ಮಧ್ಯಪ್ರದೇಶ(ಜೂ.13): ಕೇಂದ್ರ ಸರ್ಕಾರ ಲಾಕ್‌ಡೌನ್ ಸಡಿಲಿಕೆ ಮಾಡಿ ಮಂದಿರಗಳ ತೆರೆಯಲು ಹಾಗೂ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಿದೆ. ಆದರೆ ಸಾಮಾಜಿಕ ಅಂತರ, ಮಾಸ್ಕ್, ಶುಚಿತ್ವಕ್ಕೆ ಕಡ್ಡಾಯ ಮಾಡಲಾಗಿದೆ. ಮಧ್ಯಪ್ರದೇಶದ ಪಶುಪತಿನಾಥ ಮಂದಿರ ಇದೀಗ ಭಕ್ತರಿಗೆ ಕೊರೋನಾ ಹರಡದಂತೆ ತಡೆಯಲು ಆಟೋಮ್ಯಾಟಿಕ್ ಸೆನ್ಸಾರ್ ಗಂಟೆ ಅಳವಡಿಸಿದೆ. ಈ ಮೂಲಕ ಭಕ್ತರು ಗಂಟೆಯನ್ನು ಕೈಯಿಂದ ಮುಟ್ಟದೆ, ಗಾಳಿಯಲ್ಲಿ ಗಂಟೆ ಬಾರಿಸಿದರೆ ಸಾಕು. ದೇವಸ್ಥಾನದ ಗಂಟೆ ಮೊಳಗಲಿದೆ.

ಬೆಂಗಳೂರಿನ ತಿರುಪತಿ ತಿಮ್ಮಪ್ಪನಿಗಿಲ್ಲ ಲಾಕ್ ಡೌನ್ ಎಫೆಕ್ಟ್, 5 ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿ

ಆಟೋಮ್ಯಾಟಿಕ್ ಸೆನ್ಸಾರ್ ಕಾರಣ ಭಕ್ತರು, ಗಂಟೆಯನ್ನು ಮುಟ್ಟಿ ಅಥವಾ ಹಿಡಿದು ಬಾರಿಸಬೇಕಿಲ್ಲ. ಬದಲಾಗಿ ಗಾಳಿಯಲ್ಲಿ ಗಂಟೆ ಬಾರಿಸದಂತೆ ಮಾಡಿದರೆ ಸಾಕು. ಸೆನ್ಸಾರ್ ಇದನ್ನು ಗ್ರಹಿಸಿ ಗಂಟೆ ಶಬ್ದ ಮೊಳಗಿಸುತ್ತದೆ. ಇದರಿಂದ ಪ್ರತಿಯೊಬ್ಬರು ಗಂಟೆಯನ್ನು ಮುಟ್ಟುವುದು ಹಾಗೂ ಅದರಿಂದ ಕೊರೋನಾ ವೈರಸ್ ಹರಡುವುದು ತಪ್ಪಲಿದೆ. 

 

ಕೊರೋನಾ ವೈರಸ್ ಕಾರಣ ಈ ರೀತಿಯ ಸೆನ್ಸಾರ್ ಗಂಟೆ ಬಹಳ ಮುಖ್ಯ. ದೇವರಲ್ಲಿ ಪ್ರಾರ್ಥನೆ ಮಾಡುವಾಗ ಗಂಟೆ ಬಾರಿಸಬೇಕು. ಆದರೆ ಕೊರೋನಾ ಕಾರಣ ಎಲ್ಲಾ ಭಕ್ತರು ಗಂಟೆ ಬಾರಿಸಿ ಅದೇ ಕೈಯಿಂದ ಪ್ರಸಾದ ಸ್ವೀಕರಿಸಿದರೆ ಕೊರೋನಾ ಹರಡುವ ಸಾಧ್ಯತೆ ಇದೆ. ಇದೀಗ ಸೆನ್ಸಾರ್ ಮೂಲಕ ಗಂಟೆ ಬಾರಿಸುವುದರಿಂದ ಕೊರೋನಾ ಆತಂಕ ಹಾಗೂ ಹರಡುವಿಕೆಯನ್ನು ತಪ್ಪಿಸಬಹುದು ಎಂದು ಪಶುಪತಿನಾಥ ಮಂದಿರಕ್ಕೆ ಆಗಮಿಸಿದ ಭಕ್ತರು ಹೇಳಿದ್ದಾರೆ.