Asianet Suvarna News Asianet Suvarna News

ದೇಶದಲ್ಲಿ ಬಡತನ ಹೋಗಬೇಕು ಅಂದ್ರೆ ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಇಂದು ಇಡೀ ಪ್ರಪಂಚದಲ್ಲಿ ಭಾರತ 5ನೇ ಆರ್ಥಿಕ ದೇಶವಾಗಿ ಹೊರ ಹೊಮ್ಮಿದೆ. ಭಾರತದ ಗಟ್ಟು ( ಹಣ) ಜಾಸ್ತಿ ಮಾಡಿದ್ದು ಪ್ರಧಾನಿ ಮೋದಿ. ಈಗ ಇಡೀ ಪ್ರಪಂಚ ಭಾರತದ ಮುಂದೆ ತಲೆ ಬಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.

Lok sabha election 2024 Union Minister Pralhad Joshis speech at Shiggavi BJP convention rav
Author
First Published Mar 17, 2024, 10:22 PM IST

ಹಾವೇರಿ (ಮಾ.17): ಕಳೆದ 3 ಭಾರಿ ಈ ಬಾಗದಲ್ಲಿ ನಾನು ಪ್ರತಿನಿಧಿಸಿದ್ದೇನೆ. ಮೂರು ಬಾರಿಯೂ ನನಗೆ ಈ ಭಾಗದ ಜನರು ಬಹು ಅಂತರದ ಮತ ನೀಡಿದ್ದೀರಿ. ನಿಮ್ಮ ಆಶೀರ್ವಾದದಿಂದ ದೇಶದ ಮೂರು ಪ್ರಮುಖ ಖಾತೆಯನ್ನ ಪ್ರಧಾನಿ ಮೋದಿಯವರು ನನಗೆ ನೀಡಿದರು. ಅದಕ್ಕೆ ಕಾರಣ ನೀವೇ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.

ಇಂದು ಶಿಗ್ಗಾವಿಯ ಬಸವರಾಜ ಬೊಮ್ಮಾಯಿ ನಿವಾಸದ ಬಳಿ ಸಭಾಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು, ಈ ಬಾರಿಯ ಲೋಕಸಭೆ ಚುನಾವಣೆ ದೇಶದ ಭವಿಷ್ಯಕ್ಕಾಗಿ. 75 ವರ್ಷದಲ್ಲಿ ದೇಶದ ಪರಿಸ್ಥಿತಿ ಹೇಗಿತ್ತು ಎಂಬುದು ನಿಮಗೆ ಗೊತ್ತಿದೆ. ಪ್ರಧಾನಿ ಮೋದಿ  ಬಂದ ಬಳಿಕ ದೇಶದ ಭವಿಷ್ಯ ಜನರಿಗೆ ಕಾಣುತ್ತಿದೆ. ದೇಶದಲ್ಲಿ ಭ್ರಷ್ಟಾಚಾರ ತಡೆಯಲು ನಾವು ಐದು ವರ್ಷ ತೆಗೆದುಕೊಂಡೆವು. ದೇಶದಲ್ಲಿ ಎಷ್ಟು ಭ್ರಷ್ಟಾಚಾರ ತುಂಬಿತುಳುಕುತ್ತಿತ್ತು ಎಂದರೆ ದೇಶದ ಬ್ಯಾಂಕ್‌ಗಳು ಮುಚ್ಚುವ ಸ್ಥಿತಿಗೆ ಬಂದಿದ್ದವು. ಆಗ ಪ್ರಧಾನಿ ಮೋದಿ ಅಂದು ಅವರು ಒಂದು ಯೋಚನೆ ಮಾಡಿದರು. ಬ್ಯಾಂಕ್‌ನಲ್ಲಿ ಕೋಟ್ಯಂತರ ರೂಪಾಯಿ ಸಾಲ ಮಾಡಿ ದೇಶಬಿಟ್ಟು ಓಡಿಹೋದವರ ವಿರುದ್ಧ ಕಾನೂನು ತಂದೆವು. ಅದರ ಪರಿಣಾಮ 85 ಸಾವಿರ ಕೋಟಿ ನಷ್ಟದಲ್ಲಿ ಇರೋ ಬ್ಯಾಂಕ್ ಗಳು ಇಂದು ಲಾಭದಲ್ಲಿವೆ. 1 ಲಕ್ಷ 500 ಸಾವಿರ ಕೋಟಿಯಷ್ಟು ದೇಶದ ಬ್ಯಾಂಕ್ ಲಾಭದಲ್ಲಿವೆ ಎಂದರು.

ದೇಶದಲ್ಲಿ ಜನರಿಗೆ 5 ಕೆಜೆ ಅಕ್ಕಿ ನೀಡಿದ್ದು ನಾವು. ಆದರೆ ಕೇಂದ್ರ ಸರ್ಕಾರ ನೀಡಿದ ಅಕ್ಕಿ ತಮ್ಮದೆಂದು ಹೇಳಿಕೊಳ್ಳುವ ರಾಜ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕು. ಕಾಂಗ್ರೆಸ್ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ಹೀಗಾಗಿ ಕೇಂದ್ರ ಸರ್ಕಾರದ ಅಕ್ಕಿ ಪಾಕೆಟ್ ಮೇಲೆ ತಮ್ಮ ಭಾವಚಿತ್ರ ಹಾಕ್ತಾರೆ. ಸುಳ್ಳು ಹೇಳುವ ಪಕ್ಷ ಅಂದ್ರೆ ಅದು ಕಾಂಗ್ರೆಸ್ ಪಕ್ಷ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇಂದು ಇಡೀ ಪ್ರಪಂಚದಲ್ಲಿ ಭಾರತ 5ನೇ ಆರ್ಥಿಕ ದೇಶವಾಗಿ ಹೊರ ಹೊಮ್ಮಿದೆ. ಭಾರತದ ಗಟ್ಟು ( ಹಣ) ಜಾಸ್ತಿ ಮಾಡಿದ್ದು ಪ್ರಧಾನಿ ಮೋದಿ. ಈಗ ಇಡೀ ಪ್ರಪಂಚ ಭಾರತದ ಮುಂದೆ ತಲೆ ಬಾಗುವ ಸ್ಥಿತಿ ನಿರ್ಮಾಣವಾಗಿದೆ. ಭಯೋತ್ಪಾದನೆ ಮಾಡ್ತಿದ್ದ ಪಾಕಿಸ್ತಾನದ ಒಳಗೆ ಹೊಕ್ಕು ಹೊಡೆದುಹಾಕಿದೆವು. ಪಾಕಿಸ್ತಾನ ಭಾರತದ ಮೇಲೆ ಬಾಂಬ್ ಹಾಕಿದ್ರೆ ಮೊದಲು ಮೇಣದ ಬತ್ತಿ ಹಚ್ಚುತ್ತಿದ್ರು. ಮೋದಿ ಸರ್ಕಾರ ಬಂದ ಮೇಲೆಯೇ ಏಟಿಗೆ ಎದುರೇಟು ನೀಡಿತು. 80% ದೇಶದಲ್ಲಿ ಬಡತನ ನಿರ್ಮೂಲನೆ ಮಾಡಬೇಕು ಎಂದು ಮೋದಿ ಅವರು ಹೇಳಿದ್ದಾರೆ. ದೇಶದಲ್ಲಿ ಬಡತನ ಹೋಗಬೇಕು ಅಂದರೆ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು. ನನ್ನ ಕ್ಷೇತ್ರದ ಪ್ರತಿ ಮಕ್ಕಳು ಮುಂದಿನ 5 ವರ್ಷದಲ್ಲಿ ನೆಲದ ಮೇಲೆ ಕೂತು ಪಾಠ ಕೇಳದಂತೆ ನಾನು ಮಾಡ್ತೇನೆ. ಹೈಟೆಕ್ ವಿಧ್ಯಾಭ್ಯಾಸ ನನ್ನ ಕ್ಷೇತ್ರದ ಮಕ್ಕಳು ಪಡಿಬೇಕು ಎಂದರು.

ಬೊಮ್ಮಯಿಗೆ ಶಿಗ್ಗಾಂವಿ ಜನತೆ ಆಶೀರ್ವಾದ ಮಾಡಿದ್ರಿ ಸಿಎಂ ಸ್ಥಾನಕ್ಕೆ ಬೊಮ್ಮಾಯಿ ಕೂತ್ರು. ಶಿಗ್ಗಾಂವಿ ಕ್ಷೇತ್ರಕ್ಕೆ ಬೊಮ್ಮಾಯಿ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಕ್ಷೇತ್ರದ BJP ಕಾರ್ಯಕರ್ತರು ಎಲ್ಲಾ ಸೇರಿ ಮತ್ತೊಮ್ಮೆ ಮೋದಿಗಾಗಿ ದುಡಿಯೋಣ ಎಂದು ಕರೆ ನೀಡಿದರು.

2009 ರಲ್ಲಿ ನಾನು ಒಂದು ಮಾತ್ ಹೇಳಿದ್ದೆ. ನೀವೂ ತಲೆ ತಗ್ಗಿಸುವಂತಾ ಕೆಲಸ ನಾ ಮಾಡಲ್ಲ ಅಂತಾ. ಅದರಂತೆ ನಾನು ನಡೆದುಕಕೊಂಡೆ. ನಾನು ಕಲ್ಲಿದಲು ಸಚಿವನಾಗಿ ಕೆಲಸ ಮಾಡ್ದೆ. ಕಲ್ಲಿದಲು ಕಪ್ಪಾದ್ರೂ ನನ್ನ ರಾಜಕೀಯದಲ್ಲಿ ಯಾವುದೇ ಕಪ್ಪು  ಚುಕ್ಕೆ ಇಲ್ಲ ಎಂದರು.

Follow Us:
Download App:
  • android
  • ios