ದೇಗುಲದ ಮೇಲೆ ಮಸೀದಿ ನಿರ್ಮಿಸಲಾಗಿದೆಯೋ ಇಲ್ಲವೋ ಎಂಬುದನ್ನು ತಿಳಿಯಲು ವಾರಾಣಸಿ ಗ್ಯಾನವಾಪಿ ಮಸೀದಿ ರೀತಿ ಮಥುರಾದ ಶಾಹಿ ಈದ್ಗಾ ಮಸೀದಿಯಲ್ಲೂ ಸಮೀಕ್ಷೆ ನಡೆಸಬೇಕು ಎಂದು ಕೋರಿ ಕೃಷ್ಣ ಜನ್ಮಭೂಮಿ ಟ್ರಸ್ಟ್‌ ಸುಪ್ರೀಂಕೋರ್ಟ್‌ ಮೊರೆ ಹೋಗಿದೆ.

ನವದೆಹಲಿ: ದೇಗುಲದ ಮೇಲೆ ಮಸೀದಿ ನಿರ್ಮಿಸಲಾಗಿದೆಯೋ ಇಲ್ಲವೋ ಎಂಬುದನ್ನು ತಿಳಿಯಲು ವಾರಾಣಸಿ ಗ್ಯಾನವಾಪಿ ಮಸೀದಿ ರೀತಿ ಮಥುರಾದ ಶಾಹಿ ಈದ್ಗಾ ಮಸೀದಿಯಲ್ಲೂ ಸಮೀಕ್ಷೆ ನಡೆಸಬೇಕು ಎಂದು ಕೋರಿ ಕೃಷ್ಣ ಜನ್ಮಭೂಮಿ ಟ್ರಸ್ಟ್‌ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ‘ಮಥುರಾದಲ್ಲಿ ಶಾಹಿ ಈದ್ಗಾ ಮಸೀದಿಯವರು ಕೃಷ್ಣ ಜನ್ಮ ಸ್ಥಳವನ್ನು ಆಕ್ರಮಿಸಿಕೊಂಡು ಮಸೀದಿ ನಿರ್ಮಿಸಿದ್ದಾರೆ. ಅಲ್ಲೇ ಶೌಚಾಲಯವನ್ನು ನಿರ್ಮಿಸಿ ಹಿಂದುಗಳ ಧಾರ್ಮಿಕತೆಗೆ ಧಕ್ಕೆ ತಂದಿದ್ದಾರೆ. ಹೀಗಾಗಿ ಮಸೀದಿಯನ್ನು ವೈಜ್ಞಾನಿಕ ಸಮೀಕ್ಷೆಗೆ ಒಳಪಡಿಸಿ ಅದರಲ್ಲಿ ದೇಗುಲ ಇದ್ದ ಕುರುಹುಗಳನ್ನು ಹುಡುಕಬೇಕು’ ಎಂದು ಟ್ರಸ್ಟ್‌ ಕೋರಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅರ್ಜಿ ಹೈಕೋರ್ಟ್‌ಗೆ ವರ್ಗ

ಈ ಮಧ್ಯೆ ಉತ್ತರಪ್ರದೇಶದ ಮಥುರಾದಲ್ಲಿರುವ ಶ್ರೀಕೃಷ್ಣ ಜನ್ಮಭೂಮಿ ದೇಗುಲ ಸಮುಚ್ಚಯಕ್ಕೆ ಹೊಂದಿಕೊಂಡಿರುವ ಅಕ್ರಮ ನಿರ್ಮಾಣ (ಶಾಹಿ ಈದ್ಗಾ ಮಸೀದಿ)ವನ್ನು ತೆರವುಗೊಳಿಸುವಂತೆ ಕೋರಿ ದೇಗುಲದ ಆಡಳಿತ ನೋಡಿಕೊಳ್ಳುವ ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್‌, ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಈ ಮೂಲಕ ವಿವಾದಿತ 13.37 ಎಕರೆ ಭೂಮಿಯ ಮೇಲಿನ ತನ್ನ ಹಕ್ಕನ್ನು ಬಲಪಡಿಸುವ ಯತ್ನ ಮಾಡಿದೆ. ಸ್ಥಳೀಯ ಕೋರ್ಟಲ್ಲಿ ಸಲ್ಲಿಕೆ ಆಗಿದ್ದ ಈ ಅರ್ಜಿ ಅಲಹಾಬಾದ್‌ ಹೈಕೋರ್ಟ್‌ಗೆ ವರ್ಗವಾಗಿದೆ.

ಶ್ರೀಕೃಷ್ಣ ಜನ್ಮಭೂಮಿ ವಿವಾದ ವಿಚಾರಣೆಗೆ ಹೈಕೋರ್ಟ್‌ ಅಸ್ತು: ಮುಸ್ಲಿಂ ಕಕ್ಷಿದಾರರ ಅರ್ಜಿ ವಜಾ

ಜಾಗದ ವಿವಾದ ಇತ್ಯರ್ಥಪಡಿಸಿಕೊಳ್ಳಲು 1968ರಲ್ಲಿ ಅಧಿಕಾರದಲ್ಲಿದ್ದ ದೇಗುಲ ಮಂಡಳಿ ಮತ್ತು ಶಾಹಿ ಈದ್ಗಾ ಮಸೀದಿ ಮಾಡಿಕೊಂಡಿದ್ದ ಒಪ್ಪಂದವನ್ನು ದೇಗುಲ ಟ್ರಸ್ಟ್‌ ವಿರೋಧಿಸಿದೆ. ಇಡೀ ದೇಗುಲದ ಉಸ್ತುವಾರಿ ನೋಡಿಕೊಳ್ಳುತ್ತಿರುವುದು ಈ ಟ್ರಸ್ಟ್‌. ಆದರೆ 1968ರಲ್ಲಿ ಆದ ಒಪ್ಪಂದಲ್ಲಿ ತಾನು ಭಾಗಿದಾರನಲ್ಲ. ಹೀಗಾಗಿ ಆ ಒಪ್ಪಂದ ರದ್ದುಗೊಳಿಸಿ, ದೇಗುಲಕ್ಕೆ ಹೊಂದಿಕೊಂಡಂತೆ ರಚನೆಯಾಗಿರುವ ಅಕ್ರಮ ನಿರ್ಮಾಣವನ್ನು (Shahi Idga Masjid) ತೆರವುಗೊಳಿಸಬೇಕೆಂದು ಟ್ರಸ್ಟ್‌ ಅರ್ಜಿಯಲ್ಲಿ ಮನವಿ ಮಾಡಿದೆ.

ಆದರೆ ಈ ಒಪ್ಪಂದ ಮತ್ತು ಡಿಕ್ರಿ ಕುರಿತು 1974ರಲ್ಲಿ ನ್ಯಾಯಾಲಯದ ಆದೇಶ ಹೊರಬಿದ್ದಿದೆ. ಇದೀಗ ಬಹಳ ಸಮಯದ ಬಳಿಕ ಮತ್ತೆ ಆ ಪ್ರಕರಣದ ಕುರಿತು ಮೇಲ್ಮನವಿ ಸಲ್ಲಿಸಲು ಸಾಧ್ಯವಿಲ್ಲ ಎಂದು ಮಸೀದಿ ಮಂಡಳಿ ವಾದ ಮಂಡಿಸಿದೆ. ಈ ನಡುವೆ ಮಸೀದಿ ತೆರವಿಗೆ ಒತ್ತಾಯಿಸಿ 2020ರ ಬಳಿಕ ಹಲವು ಅರ್ಜಿಗಳು ಮಥುರಾದ ಕೋರ್ಟ್‌ಗಳಲ್ಲಿ ಸಲ್ಲಿಕೆಯಾಗಿದೆ. ಆದರೆ ಈ ಎಲ್ಲಾ ಅರ್ಜಿಗಳನ್ನು ಒಗ್ಗೂಡಿಸಿ ಸ್ವತಃ ವಿಚಾರಣೆ ನಡೆಸಲು ಅಲಹಾಬಾದ್‌ ಹೈಕೋರ್ಟ್ (alahabad high court) ತೀರ್ಮಾನಿಸಿರುವ ಕಾರಣ ಟ್ರಸ್ಟ್‌ ಸಲ್ಲಿಸಿದ ಅರ್ಜಿಯನ್ನು ಇದೀಗ ಅಲಹಾಬಾದ್‌ ಹೈಕೋರ್ಟ್‌ಗೆ ವರ್ಗಾಯಿಸಲಾಗಿದೆ.

ಮಥುರಾ 'ಹಾಲಿನ ನದಿ', ಹಾಗಾಗಿ ಮದ್ಯ, ಮಾಂಸ ಮಾರಾಟ ನಿಷೇಧ: ಯೋಗಿ ಆದಿತ್ಯನಾಥ್‌!

ಇದುವರೆಗೆ ವಿವಿಧ ಪ್ರಕರಣಗಳಲ್ಲಿ ಶ್ರೀ ಕೃಷ್ಣಜನ್ಮಭೂಮಿ ಟ್ರಸ್ಟ್‌ (Shree Krishna Janmabhoomi Temple trust) ಪ್ರತಿವಾದಿಯಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಅದು ಅರ್ಜಿದಾರನಾಗಿದೆ.