ನೆಹರು ಅವಹೇಳನ: ನಟಿ ಪಾಯಲ್‌ ರೋಹಟಗಿ ವಶಕ್ಕೆ| ಗುಜರಾತ್‌ನ ಅಹಮದಾಬಾದ್‌ಗೆ ಆಗಮಿಸಿ, ಅಲ್ಲಿರುವ ಪಾಯಲ್‌ರ ನಿವಾಸದಲ್ಲೇ ವಶಕ್ಕೆ ಪಡೆದ ಪೊಲೀಸರು

ರಾಜಸ್ಥಾನ[ಡಿ.16]: ನೆಹರು-ಗಾಂಧಿ ಕುಟುಂಬದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದರು ಎನ್ನಲಾದ ಹಿಂದಿ ನಟಿ ಪಾಯಲ್‌ ರೋಹಟಗಿ ಅವರನ್ನು ರಾಜಸ್ಥಾನ ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ.

ಗುಜರಾತ್‌ನ ಅಹಮದಾಬಾದ್‌ಗೆ ಆಗಮಿಸಿ, ಅಲ್ಲಿರುವ ಪಾಯಲ್‌ರ ನಿವಾಸದಲ್ಲೇ ಆಕೆಯನ್ನು ವಶಕ್ಕೆ ಪಡೆಯಲಾಯಿತು. ‘ಪಾಯಲ್‌ ಅವರು ಮೋತಿಲಾಲ್‌ ನೆಹರು, ಜವಾಹರಲಾಲ್‌ ನೆಹರು, ಇಂದಿರಾ ಗಾಂಧಿ ಹಾಗೂ ಅವರ ಕುಟುಂಬದ ಇತರರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದರು’ ಎಂದು ಆರೋಪಿಸಿ, ಅವರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ರಾಜಸ್ಥಾನದ ಬುಂದಿ ಠಾಣಾ ಪೊಲೀಸರು ಅಕ್ಟೋಬರ್‌ 10ರಂದೇ ಪ್ರಕರಣ ದಾಖಲಿಸಿದ್ದರು.

‘ಉಗ್ರರಿಗಿಂತ ನಿಮ್ಮ ಸ್ಥಿತಿ ಕೆಟ್ಟದಾಗಿದೆ’ ಗುಲಾಂ ನಬಿ ಆಜಾದ್‌ಗೆ ನಟಿ ‘ಕಲ್ಲಿ’ನೇಟು..!

‘ಈ ಹಿನ್ನೆಲೆಯಲ್ಲಿ ವಿಚಾರಣೆಗೆಂದು ಪಾಯಲ್‌ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೂ ಬಂಧಿಸಿಲ್ಲ. ಈಗ ಬುಂದಿ ಠಾಣೆಗೆ ಅವರನ್ನು ಕರೆತರಲಾಗುತ್ತಿದೆ. ಆದರೆ ವಿಚಾರಣೆಗೆ ಅವರು ಸಹಕರಿಸುತ್ತಿಲ್ಲ’ ಎಂದು ಬುಂದಿ ಜಿಲ್ಲಾ ಪೊಲೀಸ್‌ ವರಿಷ್ಠೆ ಮಮತಾ ಗುಪ್ತಾ ಹೇಳಿದ್ದಾರೆ.

ಪಾಯಲ್‌ ಆಕ್ರೋಶ:

ಈ ಬಗ್ಗೆ ಟ್ವೀಟ್‌ ಮಾಡಿರುವ ಪಾಯಲ್‌, ‘ಮೋತಿಲಾಲ್‌ ನೆಹರು ಬಗ್ಗೆ ಗೂಗಲ್‌ನಲ್ಲಿ ಮಾಹಿತಿ ಪಡೆದು ನಾನು ವಿಡಿಯೋ ಮಾಡಿದ್ದಕ್ಕೆ ರಾಜದ್ಥಾನ ಪೊಲೀಸರು ನನ್ನನ್ನು ಬಂಧಿಸಿದ್ದಾರೆ. ಪ್ರಧಾನಿ ಹಾಗೂ ಗೃಹ ಸಚಿವರೇ, ವಾಕ್‌ ಸ್ವಾತಂತ್ರ್ಯ ಅನ್ನೋದೇನು ಕೇವಲ ತಮಾಷೆಯಾ?’ ಎಂದು ಪ್ರಶ್ನಿಸಿದ್ದಾರೆ.

Scroll to load tweet…

‘ನಾನು ಹಿಂದೂ, ಆದರೆ ನನಗೆ ಹಿಂದೂಸ್ಥಾನದಲ್ಲಿರಲು ಭಯವಾಗ್ತಿದೆ’