Asianet Suvarna News Asianet Suvarna News

ಸುಧರ್ಮ ಸಂಪಾದಕ ಸಂಪತ್‌ ಕುಮಾರ್‌ ನಿಧನಕ್ಕೆ ಸಂಸ್ಕೃತದಲ್ಲೇ ಮೋದಿ ಶ್ರದ್ಧಾಂಜಲಿ

  • ಸುಧರ್ಮ ಸಂಪಾದಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಕೆ.ವಿ. ಸಂಪತ್‌ಕುಮಾರ್‌ ನಿಧನಕ್ಕೆ ಮೋದಿ ಸಂತಾಪ
  • ಸಂಸ್ಕೃತದಲ್ಲಿಯೇ ಪತ್ರ ಬರೆದು ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ,
PM Modi condoled the demise of Sudharma editor Sampath Kumar in his sanskrit letter dpl
Author
Bangalore, First Published Jul 3, 2021, 10:00 AM IST

ದೇಶದ ಏಕೈಕ ಸಂಸ್ಕೃತ ಪತ್ರಿಕೆಯ ಸಂಪಾದಕ ಕೆ.ವಿ. ಸಂಪತ್‌ ಕುಮಾರ್‌ ಅವರ ನಿಧನಕ್ಕೆ ಪ್ರಾಧಾನಿ ನರೇಂದ್ರ ಮೋದಿ ಸಂಸ್ಕೃತದಲ್ಲಿಯೇ ಪತ್ರ ಬರೆದು ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ಮೋದಿ ಅವರು ಬರೆದ ಸಂಸ್ಕೃತ ಪತ್ರವನ್ನು ಸಿಎಂ ಬಿ.ಎಸ್. ಯಡಿಯೂರಪ್ಪ ಅವರೂ ಶೇರ್ ಮಾಡಿದ್ದಾರೆ.

ಸಂಸ್ಕೃತದಲ್ಲಿ ವಿದುಶಿ ಶ್ರೀಮತಿ ಜಯಲಕ್ಷ್ಮಿಗೆ ಬರೆದ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸುಧರ್ಮ ಸಂಪಾದಕ ಶ್ರೀ ಕೆ.ವಿ. ಸಂಪತ್ ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸಂಸ್ಕೃತದ ಸಂರಕ್ಷಣೆ ಮತ್ತು ಜನಪ್ರಿಯತೆಯಲ್ಲಿ ದಂಪತಿಗಳು ಮಾಡಿದ ಅಸಾಧಾರಣ ಕಾರ್ಯಗಳಿಗಾಗಿ ಪದ್ಮಶ್ರೀ ನೀಡಿ ಅವರನ್ನು ಗೌರವಿಸಲಾಯಿತು ಎಂದು ಸಿಎಂ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ಮೋದಿ ಅವರ ಪತ್ರವನ್ನು ಸೇರಿಸಿದ್ದರು. ಪ್ರಧಾನಿ ಮೋದಿ ಬರೆದ ಸಂಸ್ಕೃತ ಪತ್ರದ ಸಾರ ಹೀಗಿದೆ:

‘ಕೆ.ವಿ. ಸಂಪತ್‌ ಕುಮಾರ್‌ ಜಿ ಅವರ ನಿಧನದ ಸುದ್ದಿ ತಿಳಿದು ತುಂಬಾ ದುಃಖವಾಗಿದೆ. ಈ ಕಷ್ಟದ ಸಮಯದಲ್ಲಿ ಸಂಪತ್‌ ಕುಮಾರ್‌ ಅವರ ಕುಟುಂಬದೊಂದಿಗೆ ಸಂತಾಪವನ್ನು ಹಂಚಿಕೊಳ್ಳುತ್ತೇನೆ. ಸರಳ ಮತ್ತು ಸ್ನೇಹಪರ ವ್ಯಕ್ತಿತ್ವದ ಕೆ.ವಿ. ಸಂಪತ್‌ ಕುಮಾರ್‌ ಜಿ ಅವರ ಜೀವನವು ಸಂಸ್ಕೃತ ಭಾಷೆಯ ಜನಪ್ರಿಯತೆಗಾಗಿ ಸಮರ್ಪಿತವಾಗಿದೆ. ಸಂಸ್ಕೃತವನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವ ಬಗೆಗಿನ ಅವರ ಶ್ರದ್ಧೆ ಸ್ಛೂರ್ತಿ ದಾಯಕವಾಗಿತ್ತು. ಸುಧರ್ಮ ಸಂಸ್ಕೃತ ಪತ್ರಿಕೆಯನ್ನು ನಿಯಮಿತವಾಗಿ ಪ್ರಕಟಿಸಿದ್ದು, ಭಾಷೆಯ ಮೇಲೆ ಅವರಿಗೆ ಇರುವ ಮಿತಿಯಿಲ್ಲಿದ ವಾತ್ಸಲ್ಯಕ್ಕೆ ಸಾಕ್ಷಿಯಾಗಿದೆ. ಸಂಸ್ಕೃತ ಭಾಷೆಯನ್ನು ಜನಪ್ರಿಯಗೊಳಿಸುವ ಮುತ್ತು ಯುವಕರನ್ನು ಸಂಸ್ಕೃತದೊಂದಿಗೆ ಸಂಪರ್ಕಿಸುವ ಅವರ ಅವಿತರ ಪ್ರಯತ್ನಗಳು ಯಾವಾಗಲೂ ನೆನಪಿನಲ್ಲಿ ಉಳಿಯುತ್ತವೆ. ಅವರ ನಿಧನವು ಸಂಸ್ಕೃತ ಮತ್ತು ಪತ್ರಿಕೋದ್ಯಮಕ್ಕೆ ತುಂಬಲಾಗದ ನಷ್ಟವನ್ನು ಉಂಟು ಮಾಡಿದೆ’ ಎಂದಿದ್ದಾರೆ.

ಸಂಸ್ಕೃತ ಪತ್ರಿಕೆ ಸುಧರ್ಮ ಸಂಪಾದಕ ಸಂಪತ್ ಕುಮಾರ್ ಇನ್ನಿಲ್ಲ

‘ಇಂದು ಕೆ.ವಿ. ಸಂಪತ್‌ ಕುಮಾರ್‌ ಅವರು ಈ ಜಗತ್ತಿನಲ್ಲಿ ದೈಹಿಕವಾಗಿ ಇಲ್ಲದಿರಬಹುದು. ಆದರೆ ಅವರ ಮೌಲ್ಯಗಳು ಮತ್ತು ಆದರ್ಶಗಳು ಶಾಶ್ವತವಾಗಿ ಉಳಿದುಕೊಂಡಿರುತ್ತವೆ. ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರು ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳಿಗೆ ದುಃಖವನ್ನು ಶಕ್ತಿಯನ್ನು ನೀಡುವಂತೆ ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಮೋದಿ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ರಾಷ್ಟ್ರದ ಏಕೈಕ ಸಂಸ್ಕೃತ ಪತ್ರಿಕೆ ಸುಧರ್ಮ ಸಂಪಾದಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಕೆ.ವಿ. ಸಂಪತ್‌ಕುಮಾರ್‌ (64) ಅವರು ಇತ್ತೀಚೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. 1970ರಲ್ಲಿ, ಸಂಸ್ಕೃತ ಭಾಷೆಯನ್ನು ಜನಪ್ರಿಯಗೊಳಿಸಲು ಮತ್ತು ಅದನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ವರದರಾಜ ಅಯ್ಯಂಗಾರ್‌ ಸುಧರ್ಮ ಪತ್ರಿಕೆ ಪ್ರಾರಂಭಿಸಿದರು. ಅವರ ನಿಧನದ ನಂತರ ಸಂಪಾದಕ ಹುದ್ದೆ ವಹಿಸಿಕೊಂಡ ಕೆ.ವಿ. ಸಂಪತ್‌ ಕುಮಾರ್‌ ಹಾಗೂ ಅವರ ಪತ್ನಿ ಜಯಲಕ್ಷ್ಮೀ ಅವರು ಪತ್ರಿಕೆಯನ್ನು ಈವರೆಗೆ ಬಹಳ ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದ್ದರು.

Follow Us:
Download App:
  • android
  • ios