ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸೀಟು ಹಂಚಿಕೆ ಮಾಡಿದೆ. ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿಗೆ 5 ಸ್ಥಾನ ನೀಡಲಾಗಿದೆ. ಇದು ಎನ್‌ಡಿಎ ಒಕ್ಕೂಟದ ಆರ್‌ಎಲ್‌ಜೆಪಿ ಅಸಮಧಾನಕ್ಕೆ ಕಾರಣವಾಗಿದೆ. ಆರ್‌ಎಲ್‌ಜೆಪಿಗೆ ಒಂದೇ ಒಂದು ಸ್ಥಾನ ನೀಡಿಲ್ಲ. ಇದರಿಂದ ರೊಚ್ಚಿಗೆದ್ದ ಆರ್‌ಎಲ್‌ಜೆಪಿ ನಾಯಕ ಪಶುಪತಿ ಪರಾಸ್ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ನವದೆಹಲಿ(ಮಾ.19) ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಸೀಟು ಹಂಚಿಕೆ ಎಲ್ಲಾ ಪಕ್ಷಗಳಿಗೂ ತಲೆನೋವಾಗುತ್ತಿದೆ. ಇಂಡಿಯಾ ಒಕ್ಕೂಟದಲ್ಲಿ ಹಲವು ಪಕ್ಷಗಳು ಇದೇ ಸೀಟು ಹಂಚಿಕೆ ಅಸಮಮಾಧಾನದಿಂದ ಹೊರನಡೆದಿದೆ. ಇತ್ತ ಎನ್‌ಡಿಎ ಒಕ್ಕೂಟಕ್ಕೂ ಸಂಕಷ್ಟ ಹೆಚ್ಚಾಗುತ್ತಿದೆ. ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿ ಒಕ್ಕೂಟ ಸೀಟು ಹಂಚಿಕೆ ಮಾಡಿದೆ. ಚಿರಾಗ್ ಪಾಸ್ವಾನ್ ಎಲ್‌ಜೆಪಿ ಪಕ್ಷಕ್ಕೆ 5 ಸ್ಥಾನ ದಕ್ಕಿದೆ. ಇದು ಆರ್‌ಎಲ್‌ಜೆಪಿ ನಾಯಕ ಪಶುಪತಿ ಪರಾಸ್‌ ಅಸಮಾಧಾನಕ್ಕೆ ಕಾರಣವಾಗಿದೆ. ತಮ್ಮ ಪಕ್ಷಕ್ಕೆ ಒಂದೂ ಸ್ಥಾನ ನೀಡಿದೆ ಚಿರಾಗ್ ಪಾಸ್ವಾನ್‌ಗೆ 5 ಸ್ಥಾನ ನೀಡಿರುವುದರಿಂದ ಇದೀಗ ಪಶುಪತಿ ಪರಾಸ್ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಪಶುಪತಿ ಪರಾಸ್ ಎನ್‌ಡಿಎ ಮೈತ್ರಿಯಿಂದ ಹೊರಬರುತ್ತಾರಾ? ಅನ್ನೋ ಕುರಿತ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಎನ್‌ಡಿಎ ಮೈತ್ರಿಯ ಭಾಗವಾಗಿರುವ ಆರ್‌ಎಲ್‌ಜೆಪಿ ಕನಿಷ್ಠ 2 ಸ್ಥಾನದ ನಿರೀಕ್ಷೆಯಲ್ಲಿತ್ತು. ಇತ್ತ ಚಿರಾಗ್ ಪಾಸ್ವಾನ್ ಸಮಾಧಾನಿಸಲು 5 ಸ್ಥಾನ ನೀಡಲಾಗಿದೆ. ಈ ಮೂಲಕ ನಮ್ಮ ಪಕ್ಷದ ಸ್ಥಾನವನ್ನೂ ಚಿರಾಗ್ ಪಾಸ್ವಾನ್ ಪಕ್ಷಕ್ಕೆ ನೀಡಲಾಗಿದೆ ಅನ್ನೋ ಆರೋಪಗಳು ಕೇಳಿಬಂದಿದೆ.

ಕರ್ನಾಟಕದಿಂದ ಹೆಚ್ಚು ಸ್ಥಾನ ಗೆದ್ದು ಮೋದಿಗೆ ಗಿಫ್ಟ್ ಕೊಡುತ್ತೇವೆ: ನಿಖಿಲ್ ಕುಮಾರಸ್ವಾಮಿ

ಬಿಹಾರದಲ್ಲಿ ಎನ್‌ಡಿಎ ತನ್ನ ಸೀಟು ಹಂಚಿಕೆ ಅಂತಿಮಗೊಳಿಸಿದ ಬೆನ್ನಲ್ಲೇ ಈ ಅಸಮಾಧಾನ, ರಾಜೀನಾಮೆ ಹೊರಬಿದ್ದಿದೆ. ರಾಜ್ಯದ 40 ಲೋಕಸಭಾ ಸೀಟುಗಳಲ್ಲಿ ಬಿಜೆಪಿ 17, ಜೆಡಿಯು 16, ಎಲ್‌ಜೆಪಿ (ರಾಮ್‌ ವಿಲಾಸ್‌) 4, ಉಪೇಂದ್ರ ಕುಶ್ವಾಹಾ ಮತ್ತು ಜಿತೇನ್ ರಾಮ್ ಮಾಂಝಿ ಅವರ ಪಕ್ಷಗಳು ತಲಾ 1 ಸ್ಥಾನ ಪಡೆದಿವೆ. ಬಿಜೆಪಿ ಕಳೆದ ಬಾರಿಯಂತೆ ಈ ಸಲವೂ 17, ಜೆಡಿಯು 2019 ರಲ್ಲಿ ಸ್ಪರ್ಧಿಸಿದ್ದಕ್ಕಿಂತ ಒಂದು ಕಡಿಮೆ, ಹಿಂದಿನ 6ರ ಬದಲು ಎಲ್‌ಜೆಪಿ 5 ಸ್ಥಾನ ಪಡೆದಿವೆ.

ಹಾಜಿಪುರದಿಂದ ಎಲ್‌ಜೆಪಿ (ರಾಮ್‌ ವಿಲಾಸ್) ನಾಯಕ ಚಿರಾಗ್‌ ಪಾಸ್ವಾನ್‌ ಸ್ಪರ್ಧಿಸಲಿದ್ದಾರೆ. ಎಲ್‌ಜೆಪಿ ಇನ್ನೊಂದು ಬಣದ ನಾಯಕ ಪಶುಪತಿ ಪಾರಸ್‌ಗೆ ಯಾವುದೇ ಸೀಟು ಹಂಚಿಕೆ ಮಾಡದಿರುವುದು ಇದೀಗ ರಾಜೀನಾಮೆಗೆ ಕಾರಣವಾಗಿದೆ. ಪಶುಪತಿ ಪರಾಸ್ ಜೊತೆ ಬಿಜೆಪಿ ನಾಯಕರು ಮಾತುಕತೆ ನಡೆಸಿದ್ದಾರೆ. ಆದರೆ ಸಮಾಧಾನಗೊಳ್ಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

ದೇಶದಲ್ಲಿ ಬಡತನ ಹೋಗಬೇಕು ಅಂದ್ರೆ ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಕರ್ನಾಟಕದಲ್ಲಿ ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಅಸಮಧಾನ ಇನ್ನೂ ತಣ್ಣಗಾಗಿಲ್ಲ. ಈಗಾಲೇ ಬಂಡಾಯ ಸ್ಪರ್ಧೆ ಘೋಷಣೆ ಮಾಡಿದ್ದಾರೆ. ನಿನ್ನೆ(ಮಾ.18) ಶಿವಮೊಗ್ಗದಲ್ಲಿ ನಡೆದ ಪ್ರಧಾನಿ ಮೋದಿ ಸಮಾವೇಶಕ್ಕೆ ಗೈರಾಗಿದ್ದಾರೆ. ಬಿಜೆಪಿ ನಾಯಕರು, ಚುನಾವಣಾ ಉಸ್ತುವಾರಿ ಸೇರಿದಂತೆ ಹಲವು ನಾಯಕರು ಮಾತುಕತೆ ನಡೆಸಿದ್ದಾರೆ. ತಮ್ಮ ಪುತ್ರನಿಕೆ ಟಿಕೆಟ್ ಸಿಗದ ಕಾರಣಕ್ಕೆ ಆಕ್ರೋಶಗೊಂಡಿರುವ ಈಶ್ವರಪ್ಪ, ಶಿವಮೊಗ್ಗದಿಂದ ಬಿವೈ ರಾಘವೇಂದ್ರ ವಿರುದ್ದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.