Asianet Suvarna News Asianet Suvarna News

ರಾಮಮಂದಿರಕ್ಕೆ ಭರ್ಜರಿ 10 ಕೋಟಿ ರು. ದೇಣಿಗೆ!

ರಾಮಮಂದಿರಕ್ಕೆ ಭರ್ಜರಿ 10 ಕೋಟಿ ರು. ದೇಣಿಗೆ| ಪಟನಾದ ಮಹಾವೀರ ಮಂದಿರ ಟ್ರಸ್ಟ್‌ನಿಂದ ದೇಣಿಗೆ ಘೋಷಣೆ| ಅಯೋಧ್ಯೆಗೆ ತೆರಳಿ 2 ಕೋಟಿ ರು. ಚೆಕ್‌ ಹಸ್ತಾಂತರ: ಮಂದಿರ

Patna Mahavir temple to donate Rs 10 crores for Ayodhya Ram temple
Author
Bangalore, First Published Feb 10, 2020, 11:55 AM IST

ಪಟನಾ[ಫೆ.10]: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಟ್ರಸ್ಟ್‌ ರಚನೆ ಮಾಡಿದ ಬೆನ್ನಲ್ಲೇ, ರಾಮಮಂದಿರ ನಿರ್ಮಾಣಕ್ಕಾಗಿ ಪಟನಾದ ಮಹಾವೀರ್‌ ದೇವಸ್ಥಾನವು ಭರ್ಜರಿ 10 ಕೋಟಿ ರು. ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದೆ. ಈ ಮೂಲಕ ಐತಿಹಾಸಿಕ ಪ್ರಸಿದ್ಧವಾದ ಅಯೋಧ್ಯೆಯಲ್ಲಿನ ರಾಮ ಮಂದಿರ ನಿರ್ಮಾಣಕ್ಕಾಗಿ ಇದೇ ಮೊದಲ ಬಾರಿಗೆ ಈ ದೊಡ್ಡ ಪ್ರಮಾಣದ ದೇಣಿಗೆ ಹರಿದುಬಂದಂತಾಗಿದೆ.

ರಾಮ ಮಂದಿರಕ್ಕೆ ಸಮಿತಿ: ಸದನದಲ್ಲೇ ಪ್ರಧಾನಿ ಮೋದಿ ಘೋಷಣೆ!

ಅಲ್ಲದೆ, ಈ ಬಗ್ಗೆ ಭಾನುವಾರ ಮಾತನಾಡಿದ ಮಹಾವೀರ ಮಂದಿರದ ಟ್ರಸ್ಟ್‌ ಕಾರ್ಯದರ್ಶಿ ಕಿಶೋರ್‌ ಕುನಾಲ್‌, ‘ರಾಮ ಮಂದಿರ ನಿರ್ಮಾಣಕ್ಕಾಗಿ ಕಂತುಗಳ ರೂಪದಲ್ಲಿ 10 ಕೋಟಿ ರು. ದೇಣಿಗೆ ನೀಡುತ್ತೇವೆ. ಈ ಪ್ರಕಾರ, ಶೀಘ್ರವೇ ಅಯೋಧ್ಯೆಗೆ ತೆರಳಿ ಮೊದಲ ಹಂತದ 2 ಕೋಟಿ ರು. ಚೆಕ್‌ ಅನ್ನು ನೀಡುತ್ತೇನೆ’ ಎಂದು ಹೇಳಿದರು.

ರಾಮಮಂದಿರ ನಿರ್ಮಾಣಕ್ಕೆ ದಿಟ್ಟ ಹೆಜ್ಜೆ, ಟ್ರಸ್ಟ್ ರಚನೆಗೆ ಗ್ರೀನ್ ಸಿಗ್ನಲ್

ಅಯೋಧ್ಯೆಯಲ್ಲಿರುವ ವಿವಾದಿತ ಪ್ರದೇಶವನ್ನು ಹಿಂದು ಪಕ್ಷಕ್ಕೆ ಹಸ್ತಾಂತರಿಸಿದ್ದ ಸುಪ್ರೀಂ ಕೋರ್ಟ್‌, ಅಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ 3 ತಿಂಗಳ ಒಳಗಾಗಿ ಟ್ರಸ್ಟ್‌ವೊಂದನ್ನು ರಚಿಸುವಂತೆ ಕೇಂದ್ರ ಸ

Follow Us:
Download App:
  • android
  • ios