Asianet Suvarna News Asianet Suvarna News

ಪಿಎಂ ಮೋದಿ ಹೊಗಳಿದ ಸುಪ್ರೀಂ ಜಡ್ಜ್‌!

ಮೋದಿಗೆ ಸುಪ್ರೀಂ ಜಡ್ಜ್‌ ಬಹುಪರಾಕ್‌| ಅವರೊಬ್ಬ ಬಹುಮುಖ ಪ್ರತಿಭೆ, ಜಾಗತಿಕ ಮನ್ನಣೆಯ ದೂರದೃಷ್ಟಿಗಾರ| ಜಾಗತಿಕವಾಗಿ ಯೋಚಿಸಿ, ಸ್ಥಳೀಯವಾಗಿ ಕೆಲಸ ಮಾಡುತ್ತಾರೆ| ಸುಪ್ರೀಂನ 3ನೇ ಹಿರಿಯ ಜಡ್ಜ್‌ ಅರುಣ್‌ ಮಿಶ್ರಾ ಪ್ರಶಂಸೆ

PM Modi A Versatile Genius Who Thinks Globally And Acts Locally Says Supreme Court Judge
Author
Bangalore, First Published Feb 23, 2020, 9:10 AM IST

ನವದೆಹಲಿ[ಫೆ.23]: ಪ್ರಧಾನಿ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಗೆ ಪಾತ್ರವಾಗಿರುವ ದೂರದೃಷ್ಟಿಗಾರ. ಜಾಗತಿಕವಾಗಿ ಆಲೋಚಿಸಿ ದೇಶೀಯವಾಗಿ ಕೆಲಸ ಮಾಡುವ ಬಹುಮುಖ ಪ್ರತಿಭೆ ಎಂದು ಸುಪ್ರೀಂಕೋರ್ಟ್‌ನ 3ನೇ ಹಿರಿಯ ನ್ಯಾಯಾಧೀಶರಾಗಿರುವ ನ್ಯಾಯಮೂರ್ತಿ ಅರುಣ್‌ ಮಿಶ್ರಾ ಅವರು ಹಾಡಿ ಹೊಗಳಿದ್ದಾರೆ.

ನರೇಂದ್ರ ಮೋದಿ ಹಾಗೂ ಕಾನೂನು ಸಚಿವ ರವಿಶಂಕರ ಪ್ರಸಾದ್‌ ಅವರು 1500 ಗತಕಾಲದ ಕಾಯ್ದೆಗಳನ್ನು ರದ್ದುಗೊಳಿಸಿದ್ದಾರೆ. ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತವು ಅಂತಾರಾಷ್ಟ್ರೀಯ ಸಮುದಾಯದ ಅತ್ಯಂತ ಸ್ನೇಹಯುತ ಹಾಗೂ ಜವಾಬ್ದಾರಿಯುತ ಸದಸ್ಯವಾಗಿದೆ ಎಂದೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

‘ನ್ಯಾಯಾಂಗ ಹಾಗೂ ಬದಲಾಗುತ್ತಿರುವ ಜಗತ್ತು’ ಎಂಬ ವಿಚಾರವಾಗಿ ಸುಪ್ರೀಂಕೋರ್ಟ್‌ನಲ್ಲಿ ಅಂತಾರಾಷ್ಟ್ರೀಯ ನ್ಯಾಯಾಂಗ ಸಮ್ಮೇಳನ ನಡೆಯುತ್ತಿದೆ. 20 ದೇಶಗಳ ನ್ಯಾಯಾಧೀಶರು ಭಾಗವಹಿಸಿರುವ ಈ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಕಾರ್ಯಕ್ರಮದ ವಂದನಾರ್ಪಣೆ ಮಾಡಿದ ನ್ಯಾ

ಅರುಣ್‌ ಮಿಶ್ರಾ ಅವರು ತಮ್ಮ ಭಾಷಣದಲ್ಲಿ ಮೋದಿ ಬಗ್ಗೆ ಈ ರೀತಿ ಹೊಗಳಿಕೆಯ ಸುರಿಮಳೆಯನ್ನೇ ಸುರಿಸಿದರು.

ನರೇಂದ್ರ ಮೋದಿ ಅವರು ಮಾಡಿದ ಪ್ರೇರಣದಾಯಕ ಭಾಷಣ ಸಮ್ಮೇಳನದ ಚರ್ಚೆ ಹಾಗೂ ಅಜೆಂಡಾಗೆ ವೇಗವರ್ಧಕವಾಗಿ ಕೆಲಸ ಮಾಡಲಿದೆ. ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಭಾರತದಲ್ಲಿ ಅಷ್ಟೊಂದು ಯಶಸ್ವಿಯಾಗಿ ಪ್ರಜಾಪ್ರಭುತ್ವ ಹೇಗೆ ಕೆಲಸ ಮಾಡುತ್ತಿದೆ ಎಂದು ಜನರು ಅಚ್ಚರಿಪಡುತ್ತಾರೆ ಎಂದೂ ಅವರು ಹೇಳಿದರು.

Follow Us:
Download App:
  • android
  • ios