Asianet Suvarna News Asianet Suvarna News

ಗರಿಷ್ಠ ಫಾಲೋವರ್ಸ್ ಪಡೆದ ವಿಶ್ವ ನಾಯಕ, ಮೋದಿ ಟ್ವಿಟರ್ ಹಿಂಬಾಲಕರ ಸಂಖ್ಯೆ 90 ಮಿಲಿಯನ್‌ಗೆ ಏರಿಕೆ!

ಅತ್ಯಂತ ಜನಪ್ರಿಯ ನಾಯಕರ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ಮೊದಲ ಸ್ಥಾನದಲ್ಲಿದ್ದರೆ, ಇದೀಗ ಟ್ವಿಟರ್ ಫಾಲೋವರ್ಸ್ ಸಂಖ್ಯೆಯಲ್ಲೂ ಗರಿಷ್ಠ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಕ್ರಿಯ ರಾಜಕಾರಣಿಗಳ ಪೈಕಿ ಮೋದಿ ಇತರ ಎಲ್ಲಾ ನಾಯಕರಿಗಿಂತ ಮುಂದಿದ್ದಾರೆ.

PM Modi become most fallowed active politician Popular leader cross 90 million twitter Followers ckm
Author
First Published Jul 19, 2023, 11:00 PM IST | Last Updated Jul 19, 2023, 11:00 PM IST

ನವದೆಹಲಿ(ಜು.19) ಪ್ರಧಾನಿ ಮೋದಿ ಜನಪ್ರಿಯತೆ ವಿಶ್ವದ ಮೂಲೆ ಮೂಲೆಗೂ ತಲುಪಿದೆ. ಜನಪ್ರಿಯ ನಾಯಕರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇದೀಗ ಗರಿಷ್ಠ ಟ್ವಿಟರ್ ಹಿಂಬಾಲಕರ ಪಟ್ಟಿ ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ಸಕ್ರಿಯ ರಾಜಕಾರಣಿಯಾಗಿ ಗರಿಷ್ಠ ಹಿಂಬಾಲಕರ ಪಡೆದ ನಾಯಕ ಅನ್ನೋ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದರೆ. ಮೋದಿ ಟ್ವಿಟರ್ ಫಾಲೋವರ್ಸ್ ಸಂಖ್ಯೆ ಬರೋಬ್ಬರಿ 90 ಮಿಲಿಯನ್‌ಗೆ ಏರಿಕೆಯಾಗಿದೆ. ಬ್ರಿಟನ್ ಪ್ರಧಾನಿ ರಿಷಿ ಸುನಕ್, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸೇರಿದಂತೆ ಹಲವು ನಾಯಕರು ಮೋದಿಗಿಂತ ಹಿಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ 90 ಮಿಲಿಯನ್ ಹಿಂಬಾಲಕರನ್ನು ಟ್ವಿಟರ್‌ನಲ್ಲಿ ಪಡೆದಿದ್ದರೆ, ಜೋ ಬೈಡೆನ್ 37.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇನ್ನು ಬ್ರಿಟನ್ ಪ್ರಧಾನಿ ರಿಷಿ ಸುನಕ್ 2 ಮಿಲಿಯನ್ ಹಿಂಬಾಲಕರನ್ನು ಪಡೆದಿದ್ದಾರೆ. ಪ್ರಧಾನಿ ತನ್ನ ಖಾತೆಯಿಂದ 2,589 ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ. ಟ್ವಿಟರ್‌ನಲ್ಲಿ ಗರಿಷ್ಠ ಫಾಲೋವರ್ಸ್ ಪಟ್ಟಿಯಲ್ಲಿ ಟ್ವಿಟರ್ ಮಾಲೀಕ, ಉದ್ಯಮಿ ಎಲಾನ್ ಮಸ್ಕ್ ಮೊದಲ ಸ್ಥಾನದಲ್ಲಿದ್ದಾರೆ. 147 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. 

ಇನ್‌ಸ್ಟಾಗ್ರಾಂನಲ್ಲಿ 100 ಮಿಲಿಯನ್ ಫಾಲೋವರ್ಸ್ ಪಡೆದ ಮೊದಲ ಭಾರತೀಯ ಕೊಹ್ಲಿ!

ಪ್ರಧಾನಿ ಮೋದಿ 2009ರಲ್ಲಿ ಟ್ವಿಟರ್ ಖಾತೆ ತೆರೆದು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ಟ್ವಿಟರ್ ಪ್ರವೇಶಿಸಿದ ಮೋದಿ, ಪ್ರಧಾನಿಯಾದ ಬಳಿಕ ಅಸಂಖ್ಯಾತ ಫಾಲೋವರ್ಸ್ ಪಡೆದುಕೊಂಡಿದ್ದಾರೆ. 2009ರಿಂದ 2010ರ ವೇಳೆಗೆ ಮೋದಿ ಲಕ್ಷಕ್ಕೂ ಅಧಿಕ ಫಾಲೋವರ್ಸ್ ಪಡೆದುಕೊಂಡಿದ್ದರು. 2020ರಲ್ಲಿ ಮೋದಿ ಟ್ವಿಟರ್ ಫಾಲೋವರ್ಸ್ ಸಂಖ್ಯೆ 60 ಮಿಲಿಯನ್. ಇದೀಗ ಮೂರೇ ವರ್ಷಕ್ಕೆ ಫಾಲೋವರ್ಸ್ ಸಂಖ್ಯೆ 90 ಮಿಲಿಯನ್‌ಗೆ ಏರಿಕೆಯಾಗಿದೆ. ಟಾಪ್ 10 ಟ್ವಿಟರ್ ಫಾಲೋವರ್ಸ್ ಲಿಸ್ಟ್‌ನಲ್ಲಿ ಪ್ರಧಾನಿ ಮೋದಿ 8ನೇ ಸ್ಥಾನ ಪಡೆದುಕೊಂಡಿದ್ದಾರೆ. 

ಟ್ವಿಟರ್ ಟಾಪ್ 10 ಫಾಲೋವರ್ಸ್ ಹೊಂದಿರುವ ಗಣ್ಯರು
1. ಎಲಾನ್ ಮಸ್ಕ್: 147 ಮಿಲಿಯನ್
2. ಬಾರಕ್ ಒಬಾಮ: 132.1 ಮಿಲಿಯನ್
3. ಜಸ್ಟಿನ್ ಬೀಬರ್: 112 ಮಿಲಿಯನ್
4. ಕ್ರಿಸ್ಟಿಯಾನೋ ರೋನಾಲ್ಡೋ: 108.9 ಮಿಲಿಯನ್
5. ರಿಹಾನ: 108.2 ಮಿಲಿಯನ್
6. ಕ್ಯಾಟಿ ಪೆರಿ: 107.3 ಮಿಲಿಯನ್
7. ಟೇಯ್ಲರ್ ಸ್ವಿಫ್ಟ್: 93.4 ಮಿಲಿಯನ್
8. ನರೇಂದ್ರ ಮೋದಿ: 90 ಮಿಲಿಯನ್
9. ಡೋನಾಲ್ಡ್ ಟ್ರಂಪ್: 86.6 ಮಿಲಿಯನ್
10. ಲೇಡಿ ಗಾಗ: 84.1 ಮಿಲಿಯನ್

ಜಗತ್ತಿನ ಶೇ.10ರಷ್ಟು ಜನಸಂಖ್ಯೆ ಈಗ ಕ್ರಿಶ್ಚಿಯಾನೋ ರೊನಾಲ್ಡೋ ಫಾಲೋವರ್ಸ್‌!

ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ 9.4 ಮಿಲಿಯನ್ ಫಾಲೋವರ್ಸ್ ಪಡೆದಿದ್ದಾರೆ. ಇನ್ನು ಟ್ವಿಟರ್ ತನ್ನ ಟ್ವಿಟರ್ ಖಾತೆಯಲ್ಲಿ 65.6 ಮಿಲಿಯನ್ ಫಾಲೋವರ್ಸ್ ಹೊಂದಿದೆ. ಟ್ವಿಟರ್‌ಗಿಂತ ನಾಸಾ ಅತೀ ಹೆಚ್ಚು ಫಾಲೋವರ್ಸ್ ಪಡೆದಿದೆ. ನಾಸಾ 74.8 ಮಿಲಿಯನ್ ಫಾಲೋವರ್ಸ್ ಹೊಂದಿದೆ.

 

;

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಟ್ವೀಟರ್‌ನಲ್ಲಿ 2.5 ಕೋಟಿ ಫಾಲೋವರ್ಸ್‌ಗಳನ್ನು ಪಡೆದಿದ್ದಾರೆ. ಈ ಪ್ರಮಾಣ ತಲುಪಿದ ಭಾರತದ ಮೊದಲ ಮುಖ್ಯಮಂತ್ರಿ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಅಪರಾಧಗಳ ವಿರುದ್ಧ ತಮ್ಮ ಕಠಿಣ ನಿಲುವು ಮತ್ತು ನಿರ್ದಾಕ್ಷಿಣ್ಯ ಕ್ರಮಕ್ಕೆ ದೇಶದಲ್ಲೇ ‘ಬುಲ್ಡೋಜರ್‌ ಬಾಬಾ’ ಎಂದು ಹೆಸರಾಗಿರುವ ಯೋಗಿ 2017ರಲ್ಲಿ ಮೊದಲ ಬಾರಿಗೆ ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ್ದರು. 2015ರಲ್ಲಿ ಯೋಗಿ ತಮ್ಮ ಟ್ವೀಟರ್‌ ಖಾತೆ ತೆರೆದಿದ್ದು 8 ವರ್ಷಗಳಲ್ಲಿ 2.5 ಕೋಟಿ ಹಿಂಬಾಲಕರ ಪಡೆದಿದ್ದಾರೆ.  
 

Latest Videos
Follow Us:
Download App:
  • android
  • ios