Asianet Suvarna News Asianet Suvarna News

ನಾಳೆಯೇ ರೈತರ ಬ್ಯಾಂಕ್‌ ಖಾತೆಗೆ ಬರಲಿದೆ ಪಿಎಂ ಕಿಸಾನ್‌ ಹಣ: ಇಲ್ಲಿದೆ ಚೆಕ್‌ ಮಾಡೋ ಲಿಂಕ್

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿಯ 14ನೇ ಕಂತಿನ ಹಣವು ನಾಳೆಯೇ ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾವಣೆಯಾಗಲಿದೆ. 

PM Kisan samman money will arrive in farmers bank account july 27 Here is link to check sat
Author
First Published Jul 26, 2023, 5:05 PM IST

ಬೆಂಗಳೂರು (ಜು.26): ಕೇಂದ್ರ ಕೃಷಿ ಸಚಿವಾಲಯವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್ ಯೋಜನೆ) 14 ನೇ ಕಂತನ್ನು ಜುಲೈ 27ರಂದು (ನಾಳೆ ಗುರುವಾರ) ಬಿಡುಗಡೆ ಮಾಡುತ್ತಿದೆ. ಪಿಎಂ ಕಿಸಾನ್ ಫಲಾನುಭವಿಗಳಿಗೆ ಸರ್ಕಾರ ಸುಮಾರು 8.5 ಕೋಟಿ ರೂಪಾಯಿ ಬಿಡುಗಡೆ ಮಾಡಲಿದೆ. ರೈತರು ನಾಳೆ ಸಂಜೆ ವೇಳೆಗೆ ತಮ್ಮ ಬ್ಯಾಖ್‌ ಖಾತೆಯನ್ನು ಪರಿಶೀಲನೆ ಮಾಡಿಕೊಳ್ಳಬಹುದು. ಇಲ್ಲವಾದಲ್ಲಿ ಇಲ್ಲಿ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಹಣ ಪಾವತಿಯಾಗಿದೆಯೇ ಎಂಬ ಮಾಹಿತಿ ತಿಳಿದುಕೊಳ್ಳಬಹುದು. 

ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿಯಲ್ಲಿ, (pm kisan samman nidhi yojana) ಅರ್ಹ ರೈತರಿಗೆ ನಾಲ್ಕು ತಿಂಗಳಿಗೊಮ್ಮೆ ಪ್ರತಿ ಕಂತಿನಲ್ಲೂ 2000 ರೂ. ಹಣ ಪಾವತಿಸುತ್ತದೆ. ಒಂದು ವರ್ಷದಲ್ಲಿ ಒಟ್ಟು 6000 ರೂ. ಹಣವನ್ನು ಫಲಾನುಭವಿ ಪಡೆಯುತ್ತಾರೆ. ಪಿಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14 ನೇ ಕಂತನ್ನು ಆಧಾರ್ ಮತ್ತು ನ್ಯಾಷನಲ್‌ ಪೇಮೆಂಟ್‌ ಕಾರ್ಪರೇಷನ್‌ ಆಫ್‌ ಇಂಡಿಯಾ (ಎನ್‌ಪಿಸಿಐ ಅಥವಾ ಇ-ಕೆವೈಸಿ) ಎರಡಕ್ಕೂ ಜೋಡಿಸಲಾದ ಬ್ಯಾಂಕ್ ಖಾತೆಗೆ ಪಾವತಿ ಮಾಡಲಾಗುತ್ತದೆ. ಹಣ ವರ್ಗಾವಣೆ ಮಾಡುವ ಅಧಿಕೃತ ದಿನಾಂಕವನ್ನು ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಕೇಂದ್ರ ಸರ್ಕಾರವು ರೈತರಿಗೆ ಬಿತ್ತನೆ ಬೀಜ, ಗಿಬ್ಬರ ಹಾಗೂ ಆರ್ಥಿಕವಾಗಿ ನೆರವಾಗುವ ದೃಷ್ಟಿಯಿಂದ 2019ರಲ್ಲಿ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡುವ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯನ್ನು ಜಾರಿಗೆ ತಂದಿತ್ತು.

PM Kisan Samman Nidhi: ಮುಂದಿನ ವಾರ ಈ ದಿನದಂದು ಬರಲಿದೆ 14ನೇ ಕಂತು

ರೈತರು ಇ-ಕೆವೈಸಿ ಪೂರ್ಣಗೊಳಿಸಿರಬೇಕು:  ಈ ದಿನ ಬಿಡುಗಡೆಯಾಗಲಿದೆ 14ನೇ ಕಂತು: ಪಿಎಂ ಕಿಸಾನ್ ಯೋಜನೆಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಪ್ರಕಾರ, ಸರ್ಕಾರವು 14 ನೇ ಕಂತನ್ನು 2023ರ ಜುಲೈ 27ರಂದು ಬಿಡುಗಡೆ ಮಾಡಲಿದೆ. ಇದೇ ವೇಳೆ ರಾಜಸ್ಥಾನದ ಸಿಕಾರ್‌ನ ರೈತರೊಂದಿಗೆ ಪ್ರಧಾನಿ ಮೋದಿ ಸಂವಾದ ಕೂಡ ನಡೆಯಲಿದೆ. ಈ ವರ್ಷದಲ್ಲಿ ಫೆಬ್ರವರಿ 27 ರಂದು 13ನೇ ಕಂತಿನ ಹಣ ಬಂದಿತ್ತು. ಈಗ 14ನೇ ಕಂತಿನ ಹಣ ಜುಲೈ 27 ರಂದು ಬಿಡುಗಡೆಯಾಗಲಿದೆ ಎಂದು ಸರ್ಕಾರ ತಿಳಿಸಿದೆ. ಅದರೊಂದಿಗೆ,  ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 14 ನೇ ಕಂತಿನ ಪ್ರಯೋಜನಗಳನ್ನು ಪಡೆಯಲು, ಫಲಾನುಭವಿಗಳು ತಮ್ಮ eKYC ಅನ್ನು ಪೂರ್ಣಗೊಳಿಸಬೇಕು.

  • ಪಿಎಂ ಕಿಸಾನ್‌ ಸಮ್ಮಾನ್‌ ನಿಧಿಯಲ್ಲಿ ನಿಮ್ಮ ಅರ್ಹತೆ ಚೆಕ್‌ ಮಾಡುವುದು ಹೇಗೆ?
  • Step 1:  ಪಿಎಂ ಕಿಸಾನ್‌ ವೆಬ್‌ಸೈಟ್‌ https://pmkisan.gov.in/ ಭೇಟಿ ನೀಡಿ
  • Step 2: ಇದರಲ್ಲಿ ನೋ ಯುವರ್‌ ಸ್ಟೇಟಸ್‌ (know your status) ಟ್ಯಾಬ್‌ ಕ್ಲಿಕ್‌ ಮಾಡಿ
  • Step 3: ನಿಮ್ಮ ನೋಂದಣಿ ನಂಬರ್‌ ಹಾಗೂ ಕ್ಯಾಪ್ಚಾ ಕೋಡ್‌ ದಾಖಲಿಸಿ. ಗೆಟ್‌ ಡೇಟಾ ಕ್ಲಿಕ್‌ ಮಾಡಿ.
  • - ನಿಮ್ಮ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿಯ ಸ್ಟೇಟಸ್‌ ತಿಳಿಯುತ್ತದೆ.

PM KISAN ಫಲಾನುಭವಿಗಳ ಪಟ್ಟಿಯಲ್ಲಿ ಹೆಸರನ್ನು ಹುಡುಕೋದು ಹೇಗೆ?
Step 1: ಪಿಎಂ ಕಿಸಾನ್‌ ವೆಬ್‌ಸೈಟ್‌ https://pmkisan.gov.in/ ಭೇಟಿ ನೀಡಿ
Step 2: ಅಲ್ಲಿ ಫಲಾನುಭವಿಗಳ ಪಟ್ಟಿ (Beneficiary list) ಟ್ಯಾಬ್‌ ಕ್ಲಿಕ್‌ ಮಾಡಿ. ವೆಬ್‌ಸೈಟ್‌ನ ಬಲಭಾಗದಲ್ಲಿ ಇದು ಇರುತ್ತದೆ.
Step 3: ರಾಜ್ಯ, ಜಿಲ್ಲೆ, ಉಪ-ಜಿಲ್ಲೆ, ಬ್ಲಾಕ್ ಮತ್ತು ಹಳ್ಳಿಯಂತಹ ಡ್ರಾಪ್-ಡೌನ್‌ ವಿವರಗಳನ್ನು ಆಯ್ಕೆಮಾಡಿ
Step 4: ಗೆಟ್‌ ರಿಪೋರ್ಟ್‌ ಎನ್ನುವ ಟ್ಯಾಬ್‌ ಕ್ಲಿಕ್‌ ಮಾಡಿ
ಫಲಾನುಭವಿಗಳ ಪಟ್ಟಿಯ ವಿವರಗಳು ಪ್ರಕಟವಾಗುತ್ತದೆ

ಕಿಸಾನ್‌ ಸಮ್ಮಾನ್‌ ಯೋಜನೆಗೆ ಎಳ್ಳುನೀರು? : 50 ಲಕ್ಷ ರೈತರಿಗೆ ಬರ್ತಿದ್ದ 4 ಸಾವಿರ ರೂ. ಸ್ಥಗಿತ!

ರಾಜ್ಯದ 4 ಸಾವಿರಕ್ಕೆ ಎಳ್ಳು ನೀರು: ಇನ್ನು ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ಮೊದಲ ಕಂತು ಇದಾಗಿದೆ. ಈ ಹಿಂದೆ ಕೇಂದ್ರ ಸರ್ಕಾರದ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿಯ ಜೊತೆ ಜೊತೆಗೆ ರಾಜ್ಯ ಸರ್ಕಾರದಿಂದ ವಾರ್ಷಿಕ 4 ಸಾವಿರ ರೂ. ಹಣವನ್ನು ರೈತರಿಗೆ ಹಾಕುತ್ತಿತ್ತು. ಆದರೆ, ಈಗ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ರಾಜ್ಯ ಸರ್ಕಾರದಿಂದ ಕಿಸಾನ್ ಸಮ್ಮಾನ್‌ ನಿಧಿ ಹಣ ಬರುತ್ತದೆಯೋ ಇಲ್ಲವೋ ಎಂಬ ಬಗ್ಗೆ ಮಾಹಿತಿಯಿಲ್ಲ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸದನದಲ್ಲಿ ಪ್ರಶ್ನೆ ಮಾಡಿದರೂ ಸ್ಪಷ್ಟವಾಗಿ ಉತ್ತರವನ್ನು ನೀಡಲಿಲ್ಲ. 

Follow Us:
Download App:
  • android
  • ios