ಈ ಹಿಂದೆ ಜರ್ಮನ್ ಗಾಯಕಿಯ ಹಾಡನ್ನು ಪ್ರಧಾನಿ ಮೋದಿ ತಮ್ಮ 'ಮನ್ ಕೀ ಬಾತ್' ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದರು. ಇದೀಗ ಭಾರತಕ್ಕೆ ಭೇಟಿ ನೀಡಿರುವ ಗಾಯಕಿಯ ಹಾಡನ್ನು ಖುದ್ದು ಎದುರು ಕುಳಿತು ಆನಂದಿಸಿದ್ದಾರೆ.

ಜರ್ಮನ್ ಗಾಯಕಿ ಕಸ್ಸಂಡ್ರಾ ಮೇ ಸ್ಪಿಟ್‌ಮನ್ ಅವರು 'ಅಚ್ಯುತಂ ಕೇಶವಂ' ಹಾಡುತ್ತಿದ್ದಂತೆ ಪ್ರಧಾನಿ ಮೋದಿ ತಾಳ ಹಾಕುತ್ತಾ ತಲೆದೂಗಿದ್ದಾರೆ. 

ತಮಿಳುನಾಡಿಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪಲ್ಲಡಂನಲ್ಲಿ ಜರ್ಮನ್ ಗಾಯಕಿ ಕಸಾಂಡ್ರಾ ಮಾ ಅವರನ್ನು ಭೇಟಿ ಮಾಡಿ ಸಂವಾದದಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಗಾಯಕಿ ವಿವಿಧ ಹಿಂದಿ ಭಜನೆಗಳನ್ನು ಪ್ರಸ್ತುತಪಡಿಸುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು ಮತ್ತು ತಮಿಳಿನಲ್ಲಿ ಒಂದನ್ನು ಹಾಡಿದರು. ಗಾಯಕಿ 'ಅಚ್ಯುತಂ ಕೇಶವಂ' ಮತ್ತು ತಮಿಳು ಹಾಡನ್ನು ಪ್ರಧಾನಿ ಮೋದಿಯವರ ಮುಂದೆ ಹಾಡುವಾಗ, ಅವರು ಅದನ್ನು ಗಮನವಿಟ್ಟು ಕೇಳುತ್ತಾ, ತಾಳ ಹಾಕುತ್ತಾ ತಮ್ಮ ಆಸಕ್ತಿಯನ್ನು ಪ್ರದರ್ಶಿಸಿದರು. 

ಈ ಹಿಂದೆ, ತಮ್ಮ ಮಾಸಿಕ ರೇಡಿಯೊ ಪ್ರಸಾರದ ಮನ್ ಕಿ ಬಾತ್‌ನ ಸಂಚಿಕೆಗಳಲ್ಲಿ, ಪಿಎಂ ಮೋದಿ ಅವರು ಸ್ಪಿಟ್‌ಮನ್ ಅವರ ಹೆಸರನ್ನು ಪ್ರಸ್ತಾಪಿಸಿದ್ದರು. ಈ ಸಂದರ್ಭದಲ್ಲಿ 'ಭಾರತೀಯ ಸಂಸ್ಕೃತಿ ಮತ್ತು ಭಾರತೀಯ ಸಂಗೀತವು ಈಗ ಜಾಗತಿಕವಾಗಿದೆ. ಪ್ರಪಂಚದಾದ್ಯಂತ ಹೆಚ್ಚು ಹೆಚ್ಚು ಜನರು ಅವರತ್ತ ಆಕರ್ಷಿತರಾಗುತ್ತಿದ್ದಾರೆ' ಎಂದು ಮೇ ಹಾಡಿರುವ ಭಾರತೀಯ ಹಾಡಿನ ಬಗ್ಗೆ ಹೇಳಿದ್ದರು. ಈ ಸಂದರ್ಭದಲ್ಲಿ ಹಾಡೂ ಪ್ರಸಾರವಾಗಿತ್ತು.

'ಪ್ರಾಣಿಗಳ ಮೂಲಕ ದೇವರ ಸೇವೆ ಮಾಡುವೆ' ಅನಂತ್ ಅಂಬಾನಿಯ ಮಾತು ವೈರಲ್

'ಅಂತಹ ಸುಮಧುರ ಧ್ವನಿ.. ಮತ್ತು ಪ್ರತಿಯೊಂದು ಪದವು ಭಾವನೆಗಳನ್ನು ಪ್ರತಿಬಿಂಬಿಸುತ್ತದೆ. ನಾವು ದೇವರೊಂದಿಗೆ ಆಕೆಯ ಬಾಂಧವ್ಯವನ್ನು ಅನುಭವಿಸಬಹುದು. ಈ ಧ್ವನಿಯು ಜರ್ಮನಿಯ ಮಗಳದ್ದು ಎಂದು ತಿಳಿದರೆ ನೀವು ಆಶ್ಚರ್ಯಚಕಿತರಾಗುತ್ತೀರಿ' ಎಂದು ಹಾಡಿನ ಪ್ರಸ್ತುತಿಯ ನಂತರ ಪ್ರಧಾನಿ ಮೋದಿ ಹೇಳಿದರು.

'ಆಕೆಯ ಹೆಸರು ಕ್ಯಾಸಾಂಡ್ರಾ ಮೇ. 21 ವರ್ಷದ ಕ್ಯಾಸ್‌ಮೇ ಇನ್‌ಸ್ಟಾಗ್ರಾಮ್‌ನಲ್ಲಿ ಈ ದಿನಗಳಲ್ಲಿ ಸಾಕಷ್ಟು ಪ್ರಸಿದ್ಧವಾಗಿದ್ದಾಳೆ. ಜರ್ಮನ್ ಪ್ರಜೆ ಕ್ಯಾಸ್‌ಮೇ ಭಾರತಕ್ಕೆ ಭೇಟಿ ನೀಡಿಲ್ಲ. ಆದರೆ, ಅವಳು ಭಾರತೀಯ ಸಂಗೀತವನ್ನು ತುಂಬಾ ಇಷ್ಟಪಡುತ್ತಾಳೆ' ಎಂದು ಅವರು ಸೇರಿಸಿದ್ದರು. ಇದೀಗ ಭಾರತಕ್ಕೆ ಬಂದಿರುವ ಮೇಯನ್ನು ಪ್ರಧಾನಿ ಭೇಟಿಯಾಗಿದ್ದಾರೆ. 

ಎಸ್ಸೆಸ್ಸೆಲ್ಸಿಯಲ್ಲಿ ಶೇ.60 ಅಂಕ ಗಳಿಸಿದ್ದ ಈತ ಈಗ ಐಎಎಸ್ ಅಧಿಕಾರಿ; ಯುಪಿಎಸ್‍ಸಿ ತಯಾರಿ ನಡೆಸುವವರಿಗೆ ಕಿವಿಮಾತು

ಕಸ್ಸಂದ್ರ ಮೇ ಸ್ಪಿಟ್‌ಮನ್ ಕನ್ನಡ, ಸಂಸ್ಕೃತ, ಹಿಂದಿ, ಮಲಯಾಳಂ, ತಮಿಳು, ಉರ್ದು, ಅಸ್ಸಾಮಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ಹಾಡುತ್ತಾರೆ. 

Scroll to load tweet…