ಭಾರತದಲ್ಲಿ ಸರಣಿ ಬಾಂಬ್ ಸ್ಫೋಟ ಮಾಡುತ್ತೇನೆ. ಸಂಪೂರ್ಣವಾಗಿ ಹಿಂದೂ ಧರ್ಮವನ್ನು ನಾಶ ಮಾಡಿ, ಪ್ರಧಾನಿ ಮೋದಿಯನ್ನು ಕೊಲ್ಲುತ್ತೇನೆ ಎಂದು ಅನ್ಯ ಧರ್ಮದ ವೆಸ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಬೆದರಿಕೆ ಹಾಕಿದ ಎಂಎ ಹಕೀಮ್ ನಾಪತ್ತೆಯಾಗಿದ್ದಾನೆ.
ಪುಣೆ(ಆ.09) ಕೋಮು ಸಂಘರ್ಷದಿಂದ ದೇಶದ ಕೆಲ ಭಾಗದಲ್ಲಿ ಭಾರಿ ಹಿಂಸಾಚಾರ ನಡೆದಿದೆ. ಕೆಲವು ಪ್ರದೇಶದಲ್ಲಿ ನಿರ್ಬಂಧಗಳು ಸಡಿಲಗೊಂಡಿಲ್ಲ. ಇದೀಗ ಪ್ರಚೋದನಕಾರಿ ಹೇಳಿಕೆ, ಪೋಸ್ಟ್‌ಗಳು ಹೆಚ್ಚಾಗುತ್ತಿದೆ. ಇದೀಗ ಎಂಎ ಹಕೀಮ್ ಅನ್ನೋ ವ್ಯಕ್ತಿಯೊಬ್ಬ, ಧಾರ್ಮಿಕ ವೆಬ್‌ಸೈಟ್‌ನಲ್ಲಿ ಬೆದರಿಕೆ ಹಾಕಿ ನಾಪತ್ತೆಯಾಗಿದ್ದಾನೆ. ನಾನು ಭಾರತದಲ್ಲಿ ಸರಣಿ ಬಾಂಬ್ ಸ್ಫೋಟಕ್ಕೆ ತಯಾರಿ ನಡೆಸುತ್ತಿದ್ದೇನೆ. ಹಿಂದೂ ಧರ್ಮವನ್ನೇ ನಾಶ ಮಾಡಿ, ಪ್ರಧಾನಿ ಮೋದಿಯನ್ನು ಹತ್ಯೆ ಮಾಡುವುದೇ ನನ್ನ ಗುರಿ ಎಂದು ವೆಬ್‌ಸೈಟ್‌ನಲ್ಲಿ ಹೇಳಿದ್ದಾನೆ. ಪುಣೆ ಮೂಲದ ಹಕೀಮ್ ವಿರುದ್ಧ ಪ್ರಕರಣ ದಾಖಲಾಗಿದೆ.
ನನಗೆ ಕೆಲ ಭಯೋತ್ಪಾದಕ ಸಂಘಟನೆಗಳು ಹಣಕಾಸಿನ ನೆರವು ನೀಡುತ್ತಿದೆ. ಈಗಾಗಲೇ ತಯಾರಿಗಳು ನಡೆದಿದೆ. ಭಾರತದಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸುತ್ತೇನೆ. ಪ್ರಧಾನಿ ಮೋದಿಯನ್ನು ಹತ್ಯೆ ಮಾಡುವುದೇ ನನ್ನ ಗುರಿಯಾಗಿದೆ. ಇದರ ಜೊತೆಗೆ ಭಾರತದಲ್ಲಿ ಹಿಂದೂ ಧರ್ಮವನ್ನು ನಾಶ ಮಾಡುತ್ತೇನೆ ಎಂದು ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ.
ಎನ್‌ಐಎ ತನಿಖೆ ವೇಳೆ ಶಾಕ್, ಮಂಗ್ಳೂರು ಕುಕ್ಕರ್ ಬಾಂಬ್ ಕಿಂಗ್‌ಪಿನ್ ಬೆಳಗಾವಿ ಲಷ್ಕರ್ ಉಗ್ರ!
ವೆಬ್‌ಸೈಟ್‌ನಲ್ಲಿ ಹಾಕಿರುವ ಈ ಪೋಸ್ಟ್ ಭಾರಿ ವೈರಲ್ ಆಗುತ್ತಿದ್ದಂತೆ ರಾಹುಲ್ ದುಧಾನೆ ಅನ್ನೋ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಕೃತ್ಯದ ಹಿಂದೆ ಎಂಎ ಹಕೀಮ್ ಕೈವಾಡವಿದೆ ಅನ್ನೋದನ್ನು ಪೊಲೀಸರು ಬಹಿಂಗಪಡಿಸಿದ್ದಾರೆ. ಇನ್ನು ನಚಿಖೆ ಚುರುಕುಗೊಳಿಸಿರುವ ಪೊಲೀಸರಿಗೆ ಅಚ್ಚರಿ ಕಾದಿದೆ. ಕಾರಣ ಈ ಪೋಸ್ಟ್ ಹಾಕಿದ ಐಪಿ ವಿಳಾಸ ವಿದೇಶದಲ್ಲಿದೆ. ಹೀಗಾಗಿ ಇಂದೊಂದು ದೊಡ್ಡ ಷಡ್ಯಂತ್ರದ ಭಾಗವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಪುಣೆಯ ಅಲಂಕಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತು ಎಂಎ ಹಕೀಮ್ ವಿರುದ್ದ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಎನ್‌ಐಎ ಅಧಿಕಾರಿಗಳೆದುರೇ ಪೊಲೀಸರಿಂದ ಜೈಲು ಸಿಬ್ಬಂದಿಗೆ ತರಾಟೆ!
ಪ್ರಧಾನಿ ಮೋದಿಗೆ ಹಲವು ಬಾರಿ ಬೆದರಿಕೆ ಸಂದೇಶಗಳು, ಕರೆಗಳು ಬಂದಿದೆ. ಹೀಗಾಗಿ ಮೋದಿ ಭದ್ರತೆ ಮೇಲೆ ನಿಗಾವಙಿಸಲಾಗುತ್ತಿದೆ. ಈ ವರ್ಷದ ಎಪ್ರಿಲ್ ತಿಂಗಳಲ್ಲಿ ಮೋದಿ, ಕೇರಳ ಭೇಟಿ ವೇಳೆಯೂ ಇದೇ ರೀತಿಯ ಬೆದರಿಕೆ ಬಂದಿತ್ತು. ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಕೇರಳಕ್ಕೆ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸುವುದಾಗಿ ಬೆದರಿಕೆ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಮಲಯಾಳ ಭಾಷೆಯಲ್ಲಿ ಈ ಬೆದರಿಕೆ ಪತ್ರ ರವಾನಿಸಲಾಗಿತ್ತು. ಕೇರಳ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಅವರ ಕಚೇರಿಗೆ ಈ ಪತ್ರ ರವಾನಿಸಲಾಗಿತ್ತು. ಈ ಪತ್ರವನ್ನು ಪೊಲೀಸರಿಗೆ ನೀಡಲಾಗಿತ್ತು.
