ಚೀತಾ ನಮ್ಮ ಅತಿಥಿಗಳು, ತಾಳ್ಮೆ ವಹಿಸಿ, ಅವುಗಳನ್ನು ನೋಡೋಕೆ ಮುಗಿ ಬೀಳ್ಬೇಡಿ: ಪ್ರಧಾನಿ ಮೋದಿ ಮನವಿ

ಭಾರತದ 70 ವರ್ಷಗಳ ಕಾಯುವಿಕೆ ಮುಕ್ತಾಯಕಂಡಿದೆ. ನಮೀಬಿಯಾದ ಎಂಟು ಚೀತಾಗಳು ಭಾರತಕ್ಕೆ ಆಗಮಿಸಿವೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಮೂರು ಚೀತಾಗಳನ್ನು ಕುನೋ ರಾಷ್ಟ್ರೀಯ ಪಾರ್ಕ್‌ಗೆ ಬಿಡುಗಡೆ ಮಾಡಿ ಅದರ ಚಿತ್ರಗಳನ್ನು ತೆಗೆದುಕೊಂಡರು. ಈ ವೇಳೆ, ದೇಶದ ಜನರಲ್ಲಿ ಮಹತ್ವದ ಮನವಿಯೊಂದನ್ನೂ ಮಾಡಿಕೊಂಡಿದ್ದಾರೆ.

PM Modi appeals for patience before visiting cheetahs refers to them as Indias guests san

ಗ್ವಾಲಿಯರ್‌ (ಸೆ. 17): ನಮೀಬಿಯಾದಿಂದ ವಿಶೇಷ ವಿಮಾನದ ಮೂಲಕ ಭಾರತಕ್ಕೆ ಆಗಮಿಸಿದ ಎಂಟು ಚೀತಾಗಳು ಶನಿವಾರದಿಂದ ಹೊಸ ಮನೆ ಕಂಡುಕೊಂಡಿವೆ. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಪಾರ್ಕ್‌ನಲ್ಲಿ ಇವುಗಳು ಇನ್ನು ನೆಲೆಸಲಿವೆ. ಚೀತಾಗಳನ್ನು ಪಾರ್ಕ್‌ಗೆ ಬಿಡುವ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ನಮೀಬಿಯಾ ಸರ್ಕಾರವನ್ನು ನೆನಪು ಮಾಡಿಕೊಂಡು ಧನ್ಯವಾದ ಸಲ್ಲಿಸಿದರು. ಅದೇ ವೇಳೆ ದೇಶದ ಜನರಲ್ಲೂ ಪ್ರಧಾನಿ ಮೋದಿ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಚೀತಾಗಳು ಮತ್ತೆ ಕುನೋದಲ್ಲಿ ಓಡಿದರೆ ಇಲ್ಲಿ ಜೀವವೈವಿಧ್ಯ ಹೆಚ್ಚುತ್ತದೆ. ಅಭಿವೃದ್ಧಿಯ ಅವಕಾಶಗಳು ಇಲ್ಲಿ ಉದ್ಭವಿಸುತ್ತವೆ. ಉದ್ಯೋಗಾವಕಾಶಗಳು ಹೆಚ್ಚಾಗಲಿವೆ. ಸದ್ಯ ಈ ಚೀತಾಗಳ ಬಗ್ಗೆ ದೇಶದ ಜನರಲ್ಲಿ  ಕುತೂಹಲಗಳಿರಬಹುದು. ಆದರೆ, ತಾಳ್ಮೆಯಿಂದ ಇರಲಿ. ಇವುಗಳನ್ನು ನೋಡೋಕು ಮುಗಿ ಬೀಳಬೇಡಿ ಎಂದು ಮನವಿ ಮಾಡಿದರು. ಈ ಚೀತಾಗಳು ನಮ್ಮ ದೇಶದ ಅತಿಥಿಗಳು. ಅವುಗಳಿಗೆ ಈ ಪ್ರದೇಶದ ಬಗ್ಗೆ ಹೆಚ್ಚಾಗಿ ಏನೂ ತಿಳಿದಿಲ್ಲ. ಕುನೋ ರಾಷ್ಟ್ರೀಯ ಪಾರ್ಕ್‌ ಅದಕ್ಕೆ ತನ್ನ ಮನೆ ಅಂದುಕೊಳ್ಳಬೇಕು. ಅಲ್ಲಿಯವರೆಗೂ ನಾವು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.  ಚೀತಾಗಳನ್ನು ನೀವು ನೋಡಲು ಇನ್ನಷ್ಟು ತಿಂಗಳುಗಳ ಕಾಲ ಕಾಯಬೇಕು ಎಂದು ತಿಳಿಸಿದ್ದಾರೆ.

ನಮೀಬಿಯಾದಿಂದ (Namibia) ಬಂದಿರುವ 8 ಚೀತಾಗಳ ಪೈಕಿ ಐದು ಚೀತಾಗಳು (Cheetah) ಹೆಣ್ಣು ಹಾಗೂ ಮೂರು ಚೀತಾಗಳು ಗಂಡು. 2 ವರ್ಷದ ಹೆಣ್ಣು ಚೀತಾ ಅತ್ಯಂತ ಕಿರಿಯವಳು. 5.5 ವರ್ಷದ ಎರಡು ಗಂಡು ಚೀತಾ (ಸಹೋದರರು) ಅತ್ಯಂತ ಹಿರಿಯವರಾಗಿದ್ದಾರೆ. ಎರಡು ಗಂಡು ಚೀತಾಗಳನ್ನು ನಮೀಬಿಯಾದ ಖಾಸಗಿ ಮೀಸಲು ಪ್ರದೇಶ ಒಟಿಜಾವಾರಂಗೂದಲ್ಲಿ ಸೆರೆ ಹಿಡಿಯಲಾಗಿತ್ತು. ಇನ್ನು 4.5 ವರ್ಷದ ಇನ್ನೊಂದು ಗಂಡು ಚೀತಾ, ಎರಿಂಡಿ ಪ್ರೈವೇಟ್‌ ಗೇಮ್‌ ರಿಸರ್ವ್‌ ಪ್ರದೇಶದಲ್ಲಿ ಜನಿಸಿದ್ದಾಗಿದೆ. ಸಾಮಾನ್ಯವಾಗಿ ಚೀತಾಗಳು ಜೀವಿತಾವಧಿ 12 ವರ್ಷಗಳಾಗಿವೆ.

ಇನ್ನು ಅತ್ಯಂತ ಕಿರಿಯವಳಾಗಿರುವ 2 ವರ್ಷದ ಹೆಣ್ಣು ಚೀತಾವನ್ನು, ಗೋಬಾಬಿಯಲ್ಲಿನ ಸಿಹಿ ನೀರ ಪ್ರದೇಶದಲ್ಲಿ ತನ್ನ ಸಹೋದರ ಜೊತೆ ಇದ್ದಾಗ ಸೆರೆ ಹಿಡಿಯಲಾಗಿತ್ತು. ಇನ್ನು 2.5 ವರ್ಷ ಹೆಣ್ಣು ಚೀತಾ 2020ರ ಏಪ್ರಿಲ್‌ನಲ್ಲಿ ಎರಿಂಡಿ ಪ್ರೈವೇಟ್‌ ಗೇಮ್‌ ರಿಸರ್ವ್‌ನಲ್ಲಿ ಜನಿಸಿತ್ತು. 3 ರಿಂದ 4 ವರ್ಷದ ಅಂದಾಜಿನ ಇನ್ನೊಂದು ಚೀತಾವನ್ನು ಸಿಸಿಎಫ್‌ನ ಫಾರ್ಮ್‌ನಲ್ಲಿ ಟ್ರ್ಯಾಪ್‌ ಕೇಜ್‌ನ ಮೂಲಕ ಹಿಡಿಯಲಾಗಿತ್ತು. ತಲಾ 5 ವರ್ಷದ ಇನ್ನೆರಡು ಹೆಣ್ಣು ಚೀತಾಗಳ ಪೈಕಿ ಒಂದನ್ನು 2017ರಲ್ಲಿ ನಮೀಬಿಯಾದ ಗೋಬಾಬಿಯ ಫಾರ್ಮ್‌ನಲ್ಲಿ ಹಿಡಿದಿದ್ದರೆ, ಕಮನ್‌ಜಾಬ್‌ ಎನ್ನುವ ಹಳ್ಳಿಯಿಂದ ಇನ್ನೊಂದು ಚೀತಾವನ್ನು ಸೆರೆ ಮಾಡಲಾಗಿತ್ತು.

ಏಳು ದಶಕಗಳ ಬಳಿಕ ಮರಳಿ ಬಂತು ಚೀತಾ!

70 ವರ್ಷಗಳ ಬಳಿಕ ಚೀತಾ: ಭಾರತದ ಸರ್ಕಾರ (Indian Governament)1952ರಲ್ಲಿ ಅಧಿಕೃತವಾಗಿ ದೇಶದಲ್ಲಿ ಚೀತಾದ ಸಂತತಿ ಕೊನೆಯಾಗಿದೆ ಎಂದು ಘೋಷಣೆ ಮಾಡಿತ್ತು. ಇದಾದ 70 ವರ್ಷಗಳ ಬಳಿಕ ಚೀತಾ ನಮ್ಮ ದೇಶಕ್ಕೆ ಕಾಲಿಟ್ಟಿದೆ. ನಮೀಬಿಯಾದ ಹೋಸೆಯಾ ಕುಟಾಕೋ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ವಿಶೇಷ ವಿಮಾನ 747 ಜಂಬೋ ಜೆಟ್‌ ಮೂಲಕ ಈ ಚೀತಾಗಳು ಜೈಪುರಕ್ಕೆ ಬಂದಿದ್ದವು. ಅದಾದ ಬಳಿಕ ಕುನೋ ರಾಷ್ಟ್ರೀಯ ಪಾರ್ಕ್‌ಗೆ (Kuno National Park) ಹೆಲಿಕಾಪ್ಟರ್‌ ಮೂಲಕ ತರಲಾಗಿತ್ತು.

ನಮೀಬಿಯಾದಿಂದ ತಂದ ಚೀತಾಗಳನ್ನು ಕುನೋ ಉದ್ಯಾನವನಕ್ಕೆ ಬಿಟ್ಟ ಪ್ರಧಾನಿ

ಪ್ರಸ್ತುತ ವಿಶ್ವದಲ್ಲಿ ಅಂದಾಜು 7500 ಚೀತಾ: ಪ್ರಸ್ತುತ ವಿಶ್ವದಲ್ಲಿ ಅಂದಾಜು 7500 ಚೀತಾ ಇರಬಹುದು ಎಂದು ಅಂದಾಜಿಸಲಾಗಿದೆ.  ದೊಡ್ಡ ಬೆಕ್ಕು (Big Cat) ಪ್ರಬೇಧದಲ್ಲಿ ಅತ್ಯಂತ ಹಳೆಯ ಪ್ರಭೇದ ಚೀತಾ. ಅಂದಾಜು 85 ಮಿಲಿಯನ್‌ ವರ್ಷಗಳಿಂದ ಇದರ ಪ್ರಸ್ತುತತೆಯನ್ನು ಗುರುತಿಸಬಹುದು. ಏಷ್ಯಾಟಿಕ್‌ ಚೀತಾ (Asiatic Cheetah) ಹಾಗೂ ನಾರ್ಥ್‌ವೆಸ್ಟ್‌ ಆಫ್ರಿಕನ್‌ ಚೀತಾ ಅತ್ಯಂತ ಗಂಭೀರವಾಗಿ ಅಳಿವಿನ ಹಂತದಲ್ಲಿರುವ ಪ್ರಬೇಧ ಎನ್ನಲಾಗಿದೆ.

Latest Videos
Follow Us:
Download App:
  • android
  • ios