ಸಂಜಯ್ ರಾವತ್ ಇಡಿ ವಶಕ್ಕೆ ಪಡೆಯುವ ಮೊದಲು ತಾಯಿ ತಬ್ಬಿ ಧೈರ್ಯ ಹೇಳುತ್ತಿರುವ ವಿಡಿಯೋ ವೈರಲ್ ಆಗಿತ್ತು. ಆದರೆ ಸಂಜಯ್ ರಾವತ್ ಈ ರೀತಿ ನಾಟಕ ಮಾಡಿ 672 ಕುಟುಂಬದ ಶಾಪದಿಂದ ತಪ್ಪಿಸಲು ಸಾಧ್ಯವಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಮುಂಬೈ(ಆ.01): ಅವ್ಯವಹಾರ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದಡಿ ಶಿವಸೇನಾ ಸಂಸದ ಸಂಜಯ್ ರಾವತ್‌ರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ನಿನ್ನೆ ಸಂಜಯ್ ರಾವತ್ ಮನೆ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಸಂಜೆ ರಾವತ್ ವಶಕ್ಕೆ ಪಡೆದಿದ್ದರು. ಆದರೆ ಇಡಿ ವಶಕ್ಕೆ ಪಡೆಯುವ ಮೊದಲು ಸಂಜಯ್ ರಾವತ್ ತಾಯಿ ಹಾಗೂ ಕುಟುಂಬ ಸದಸ್ಯರನ್ನು ತಬ್ಬಿ ಧೈರ್ಯ ಹೇಳಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಆದರೆ ಸಂಜಯ್ ರಾವತ್ ಈ ರೀತಿ ನಾಟಕ ಆಡುವ ಅಗತ್ಯವಿಲ್ಲ. ಕೆಲ ಮಾಧ್ಯಮಗಳು ಈ ವಿಡಿಯೋವನ್ನು ಹರಿಬಿಟ್ಟು ಸಂಜಯ್ ರಾವತ್‌ನನ್ನು ಹೀರೋ ಆಗಿ ಬೆಂಬಿಸಲು ಹೊರಟಿದೆ. ಆದರೆ 672 ಕುಟುಂಬಕ್ಕೆ ಮನೆ ನೀಡದೆ ವಂಚಿಸಿದ ಸಂಜಯ್ ರಾವತ್ ಕ್ಯಾಮಾರ ಮುಂದೆ ನಾಟಕವಾಡಿ ಭಾವನಾತ್ಮಕಾಗಿ ಜನರ ಕಣ್ಣಿಗೆ ಮಣ್ಣೆರೆರುಚ್ಚಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸಾಲ, ಚಿನ್ನಾಭರಣ ಮಾರಾಟ ಮಾಡಿ ಮನೆಗಾಗಿ ಹಣ ಸುರಿದಿದ್ದ ಕುಟುಂಬಗಳು ಕಳೆದ 14 ವರ್ಷಗಳಿಂದ ಕಾಯುತ್ತಿದ್ದಾರೆ. ಈ ಮಧ್ಯಮ ವರ್ಗದ ಕುಟುಂಬದಿಂದ 1,000 ಕೋಟಿ ರೂಪಾಯಿಗೂ ಹೆಚ್ಚು ಹಣ ಲೂಟಿ ಹೊಡೆದಿರುವ ಸಂಜಯ್ ರಾವತ್ ಬಂಧನ ಸರಿಯಾಗಿದೆ ಎಂದು ಸಾಮಾಜಿಕ ಜಾಲಾತಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಪತ್ರಾ ಚಾಳ್ ಮರು ನಿರ್ಮಾಣ ಯೋಜನೆ ಮೂಲಕ ಸಂಜಯ್ ರಾವತ್ ಸೂರು ನೀಡುವ ಭರವಸೆ ನೀಡಿದ್ದರು. 672 ಕುಟುಂಬಗಳು ಹಣ ಹೂಡಿಕೆ ಮಾಡಿದೆ. ಆದರೆ 14 ವರ್ಷ ಕಳೆದರೂ ಮನೆ ಸಿಕ್ಕಿಲ್ಲ. 672 ಕುಟುಂಬಗಳ ಪೈಕಿ 150 ಮಂದಿ ಮೃತಪಟ್ಟಿದ್ದಾರೆ. ಕೊನೆಗೂ ಅವರಿಗೆ ಮನೆ ಸಿಗಲೇ ಇಲ್ಲ. ಸಾವಿರ ಕೋಟಿ ರೂಪಾಯಿಗೂ ಮೀರಿದ ಹಗರಣ ಇದಾಗಿದೆ.
ಬಂಧನಕ್ಕೊಳಗಾಗಿರುವ ಸಂಜಯ್ ರಾವತ್ ಇಂದು ಕೋರ್ಟ್‌ಗೆ ಹಾಜರು, ಬೃಹತ್ ಪ್ರತಿಭಟನೆಗೆ ಶಿವಸೇನೆ ರೆಡಿ!
ಪತ್ರಾ ಚಾಳ್ ಮನೆ ನವೀಕರಣ ಯೋಜನೆಯಲ್ಲಿ 1039 ಕೋಟಿ ರು. ಹಗರಣ ನಡೆದಿದೆ ಅನ್ನೋ ಆರೋಪವಿದೆ. ಈ ಕುರಿತು ಮನೆಗಾಗಿ ಹಣ ಹೂಡಿಕೆ ಮಾಡಿದ ಕುಟುಂಬಗಳು ದೂರು ನೀಡಿತ್ತು. ಈ ಅಕ್ರಮದಲ್ಲಿ ಸಂಜಯ್ ರಾವತ್ ಮಾತ್ರವಲ್ಲ, ರಾವತ್ ಪತ್ನಿ ಹಾಗೂ ಕೆಲ ಉದ್ಯಮ ಸ್ನೇಹಿತರು ಭಾಗಿಯಾಗಿರುವ ಆರೋಪವಿದೆ. ರಾವತ್ ಉದ್ಯಮ ಜೊತೆಗಾರರಿಗೆ ಸೇರಿದ 12 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ ಜಪ್ತಿ ಮಾಡಿದೆ.
1000 ಕೋಟಿ ರೂಪಾಯಿ ಲೂಟಿ ಮಾಡಿದ ಸಂಜಯ್ ರಾವತ್ ತಾಯಿ ತಬ್ಬಿಹಿಡಿದು ಜನರನ್ನು ಮರಳು ಮಾಡುವ ವಿಡಿಯೋವನ್ನು ಮಾಧ್ಯಮಗಳು ಪ್ರಸಾರ ಮಾಡಬಾರದು ಎಂದು ಸಾಮಾಜಿಕಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಇಡಿ ವಶಕ್ಕೆ ಪಡೆಯುವ ಮೊದಲು ಮಗನ ತಬ್ಬಿ ಧೈರ್ಯ ತುಂಬಿದ ಸಂಜಯ್ ರಾವತ್ ತಾಯಿ ,
ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಶಿವಸೇನಾ ಸಂಸದ ಸಂಜಯ್ ರಾವುತ್ ಅವರಿಗೆ ಇಡಿ ಎರಡು ಬಾರಿ ನೋಟಿಸ್ ನೀಡಿತ್ತು. ಮೊದಲ ಬಾರಿಗೆ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಕಾರಣ ನೀಡಿ ವಿಚಾರಣೆ ಹಾಜರಾಗಿಲ್ಲ. ಇಷ್ಟೇ ಅಲ್ಲ ಎರಡು ವಾರಗಳ ವಿಚಾರಣೆಯಿಂದ ವಿನಾಯಿತಿ ನೀಡಲು ಮನವಿ ಮಾಡಿದ್ದರು. ಇನ್ನು ಜುಲೈ 1ಕ್ಕೆ ಹಾಜರಾಗಲು ಸೂಚಿಸಿತ್ತು. ಆದರೆ ಕಲಾಪದ ನೆಪವೊಡ್ಡಿ ವಿಚಾರಣೆಗೆ ಗೈರಾಗಿದ್ದ ಸಂಜಯ್ ರಾವತ್ ಮನೆಗೆ ದಾಳಿ ಮಾಡಿದ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.
