ನವ​ದೆ​ಹ​ಲಿ(ಫೆ.24): ಕಳೆದ ಕೆಲ ದಿನ​ಗ​ಳಿಂದ ದೇಶಾ​ದ್ಯಂತ ಕೊರೋನಾ ವೈರಸ್‌ ಹಬ್ಬು​ವಿ​ಕೆ ತೀವ್ರತೆ ಹೆಚ್ಚಾ​ಗಿ​ರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಮಂಗ​ಳ​ವಾರ ತಮ್ಮ ಕಚೇ​ರಿ​ಯಲ್ಲೇ ಉನ್ನ​ತ ಮಟ್ಟದ ಸಭೆಯೊಂದನ್ನು ನಡೆಸಿದರು.

ಕೇಂದ್ರ ಆರೋಗ್ಯ ಇಲಾ​ಖೆಯ ಕಾರ‍್ಯದರ್ಶಿ ರಾಜೇಶ್‌ ಭೂಷಣ್‌ ಸೇರಿ​ದಂತೆ ಕೊರೋನಾ ನಿಯಂತ್ರ​ಣ​ದಲ್ಲಿ ಪಾಲು​ದಾ​ರಿಕೆ ಹೊಂದಿದ ಎಲ್ಲಾ ಇಲಾ​ಖೆಯ ಅಧಿ​ಕಾ​ರಿ​ಗ​ಳು ಈ ದಿಢೀರ್‌ ಸಭೆಯಲ್ಲಿ ಭಾಗಿಯಾಗಿದ್ದರು.

ಈ ವೇಳೆ ಕಳೆದ ಕೆಲ ದಿನ​ಗ​ಳಿಂದ ಮಹಾ​ರಾಷ್ಟ್ರ, ಕೇರಳ, ಮಧ್ಯ​ಪ್ರ​ದೇಶ, ಛತ್ತೀ​ಸ್‌​ಗಢ ಮತ್ತು ಪಂಜಾಬ್‌ ರಾಜ್ಯ​ಗ​ಳಲ್ಲಿ ಅತಿ​ಹೆಚ್ಚು ಕೊರೋನಾ ಪ್ರಕ​ರ​ಣ​ಗಳು ದಾಖ​ಲಾ​ಗು​ತ್ತಿವೆ. ಇದಕ್ಕೆ ಕಾರ​ಣ​ವೇನು? ಈ ಸೋಂಕಿತ​ರನ್ನು ಗುಣ​ಮು​ಖ​ಗೊ​ಳಿಸಿ, ಸೋಂಕು ಹೆಚ್ಚು ತೀವ್ರ​ತೆ​ಯಿಂದ ವ್ಯಾಪಿ​ಸ​ದಂತೆ ಏನೆಲ್ಲಾ ಮುಂದಾ​ಲೋ​ಚನೆ ಕ್ರಮ ಕೈಗೊ​ಳ್ಳ​ಬ​ಹುದು ಎಂಬು​ದರ ಬಗ್ಗೆ ಅಧಿ​ಕಾ​ರಿ​ಗ​ಳಿಂದ ಮೋದಿ ಅವರು ಮಾಹಿತಿ ಪಡೆ​ದಿ​ದ್ದಾರೆ ಎನ್ನ​ಲಾ​ಗಿದೆ.

ಜೊತೆಗೆ ಈ ಸಂಬಂಧ ಹೆಚ್ಚು ನಿಗಾ ವಹಿ​ಸು​ವಂತೆಯೂ ಅಧಿ​ಕಾ​ರಿ​ಗ​ಳಿಗೆ ಸೂಚಿ​ಸ​ಲಾ​ಗಿದೆ ಎನ್ನ​ಲಾ​ಗಿದೆ.