ಕ್ಷೇತ್ರ ವ್ಯಾಪ್ತಿಯ 194 ವಿಧಾನಸಭಾ ಕ್ಷೇತ್ರಗಳಲ್ಲಿನ 12,141 ಜನರನ್ನು ಸಂದರ್ಶಿಸಿ ಈ ಸಮೀಕ್ಷೆ ನಡೆಸಲಾಗಿತ್ತು.

ಎಫ್‌ಬಿಯಲ್ಲಿ ಜಗತ್ತಿಗೇ ನಂ.1

ಜಾಗತಿಕ ನಾಯಕರ ಪೈಕಿ ಪ್ರಧಾನಿ ನರೇಂದ್ರ ಮೋದಿ 2018ರಿಂದಲೂ ಫೇಸ್‌ಬುಕ್‌ನಲ್ಲಿ ನಂ.1 ಜನಪ್ರಿಯ ನಾಯಕ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ ಎಂದು ಬಿಸಿಡಬ್ಲ್ಯು ಸಂಸ್ಥೆ ಕೈಗೊಂಡ ‘ಫೇಸ್‌ಬುಕ್‌ನಲ್ಲಿ ಜಾಗತಿಕ ನಾಯಕರು-2020’ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಈ ಸಮೀಕ್ಷೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎರಡನೇ ಸ್ಥಾನದಲ್ಲಿ, ಜೋರ್ಡನ್‌ ರಾಣಿ ರಾನಿಯಾ ಮೂರನೇ ಸ್ಥಾನದಲ್ಲಿ ಇದ್ದಾರೆ.

ಕಳೆದ 12 ತಿಂಗಳಲ್ಲಿ ತಮ್ಮ ಫೇಸ್‌ಬುಕ್‌ ಪೇಜಿಗೆ ಅತಿ ಹೆಚ್ಚು ಲೈಕ್ಸ್‌, ಕಾಮೆಂಟ್‌, ಶೇರ್‌ ಪಡೆಯುವ ಜಾಗತಿಕ ನಾಯಕರ ಪೈಕಿ ಟ್ರಂಪ್‌ ಮೊದಲನೇ ಸ್ಥಾನದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 8.4 ಕೋಟಿ ಪ್ರತಿಕ್ರಿಯೆ ಪಡೆಯುವ ಮೂಲಕ ಮೂರನೇ ಸ್ಥಾನ ಪಡೆದಿದ್ದಾರೆ. ಜಾಗತಿಕ ನಾಯಕರ 721 ಪೇಜ್‌ಗಳನ್ನು ಈ ಸಮೀಕ್ಷೆಯಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿತ್ತು. ಮೋದಿ ಫೇಸ್‌ಬುಕ್‌ನಲ್ಲಿ 4,56,31,554 ಫಾಲೋವ​ರ್‍ಸ್ಗಳನ್ನು ಹೊಂದಿದ್ದಾರೆ.

ಮೋದಿಯದ್ದು ಜನಮೆಚ್ಚಿದ, ಜಗಮೆಚ್ಚಿದ ಆಡಳಿತ; ಸಂಸದ ನಳಿನ್‌ ಕುಮಾರ್‌ ಕಟೀಲ್‌

ಜಾಲತಾಣಗಳಲ್ಲಿ ಹೀರೋ

ಸಾಮಾಜಿಕ ಜಾಲತಾಣಗಳನ್ನು ಅತ್ಯಂತ ಜಾಣತನದಿಂದ ಬಳಸುತ್ತಿರುವ ಜಗತ್ತಿನ ನಂ.1 ನಾಯಕ ಪ್ರಧಾನಿ ನರೇಂದ್ರ ಮೋದಿ. ಮೋದಿ ಕೇವಲ ಫೇಸ್‌ಬುಕ್‌, ಟ್ವೀಟರ್‌, ಇನ್‌ಸ್ಟಾಗ್ರಾಂ, ಯುಟ್ಯೂಬ್‌ನಲ್ಲಿ ಮಾತ್ರ ಸಕ್ರಿಯವಾಗಿರದೆ ಡಿಸ್ಕವರಿ ನೆಟ್‌ವರ್ಕ್, ವೀಬೋ, ಲಿಂಕ್‌್ಡಇನ್‌, ಪಿಂಟೆರೆಸ್ಟ್‌, ಬ್ಲಾಗಿಂಗ್‌ ಸೈಟ್‌ ಟಂಬ್ಲರ್‌, ಫೋಟೋ ಶೇರಿಂಗ್‌ ಸೈಟ್‌ ಫ್ಲಿಕರ್‌ ಮತ್ತು ಶೇರ್‌ಚಾಟ್‌ನಲ್ಲೂ ಸಕ್ರಿಯರಾಗಿದ್ದಾರೆ.

ಟ್ವೀಟರ್‌ನಲ್ಲಿ ಅತಿ ಹೆಚ್ಚು ಫಾಲೋವ​ರ್‍ಸ್ಗಳನ್ನು ಹೊಂದಿರುವ ರಾಜಕೀಯ ನಾಯಕರ ಪೈಕಿ ಮೋದಿ ಮೂರನೇ ಸ್ಥಾನದಲ್ಲಿದ್ದಾರೆ. 5,33,61,266 ಜನರು ಮೋದಿ ಅವರನ್ನು ಟ್ವೀಟರ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ. ಅವರ ಒಂದು ಟ್ವೀಟ್‌ ಸರಾಸರಿ 1,584 ರೀಟ್ವೀಟ್‌, 8,019 ಲೈಕ್ಸ್‌ ಪಡೆಯುತ್ತದೆ. ಇನ್ನು ಫೇಸ್‌ಬುಕ್‌ನಲ್ಲಿ 4,56,31,554 ಫಾಲೋವ​ರ್‍ಸ್, ಇನ್‌ಸ್ಟಾದಲ್ಲಿ 3.5 ಕೋಟಿ ಹಿಂಬಾಲಕರನ್ನು ಮೋದಿ ಹೊಂದಿದ್ದಾರೆ.

ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ

ಫೋಬ್ಸ್‌ರ್‍ ಪತ್ರಿಕೆ ಪ್ರಕಟಿಸಿದ 2020ರ ಜಗತ್ತಿನ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ 9ನೇ ಸ್ಥಾನ ಪಡೆದಿದ್ದಾರೆ. ಉದ್ದಿಮೆ, ರಾಜಕೀಯ ಹೀಗೆ ವಿವಿಧ ಕ್ಷೇತ್ರಗಳ ಜನರು ಈ ಸಾಲಿನಲ್ಲಿ ಸ್ಥಾನ ಪಡೆದಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೊದಲ ಎರಡು ಸ್ಥಾನದಲ್ಲಿದ್ದಾರೆ. ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಇರುವ ಭಾರತದಲ್ಲಿ ಎರಡನೇ ಬಾರಿಗೆ ಪ್ರಧಾನಿಯಾಗಿರುವ ಮೋದಿ, ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ನಾಯಕರಾಗುತ್ತಿದ್ದಾರೆ, ಹವಾಮಾನ ಬದಲಾವಣೆಯ ವಿರುದ್ಧದ ಅಂತಾರಾಷ್ಟ್ರೀಯ ಸಮಾವೇಶಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಫೋಬ್ಸ್‌ರ್‍ ಬಣ್ಣಿಸಿದೆ.

ಅಮೆರಿಕ ವೈಟ್‌ ಹೌಸ್‌ ಫಾಲೋ ಮಾಡಿದ ಏಕೈಕ ವಿದೇಶಿ ನಾಯಕ!

ನರೇಂದ್ರ ಮೋದಿ ಅವರಿಗೆ ಟ್ವೀಟರ್‌ನಲ್ಲಿ ಕೋಟ್ಯಂತರ ಫಾಲೋವ​ರ್‍ಸ್ಗಳಿದ್ದಾರೆ. ಆದರೆ ಇತ್ತೀಚೆಗೆ ಟ್ರಂಪ್‌ ಭೇಟಿಗೂ ಮುನ್ನ ಅಮೆರಿಕದ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತ ಭವನ ಕೆಲ ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಅವರನ್ನು ಟ್ವೀಟರ್‌ನಲ್ಲಿ ಫಾಲೋ ಮಾಡಿತ್ತು. ಇದು ವಿಶೇಷ, ಏಕೆಂದರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ… ಟ್ರಂಪ್‌ ಮತ್ತು ಅಮೆರಿಕ ಸರ್ಕಾರಕ್ಕೆ ಸೇರಿದ 13 ಜನರನ್ನು ಮಾತ್ರ ವೈಟ್‌ಹೌಸ್‌ ಟ್ವೀಟರ್‌ನಲ್ಲಿ ಹಿಂಬಾಲಿಸುತ್ತಿದೆ. ಈ ಪಟ್ಟಿಯಲ್ಲಿ ಪ್ರಧಾನಿ ಮೋದಿ ಸಹ ಕೆಲ ದಿನಗಳ ಕಾಲ ಸೇರಿದ್ದು, ವೈಟ್‌ಹೌಸ್‌ ಫಾಲೋ ಮಾಡಿದ ಜಗತ್ತಿನ ಏಕೈಕ ಪ್ರಧಾನಿ ಎಂಬ ಇತಿಹಾಸ ನಿರ್ಮಿಸಿದೆ.

ಮೋದಿ ಮುಡಿಗೆ ಅತ್ಯುನ್ನತ ಪ್ರಶಸ್ತಿಗಳು

ಮಾಲ್ಡೀವ್‌್ಸ ದೇಶ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೂ.8, 2019ರಂದು ಮಾಲ್ಡೀವ್‌್ಸನ ಅತ್ಯುನ್ನತ ಪ್ರಶಸ್ತಿಯಾದ ‘ರೂಲ್‌ ಆಫ್‌ ನಿಶಾನ್‌ ಇಜುದ್ದೀನ್‌’ ನೀಡಿ ಗೌರವಿಸಿದೆ. ಈ ಪ್ರಶಸ್ತಿ ಪಡೆಯುತ್ತಿರುವ 7ನೇ ವಿದೇಶಿ ವ್ಯಕ್ತಿ ಪ್ರಧಾನಿ ಮೋದಿ. ಹಾಗೆಯೇ ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ಸ್ವಚ್ಛ ಭಾರತದ ರೂವಾರಿಯಾಗಿರುವ ಮೋದಿ ಅವರಿಗೆ ಬಿಲ್‌ ಆ್ಯಂಡ್‌ ಮೆಲಿಂಡಾ ಗೇಟ್ಸ್‌ ಫೌಂಡೇಶನ್‌ ‘ಗ್ಲೋಬಲ್‌ ಗೋಲ್‌ಕೀಪರ್‌’ (ಜಾಗತಿಕ ಗುರಿ ಸಾಧಕ) ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಜೊತೆಗೆ ಆಗಸ್ಟ್‌ 2019ರಲ್ಲಿ ಬಹ್ರೇನ್‌ ದೇಶ ‘ಕಿಂಗ್‌ ಹಮಾದ ಆರ್ಡರ್‌ ಆಫ್‌ ರಿನೈಸಾನ್ಸ್‌’, ಯುಎಇ ದೇಶ ‘ಆರ್ಡರ್‌ ಆಫ್‌ ಜಾಯೇದ್‌’ ಪ್ರಶಸ್ತಿ ನೀಡಿ ಗೌರವಿಸಿವೆ.

Follow Us:
Download App:
  • android
  • ios