ನವದೆಹಲಿ(ಫೆ.11): ಭಾರತದ ಪ್ರಧಾನಿ ನರೇಂದ್ರ ಮೋದಿ ಇದೀಗ ಕೆನಡಾ ದೇಶಕ್ಕೂ ಲಸಿಕೆ ವಿತರಿಸುವ ಭರವಸೆ ನೀಡಿದ್ದಾರೆ.

ಲಸಿಕೆ ಪೂರೈಸುವಂತೆ ಕರೆ ಮಾಡಿದ ಕೆನಡಾ ಅಧ್ಯಕ್ಷ ಜಸ್ಟಿನ್‌ ಟ್ರುಡೋ ಅವರ ಕೋರಿಕೆ ಪುರಸ್ಕರಿಸಿರುವ ಮೋದಿ, ‘ಕೋವಿಡ್‌ ಲಸಿಕೆಯನ್ನು ಕೆನಡಾಗೆ ಪೂರೈಸಲು ಭಾರತ ತನ್ನ ಕೈಲಾದಷ್ಟುಪ್ರಯತ್ನ ಮಾಡುತ್ತದೆ’ ಎಂದಿದ್ದಾರೆ.

ಭಾರತದ ಕೃಷಿ ಕಾಯ್ದೆ ವಿರುದ್ಧ ದೆಹಲಿಯಲ್ಲಿನ ರೈತರ ಪ್ರತಿಭಟನೆಯನ್ನು ಟ್ರುಡೋ ಬೆಂಬಲಿಸಿದ್ದು ಇಲ್ಲಿ ಗಮನಾರ್ಹ.

ಭಾರತ ಈವರೆಗೆ 25 ದೇಶಗಳಿಗೆ 2.4 ಕೋಟಿ ಡೋಸ್‌ ಲಸಿಕೆ ನೀಡಿದೆ. ಕೆನಡಾದಲ್ಲಿ ಈವರೆಗೆ 8,12,848 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 20,984 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.