Asianet Suvarna News Asianet Suvarna News

Hindutva Controversy: 'ರಾಹುಲ್ ಆದೇಶದಂತೆ ಕಾಂಗ್ರೆಸ್ ನಾಯಕರು ಹಿಂದುತ್ವ ವಿರೋಧಿ ಹೇಳಿಕೆ ಕೊಡ್ತಾರೆ!'

* ಕಾಂಗ್ರೆಸ್‌ ನಾಯಕರ ಹಿಂದುತ್ವ ವಿರೋಧಿ ಹೇಳಿಕೆ

* ಕಾಂಗ್ರೆಸ್‌ ಹೇ:ಳಿಕೆಗೆ ಬಿಜೆಪಿ ತಿರುಗೇಟು

* ರಾಹುಲ್ ಗಾಮಧಿ ಮಾತಿನಂತೆ ಕಾಂಗ್ರೆಸ್‌ ನಾಯಕರು ವಿವಾದಾತ್ಮಕ ಹೇಳಿಕೆ ಕೊಡುತ್ತಿದ್ದಾರೆ

Pathological Hatred BJP Leader Sambit Patra Sneers At Rahul Gandhi On Hindutva Row pod
Author
Bangalore, First Published Nov 13, 2021, 2:54 PM IST

ನವದೆಹಲಿ(ನ.13): ಕಾಂಗ್ರೆಸ್ ನಾಯಕತ್ವವು ಹಿಂದುತ್ವದ (Hindutva) ಬಗ್ಗೆ "ದ್ವೇಷ ಭಾವನೆ" ಹೊಂದಿದೆ ಎಂದು ಭಾರತೀಯ ಜನತಾ ಪಕ್ಷ (BJP) ಶುಕ್ರವಾರ ಆರೋಪಿಸಿದೆ. ಹಿಂದುತ್ವ ಟೀಕಿಸಿದ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು (Rahul Gandhi) ತರಾಟೆಗೆ ತೆಗೆದುಕೊಂಡಿರುವ ಆಡಳಿತ ಪಕ್ಷ ಅವರ ನಿರ್ದೇಶನದಂತೆ, ಸಲ್ಮಾನ್ ಖುರ್ಷಿದ್ (Salman Khurshid), ಶಶಿ ತರೂರ್ ಮತ್ತು ಪಿ ಚಿದಂಬರಂ ಅವರಂತಹ ನಾಯಕರು ಹಿಂದೂ ಧರ್ಮದ ವಿರುದ್ಧ 'ಅನಿಯಂತ್ರಿತ ಹೇಳಿಕೆ' ನೀಡುತ್ತಿರುವುದಾಗಿ ಆರೋಪಿಸಿದ್ದಾರೆ. ಹಿಂದೂ ಧರ್ಮ ಮತ್ತು ಹಿಂದುತ್ವವನ್ನು ವಿಭಿನ್ನ ಪರಿಕಲ್ಪನೆಗಳು ಮತ್ತು ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸಿದ್ಧಾಂತವು ದ್ವೇಷವನ್ನು ಹರಡುತ್ತದೆ ಎಂದು ರಾಹುಲ್ ಗಾಂಧಿ ಕಿಡಿ ಕಾರಿದ ಬೆನ್ನಲ್ಲೇ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ತಿರುಗೇಟು ನೀಡಿದ್ದಾರೆ.

ಅವಕಾಶ ಸಿಕ್ಕಾಗಲೆಲ್ಲಾ ಹಿಂದೂ ಧರ್ಮದ (Hindu Religion)ಮೇಲೆ ದಾಳಿ ನಡೆಸುವುದು ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ಲಕ್ಷಣವಾಗಿದೆ. ಅವರು ಖಂಡಿತವಾಗಿಯೂ ರಾಮನಲ್ಲಿ ತಮ್ಮ ಅಪನಂಬಿಕೆಯನ್ನು ವ್ಯಕ್ತಪಡಿಸುತ್ತಾರೆ ಎಂದು ಪಾತ್ರಾ ಕಿಡಿ ಕಾರಿದ್ದಾರೆ. ಕಾಂಗ್ರೆಸ್ ನಾಯಕರಾದ ಶಶಿ ತರೂರ್ (Shashi Tharoor) ಮತ್ತು ಚಿದಂಬರಂ (P Chidambaram) ಅವರು ಹಿಂದೂ ಪಾಕಿಸ್ತಾನ್, ಹಿಂದೂ ತಾಲಿಬಾನ್ (Taliban) ಮತ್ತು ಕೇಸರಿ ಭಯೋತ್ಪಾದನೆಯಂತಹ ಪದಗಳನ್ನು ಬಳಸುತ್ತಿರುವುದನ್ನು ಉಲ್ಲೇಖಿಸಿದ ಪಾತ್ರಾ, ಇದು ಅವರ ವೈಯಕ್ತಿಕ ಹೇಳಿಕೆಗಳಲ್ಲ. ವಾಸ್ತವವಾಗಿ, ಇದು ಕಾಕತಾಳೀಯವಲ್ಲ, ಆದರೆ ಪ್ರಯೋಗ. ಈ ಪ್ರಯೋಗಾಲಯದ ದೊಡ್ಡ ನಾಯಕ ರಾಹುಲ್ ಗಾಂಧಿ. ಶಶಿ ತರೂರ್, ಸಲ್ಮಾನ್ ಖುರ್ಷಿದ್, ದಿಗ್ವಿಜಯ್ ಸಿಂಗ್ (Digvijay Singh) ಮತ್ತು ಮಣಿಶಂಕರ್ ಅಯ್ಯರ್ ಅವರಂತಹವರು ರಾಹುಲ್ ಗಾಂಧಿಯವರ ಬೋಧನೆ ಮತ್ತು ಹೇಳಿಕೆಗಳ ನಂತರ ಹಿಂದೂ ಧರ್ಮದ ವಿರುದ್ಧ ಅತಿರೇಕದ ಹೇಳಿಕೆಗಳನ್ನು ನೀಡುತ್ತಾರೆ ಎಂದು ಗುಡುಗಿದ್ದಾರೆ.

ಕಾಂಗ್ರೆಸ್ ನಾಯಕರು ಹಿಂದುತ್ವದ ಬಗ್ಗೆ ದ್ವೇಷ ಭಾವನೆ ಹೊಂದಿದ್ದಾರೆ ಮತ್ತು ಇದಕ್ಕಾಗಿ ಅವರು ಗಾಂಧಿ ಕುಟುಂಬದ ಬೆಂಬಲವನ್ನು ಪಡೆಯುತ್ತಾರೆ ಎಂದು ಅವರು ಆರೋಪಿಸಿದ್ದಾರೆ. ಇದರಲ್ಲಿ ಭಯೋತ್ಪಾದನೆಗಿಂತ ಹಿಂದೂಗಳಿಂದ ದೇಶಕ್ಕೆ ಹೆಚ್ಚು ಅಪಾಯ ಎಂದು ರಾಹುಲ್ ಗಾಂಧಿ (Rahul Gandhi) ಹೇಳಿದ್ದರು. ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಲು ಅವರು ಈ ಹಿಂದೆ ನೀಡಿದ ಕೆಲವು ಹೇಳಿಕೆಗಳನ್ನು ಉಲ್ಲೇಖಿಸಿದ್ದಾರೆ. ಭಾರತೀಯ ಸಂಸ್ಕೃತಿಯು ಭಾರತದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳನ್ನು ಉಂಟುಮಾಡುತ್ತದೆ ಎಂದು ರಾಹುಲ್ ಹೇಳಿದ್ದರು ಮತ್ತು ದೇವಸ್ಥಾನಕ್ಕೆ ಹೋಗುವವರು ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಸುತ್ತಾರೆ ಎಂದು ಹೇಳಿದ್ದರು.

ಹಿಂದುತ್ವವನ್ನು ಬೊಕೊ ಹರಾಮ್ (Boko haram) ಮತ್ತು ಐಸಿಸ್‌ನಂತಹ ಭಯೋತ್ಪಾದಕ ಗುಂಪುಗಳ ಜಿಹಾದಿ ಇಸ್ಲಾಂನೊಂದಿಗೆ (Islam) ಹೋಲಿಸಿದ್ದಕ್ಕಾಗಿ ಆಡಳಿತ ಪಕ್ಷವು ತನ್ನ ಪುಸ್ತಕದಲ್ಲಿ ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರನ್ನು ಟೀಕಿಸಿದ ಒಂದು ದಿನದ ನಂತರ ರಾಹುಲ್ ಗಾಂಧಿಯವರ ಮೇಲೆ ಬಿಜೆಪಿ ಕಿಡಿ ಕಾರಿದೆ ಎಂಬುವುದು ಉಲ್ಲೇಖನೀಯ.

ಇದುವರೆಗೂ ರಾಹುಲ್ ಗಾಂಧಿ ಹೇಳುತ್ತಿದ್ದುದನ್ನು ಖುರ್ಷಿದ್ ಬೆಂಬಲಿಸಿದ್ದಾರೆ ಎಂದು ಪಾತ್ರಾ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ದೇಶದ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದರು. ಕಾಂಗ್ರೆಸ್‌ನ ಸಿದ್ಧಾಂತವು ಅಪರಿಮಿತ ಶಕ್ತಿಯ "ಸುಂದರ ರತ್ನ"ದಂತೆ ಮತ್ತು ಜೀವಂತವಾಗಿದೆ ಆದರೆ ಬಿಜೆಪಿಯ "ದ್ವೇಷ" ಸಿದ್ಧಾಂತವು ಅದನ್ನು ಹಿಂದಿಕ್ಕಿದೆ ಎಂದು ಗಾಂಧಿ ಶುಕ್ರವಾರ ಹೇಳಿದರು. ಹಿಂದೂ ಮತ್ತು ಹಿಂದುತ್ವ ವಿಭಿನ್ನ ಪರಿಕಲ್ಪನೆಗಳು ಎಂದು ಹೇಳಿದರು.

Follow Us:
Download App:
  • android
  • ios