Asianet Suvarna News Asianet Suvarna News

ಗುಲಾಮಗಿರಿಯನ್ನು ಮುರಿದ ಖಾದಿ ವಹಿವಾಟು 1 ಲಕ್ಷ ಕೋಟಿ, ಖಾದಿ ಉತ್ಸವದಲ್ಲಿ ಮೋದಿ ಭಾಷಣ!

ಖಾದಿ ಕೂಡ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖ ಶಕ್ತಿಯಾಗಿತ್ತು. ಖಾದಿ ಬ್ರಿಟಿಷರ ಗುಲಾಮಗಿರಿಯನ್ನು ಅಂದಿನ ಕಾಲದಲ್ಲೇ ಮುರಿದಿತ್ತು. ಇದೀಗ ಅದೇ ಖಾದಿ ಭಾರತದ ಅಭಿವೃದ್ಧಿಯ ಪಥದಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದೆ ಎಂದು ಮೋದಿ ಹೇಳಿದ್ದಾರೆ. ಖಾದಿ ಉತ್ಸವದಲ್ಲಿ ಮೋದಿ ಭಾಷಣ ಹೈಲೈಟ್ಸ್ ಇಲ್ಲಿದೆ. 

PM modi attended Khadi Utsav at Sabarmati Riverfront Spins Charkha ckm
Author
Bengaluru, First Published Aug 27, 2022, 7:54 PM IST

ಸೂರತ್(ಆ.27):  ಇದೇ ಮೊದಲ ಬಾರಿಗೆ ಭಾರತದ ಖಾದಿ ಗ್ರಾಮೋದ್ಯೋಗದ ವಹಿವಾಟು ಒಂದು ಲಕ್ಷ ಕೋಟಿ ರೂಪಾಯಿ ದಾಟಿದೆ. ಇದಕ್ಕೆ ಕಾರಣ ಕಳೆದ 8 ವರ್ಷದಲ್ಲಿ ಭಾರತದಲ್ಲಿ ಖಾದಿ ಮಾರಾಟ ನಾಲ್ಕು ಪಟ್ಟು ಅಧಿಕವಾಗಿದೆ. ಈ ಬೆಳವಣಿಗೆಯಿಂದ ಹಳ್ಳಿ ಹಳ್ಳಿಯಲ್ಲಿ ಆದಾಯ ಹರಿದುಬಂದಿದೆ. ಜನರಿಗೆ ಉದ್ಯೋಗಳು ಸಿಕ್ಕಿದೆ. ಜನರು ಸ್ವಾವಲಂಬಿಗಳಾಗಿದ್ದಾರೆ. ಸರಿ ಸುಮಾರು ಎರಡೂವರೆ ಕೋಟಿ ಉದ್ಯೋಗ ಈ ಖಾದಿ ಉದ್ಯಮದಿಂದ ಸೃಷ್ಟಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಬರಮತಿಯ ರಿವರ್‌ಫ್ರಂಟ್‌ನಲ್ಲಿ ಖಾದಿ ಉತ್ಸವದಲ್ಲಿ ಪಾಲ್ಗೊಂಡು ಮೋದಿ ಮಾತನಾಡಿದರು. ಖಾದಿ ಕೂಡ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖ ಶಕ್ತಿಯಾಗಿತ್ತು. ಖಾದಿ ಬ್ರಿಟಿಷರ ಗುಲಾಮಗಿರಿಯನ್ನು ಅಂದಿನ ಕಾಲದಲ್ಲೇ ಮುರಿದಿತ್ತು. ಇದೀಗ ಅದೇ ಖಾದಿ ಭಾರತದ ಅಭಿವೃದ್ಧಿಯ ಪಥದಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದೆ. ಇಷ್ಟೇ ಅಲ್ಲ ಸ್ವಾವಲಂಬಿ ಭಾರತದ ಕನಸಿಗೆ ಖಾದಿ ಪ್ರಮುಖ ಶಕ್ತಿಯಾಗಿದೆ ಎಂದು ಮೋದಿ ಹೇಳಿದ್ದಾರೆ.

ಖಾದಿ ಫಾರ್ ಟ್ರಾನ್ಸ್‌ಫರ್ಮೇಷನ್ ಎಂಬ ಪ್ರತಿಜ್ಞೆಯನ್ನು ನಾವು ಖಾದಿ ಫಾರ್ ನೇಷನ್, ಖಾದಿ ಫಾರ್ ಫ್ಯಾಶನ್ ಎಂದು ಸೇರಿಸಿದ್ದೇವೆ. ನಾವು ಗುಜರಾತ್ ಯಶಸ್ಸಿನ ಅನುಭವಗಳನ್ನು ದೇಶದಾದ್ಯಂತ ಹರಡಲು ಪ್ರಾರಂಭಿಸಿದ್ದೇವೆ. ದೇಶಾದ್ಯಂತ ಖಾದಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಖಾದಿ ಉತ್ಪನ್ನಗಳನ್ನು ಖರೀದಿಸಲು ನಾವು ದೇಶವಾಸಿಗಳನ್ನು ಉತ್ತೇಜಿಸಿದ್ದೇವೆ ಎಂದು ಖಾದಿ ಉತ್ಸವದಲ್ಲಿ ಮೋದಿ ಹೇಳಿದರು. 

ನರೇಂದ್ರ ಮೋದಿ ಭೇಟಿಯಾಗಿ ಮಹತ್ವದ ಮಾತು ಕೊಟ್ಟು ಬಂದ ಯಡಿಯೂರಪ್ಪ

ಇಂದು ಭಾರತದ ಟಾಪ್ ಫ್ಯಾಶನ್ ಬ್ರ್ಯಾಂಡ್‌ಗಳು ಖಾದಿ ಸೇರಲು ಮುಂದೆ ಬರುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದರು. ಕಳೆದ ಎಂಟು ವರ್ಷಗಳಲ್ಲಿ ಖಾದಿ ಮಾರಾಟ ನಾಲ್ಕು ಪಟ್ಟು ಹೆಚ್ಚಾಗಿದೆ. ಪ್ರಥಮ ಬಾರಿಗೆ ಖಾದಿ ಗ್ರಾಮೋದ್ಯೋಗದ ವಹಿವಾಟು ಒಂದು ಲಕ್ಷ ಕೋಟಿ ರೂಪಾಯಿ ದಾಟಿದೆ. ಖಾದಿ ಮಾರಾಟ ಹೆಚ್ಚಾಗಿರುವುದರಿಂದ ಹಳ್ಳಿಗಳಿಗೆ ಹೆಚ್ಚಿನ ಹಣ ಹೋಗಿದೆ. ಹಳ್ಳಿಗಳಲ್ಲಿ ಹೆಚ್ಚು ಜನರಿಗೆ ಉದ್ಯೋಗ ಸಿಕ್ಕಿದೆ. ವಿಶೇಷವಾಗಿ ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ಅಧಿಕಾರ ನೀಡಲಾಗಿದೆ. ಎರಡೂವರೆ ಕೋಟಿ ಉದ್ಯೋಗ ಸೃಷ್ಟಿಯಾಗಿದೆ.

ಗುಜರಾತ್‌ನಲ್ಲಿ 4 ಲಕ್ಷಕ್ಕೂ ಅಧಿಕ ಸ್ವಯಂ ಸೇವೆ ಸಂಘಗಳು ಕಾರ್ಯನಿರ್ವಹಿಸುತ್ತಿದೆ. ಮಹಿಳೆ, ಮಕ್ಕಳ ಸಬಲೀಕರಣ, ಅವರಿಗೆ ಶಕ್ತಿ ನೀಡುವ ಯೋಜನೆಗಳು ಡಬಲ್ ಎಂಜಿನ್ ಸರ್ಕಾರದ ಮೂಲಕ ಜನರಿಗೆ ಸಿಗುತ್ತಿದೆ. ಒಂದು ಕಾಲವಿತ್ತು. ಸಣ್ಣ ಸಣ್ಣ ಸಾಲ ಪಡೆಯಲು ಬ್ಯಾಂಕ್ ಅಲೆದಾಡುವ ಪರಿಸ್ಥಿತಿ ಇತ್ತು. ಇದೀಗ 50 ಸಾವಿರಿಂದ 10 ಲಕ್ಷ ರೂಪಾಯಿ ಸಾಲ ಯಾವುದೇ ಅಡತೆಡೆ ಇಲ್ಲದೆ ಪಡೆಯಲು ಸಾಧ್ಯವಿದೆ. ಇದರಿಂದ ಗ್ರಾಮೀಣ ಭಾಗದ ಮಹಿಳೆಯರು ಸ್ವಂತ ಉದ್ಯಮ ಆರಂಭಿಸಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಮಹಿಳೆಯರ ಖಾದಿ ಗ್ರಾಮೋದ್ಯೋಗದಲ್ಲಿ ತೊಡಗಿಸಿಕೊಂಡು ಸಬಲೀಕರಣರಾಗಿದ್ದಾರೆ.

ಮಂಗಳೂರು: ಮೋದಿ ಸಮಾವೇಶಕ್ಕೆ ಮಳೆ ಭೀತಿ, ಕಾರ್ಯಕ್ರಮಕ್ಕೆ ವಿಶಾಲ ಜರ್ಮನ್‌ ಪೆಂಡಾಲ್‌ ಅಳವಡಿಕೆ

ಖಾದಿ ಆರೋಗ್ಯ ದೃಷ್ಟಿಯಿಂದಲೂ ಅತ್ಯುತ್ತಮವಾಗಿದೆ. ಭಾರತದ ಹಲವು ಪ್ರದೇಶದಲ್ಲಿ ಉಷ್ಣಾಂಷ ಅಧಿಕವಾಗಿದೆ. ಈ ಸಂದರ್ಭದಲ್ಲೂ ಖಾದಿ ಅತ್ಯುತ್ತಮವಾಗಿದೆ. ಹೀಗಾಗಿ ಆರೋಗ್ಯ ಸೇರಿದಂತೆ ಎಲ್ಲಾ ದೃಷ್ಚಿಯಿಂದಲೂ ಖಾದಿ ಅತ್ಯುತ್ತಮ ಅನ್ನೋದು ಸಾಬೀತಾಗಿದೆ ಎಂದು ಮೋದಿ ಹೇಳಿದ್ದಾರೆ. 

ದೂರ ದರ್ಶನದಲ್ಲಿ ಸ್ವರಾಜ್ ದಾರವಾಹಿ  ಸ್ವಾತಂತ್ರ್ಯ ಸಂಗ್ರಾಮದ ಕುರಿತಾಗಿದೆ. ದೇಶದ ಮೂಲೆ ಮೂಲೆಯಲ್ಲಿ ಸ್ವಾತಂತ್ರ್ಯದ ಕಿಚ್ಚು ಹೇಗೆ ಆರಂಭಗೊಂಡಿತು. ತ್ಯಾಗ ಬಲಿದಾನ, ಭಾರತೀಯರ ಕೊಡುಗೆ ಸೇರಿದಂತೆ ಎಲ್ಲವನ್ನ ವಿಸ್ತಾರವಾಗಿ ತೋರಿಸಲಾಗಿದೆ. ಈ ಧಾರವಾಹಿಯನ್ನು ನೋಡಿ. ಕಾರಣ ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾಲದಲ್ಲಿದ್ದೇವೆ. ಮುಂದಿನ ವರ್ಷ ಆಗಸ್ಟ್ ತಿಂಗಳ ವರೆಗೆ ನಾವು ಆಜಾದಿ ಕಾ ಅಮೃತ ಮಹೋತ್ಸವ ಆಚರಣೆ ನಡೆಯಲಿದೆ. ಹೀಗಾಗಿ ನಮ್ಮ ಇತಿಹಾಸ ತಿಳಿದುಕೊಳ್ಳುವುದು ಮುಖ್ಯ ಎಂದು ಮೋದಿ ಹೇಳಿದ್ದಾರೆ. 
 

Follow Us:
Download App:
  • android
  • ios