ಕೋವಿಡ್‌ ವೈದ್ಯಕೀಯ ಮಾರ್ಗಸೂಚಿಯಿಂದ ಪ್ಲಾಸ್ಮಾ ಥೆರಪಿ ಔಟ್‌!

* ಕೋವಿಡ್‌ ಕುರಿತಾದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಕಾರ್ಯಪಡೆಯ ಸಭೆ

* ಸೋಂಕಿತರ ಮೇಲೆ ಯಾವುದೇ ಪರಿಣಾಮ ಕಂಡುಬರದ ಹಿನ್ನೆಲೆ'

* ಕೋವಿಡ್‌ ವೈದ್ಯಕೀಯ ಮಾರ್ಗಸೂಚಿಯಿಂದ ಪ್ಲಾಸ್ಮಾ ತೆರಪಿ ಔಟ್‌

 

Plasma therapy not effective likely to be dropped from clinical management guidelines on COVID 19 pod

ನವದೆಹಲಿ(ಮೇ.16): ಕೊರೋನಾ ಸೋಂಕು ಗಂಭೀರ ಸ್ವರೂಪಕ್ಕೆ ತಿರುವುದು ಅಥವಾ ಸೋಂಕಿತರ ಸಾವು ತಡೆಗೆಂದು ಬಳಸಲಾಗುತ್ತಿರುವ ಪ್ಲಾಸ್ಮಾ ಥೆರಪಿಯನ್ನು, ವೈದ್ಯಕೀಯ ನಿರ್ವಹಣಾ ಮಾರ್ಗಸೂಚಿಯಿಂದ ಕೈಬಿಡುವ ಸಾಧ್ಯತೆ ಇದೆ.

ಕೋವಿಡ್‌ ಕುರಿತಾದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಕಾರ್ಯಪಡೆಯು ಶುಕ್ರವಾರ ಇಲ್ಲಿ ಸಭೆ ಸೇರಿದ್ದು, ಅಲ್ಲಿ ಬಹುತೇಕ ಸದಸ್ಯರು, ಪ್ಲಾಸ್ಮಾ ಥೆರಪಿಯನ್ನು ಕೈಬಿಡುವ ಬಗ್ಗೆ ಒಮ್ಮತ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

"

ಗಂಭೀರ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ನೀಡಿದ ಹೊರತಾಗಿಯೂ ಅವರು ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಅಥವಾ ಸಾವಿನಿಂದ ಪಾರಾಗುತ್ತಿರುವ ಯಾವುದೇ ಖಚಿತ ಭರವಸೆ ದೊರಕಿಲ್ಲ. ಜೊತೆಗೆ ಪ್ಲಾಸ್ಮಾ ಥೆರಪಿ ಪರಿಣಾಮಕಾರಿಯಲ್ಲ ಎಂದು ಕಂಡುಬಂದಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ನಿರ್ಧಾರಕ್ಕೆ ಸಮಿತಿ ಸದಸ್ಯರು ಬಂದಿದ್ದಾರೆ. ಅಲ್ಲದೆ ಪ್ರಸಕ್ತ ದೇಶಾದ್ಯಂತ ಯಾವುದೇ ಮಾನದಂಡ ಬಳಸದೇ ಪ್ಲಾಸ್ಮಾ ಚಿಕಿತ್ಸೆ ನೀಡುತ್ತಿರುವ ಕುರಿತು ದೂರುಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಅದಕ್ಕೆ ಕೊನೆಹಾಡಲು ಸಂಸ್ಥೆ ಮುಂದಾಗಿದೆ ಎನ್ನಲಾಗಿದೆ. ಈ ಕುರಿತು ಶೀಘ್ರವೇ ಐಸಿಎಂಆರ್‌ ಸಲಹಾವಳಿಯೊಂದನ್ನು ಬಿಡುಗಡೆ ಮಾಡಲಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಪ್ರಸಕ್ತ ಮಾರ್ಗಸೂಚಿಗಳ ಅನ್ವಯ, ಮದ್ಯಮ ಸ್ವರೂಪದ ಸೋಂಕಿತರಿಗೆ ಆರಂಭದ ಹಂತದಲ್ಲೇ ಅಂದರೆ ಲಕ್ಷಣ ಕಾಣಿಸಿಕೊಂಡ 7 ದಿನಗಳ ಒಳಗಾಗಿ ಪ್ಲಾಸ್ಮಾ ತೆರಪಿ ನೀಡಬಹುದಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios