Asianet Suvarna News Asianet Suvarna News

ಚಿತ್ರಹಿಂಸೆ ನೀಡಿ ಚಿರತೆಯ ಹತ್ಯೆ: ವಿಕೃತಿಗೆ ನೆಟ್ಟಿಗರ ಆಕ್ರೋಶ

ಚಿರತೆಯೊಂದಕ್ಕೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

people gave torture wildlife, killed leopard in viral video akb
Author
Bangalore, First Published Aug 21, 2022, 5:15 PM IST

ಚಿರತೆಯೊಂದಕ್ಕೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಚಿರತೆಗಳು ಸಧೃಡವಾಗಿದ್ದರೆ ಯಾರ ಕೈಗೂ ಅಷ್ಟು ಸುಲಭದಲ್ಲಿ ಸಿಗುವುದಿಲ್ಲ. ಬಹುಶಃ ಈ ಚಿರತೆ ಅನಾರೋಗ್ಯಕ್ಕೀಡಾದ ಪರಿಣಾಮವೇನೋ ಜನರ ಕೈಗೆ ಸಿಕ್ಕಿದ್ದು, ವ್ಯಕ್ತಿಯೋರ್ವ ಚಿರತೆಯ ಬಾಲ ಹಾಗೂ ಕಾಲನ್ನು ಹಿಡಿದು ಎಳೆಯುತ್ತಿದ್ದಾನೆ. ಚಿರತೆ ಆತನ ಕೈಯಿಂದ ಬಿಡಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವನ್ಯಜೀವಿಗೆ ಚಿತ್ರಹಿಂಸೆ ನೀಡಿದ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್‌ ಕಸ್ವಾನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇಲ್ಲಿ ಪ್ರಾಣಿಗಳ್ಯಾರು ಎಂಬುದನ್ನು ಗುರುತಿಸಿ ಎಂದು ಈ ವಿಡಿಯೋಗೆ ಕ್ಯಾಪ್ಷನ್ ನೀಡಿದ್ದಾರೆ.

ಪ್ರಾಣಿ ಬಲಿಷ್ಠವಾಗಿದ್ದಾಗ ಮುಟ್ಟುವುದಿರಲಿ ಹತ್ತಿರ ಹೋಗಲು ಕೂಡ ಧೈರ್ಯವಿಲ್ಲದ ಮಾನವ ಶಸ್ತ್ರ ತ್ಯಜಿಸಿದ ಯೋಧನೊಂದಿಗೆ ಹೋರಾಡುವ ಹೇಡಿಯಂತೆ ಈ ಅಸಹಾಯಕ ಚಿರತೆಯ ಹಿಂದೆ ಬಿದ್ದು, ಅದಕ್ಕೆ ಹಿಂಸೆ ನೀಡಿ ವಿಕೃತಿ ಮೆರೆದು ಬಲಿ ಪಡೆದಿದ್ದಾರೆ. ವಿಡಿಯೋದಲ್ಲಿ ಇದೆಂತಾ ಮಾನವೀಯತೆ ಈ ಮುಗ್ಧ ಪ್ರಾಣಿ ಪ್ರಾಣ ಬಿಟ್ಟಿದೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕಾಣಿಸುವಂತೆ ಕೆಂಪು ಟೀ ಶರ್ಟ್ ಜೀನ್ಸ್ ಪ್ಯಾಂಟ್ ಧರಿಸಿದ ವ್ಯಕ್ತಿಯೊಬ್ಬ ಚಿರತೆಯ ಬಾಲ ಹಾಗೂ ಒಂದು ಹಿಂಭಾಗದ ಕಾಲನ್ನು ಹಿಡಿದು ಎಳೆಯುತ್ತಿದ್ದರೆ ಚಿರತೆ ಆತನಿಂದ ಬಿಡಿಸಿಕೊಳ್ಳಲು ಹೆಣಗಾಡುತ್ತಿದೆ. ಈ ದೃಶ್ಯವನ್ನು ನೋಡಿ ಕೆಲವರು ನಗುತ್ತಿದ್ದರೆ, ಮತ್ತೆ ಕೆಲವರು ತಮ್ಮ ಫೋನ್‌ನಲ್ಲಿ ವಿಡಿಯೋ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ಘಟನೆ ನಿಜವಾಗಿಯೂ ಪ್ರಾಣಿಗಳು ಯಾರೂ ಎಂಬುದರ ಬಗ್ಗೆ ಯೋಚನೆ ಮಾಡುವಂತೆ ಮಾಡುತ್ತಿದೆ. 

ಚಿರತೆಗಳು ಸಾಮಾನ್ಯವಾಗಿ ಅಪಾಯಕಾರಿ ಪರಭಕ್ಷಕ ಪ್ರಾಣಿಗಳಾಗಿದ್ದು, ಆದಾಗ್ಯೂ ಹಸಿವಾಗದ ಹೊರತು ಅದು ಬೇಟೆಯಾಡುವುದಿಲ್ಲ. ಆದರೆ ಹೊಟ್ಟೆ ಹಸಿದರೆ ಕಣ್ಣಿಗೆ ಕಂಡ ಬೇಟೆಯನ್ನು ಬಿಡುವುದಿಲ್ಲ. ಅದಾಗ್ಯೂ ಕೆಲ ದಿನಗಳ ಹಿಂದೆ ಮಹಿಳೆಯೊಬ್ಬರು ಚಿರತೆಗೆ ರಾಕಿ ಕಟ್ಟಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ರಾಜಸ್ಥಾನದಲ್ಲಿ ಗಾಯಗೊಂಡ ಚಿರತೆಗೆ ಮಹಿಳೆಯೊಬ್ಬರು ರಾಖಿ ಕಟ್ಟುತ್ತಿರುವ ಫೋಟೋವನ್ನು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) (Indian Forest Service) ಅಧಿಕಾರಿ ಸುಶಾಂತ ನಂದಾ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿರುವ ಚಿರತೆಯನ್ನು ಸ್ಥಳೀಯ ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಕೆಲವೇ ನಿಮಿಷಗಳ ಮೊದಲು ಗಾಯಗೊಂಡ ಪ್ರಾಣಿಗೆ ಗುಲಾಬಿ ಸೀರೆಯುಟ್ಟ ಮಹಿಳೆ ರಾಖಿ ಕಟ್ಟುತ್ತಿರುವುದನ್ನು ಫೋಟೊ ತೋರಿಸಿದೆ.

Shivamogga: ಜೋರಾಗಿ ಹಾರ್ನ್‌ ಬಾರಿಸಿ ಚಿರತೆ ಓಡಿಸಿದ ಪುರೋಹಿತ

ಇತ್ತೀಚೆಗೆ ಕಾಡಿನ ಪ್ರಾಣಿಗಳು (Wild Animal) ಆಹಾರ ಅರಸಿ ನಾಡಿನತ್ತ ಬಂದು ಅಪಾಯಕ್ಕೆ ಸಿಲುಕುವುದು ಸಾಮಾನ್ಯ ಎನಿಸಿದೆ. ಕೆಲದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ಆಹಾರ ಅರಸಿ ಬಂದಿದ್ದ ಚಿರತೆಯೊಂದು ತೆರೆದ ಬಾವಿಗೆ ಬಿದ್ದಿತ್ತು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರ ನೆರವಿನೊಂದಿಗೆ ಚಿರತೆಯನ್ನು ರಕ್ಷಿಸಿದ್ದರು. ಇದಾದ ಬಳಿಕ ಜನನಿಬಿಡ ಹೆದ್ದಾರಿಯಲ್ಲಿ ಕಾಣಿಸಿಕೊಂಡ ಚಿರತೆಯೊಂದಕ್ಕೆ ಕಾರೊಂದು ಡಿಕ್ಕಿ ಆಗಿತ್ತು. ಕಾರು (Car)  ಡಿಕ್ಕಿ ಹೊಡೆದ ರಭಸಕ್ಕೆ ಚಿರತೆ ಕಾರಿನ ಮುಂಭಾಗದ ಬೊನೆಟ್‌ಗೆ ಸಿಲುಕಿದೆ. ನಂತರ ಸವರಿಸಿಕೊಂಡು ವಾಹನದಿಂದ ಬಿಡಿಸಿಕೊಂಡು ಅಲ್ಲಿಂದ ಚಿರತೆ ಪರಾರಿಯಾಗಿದೆ. ಅಪಘಾತದಿಂದ ಚಿರತೆ ಗಂಭೀರ ಗಾಯಗೊಂಡಿದೆ ಎಂಬುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Mandya: ಚಿರತೆ ದಾಳಿಗೆ ಬಲಿಯಾದ ಕರು ಪತ್ತೆ ಹಚ್ಚಿದ ತಾಯಿ ಹಸು!

Follow Us:
Download App:
  • android
  • ios