ಗುರುಗ್ರಾಮ[ಮಕಾ.08]: 6 ತಿಂಗಳ ಹಿಂದಷ್ಟೇ ಸಾರ್ವಜನಿಕರ ಸೇವೆಗೆ ಮುಕ್ತವಾಗಿದ್ದ ಮೇಲ್ಸೇತುವೆಯ ಕೆಲ ಭಾಗ ಕುಸಿದುಬಿದ್ದಿರುವ ಘಟನೆ ಹರ್ಯಾಣದ ಪಟೌಡಿ ಎಂಬಲ್ಲಿ ಜರುಗಿದೆ. ಆದರೆ, ಈ ದುರ್ಘಟನೆಯಲ್ಲಿ ಸುದೈವವಶಾತ್‌ ಯಾವುದೇ ಪ್ರಾಣ ಹಾನಿ ಅಥವಾ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ.

ದೆಹಲಿ-ಜೈಪುರ ರೈಲು ಮಾರ್ಗದ ಬಳಿಯಿರುವ ಈ ಮೇಲ್ಸೇತುವೆಯನ್ನು 2019ರ ಸೆಪ್ಟೆಂಬರ್‌ ತಿಂಗಳಲ್ಲಿ ಹರಾರ‍ಯಣದ ಲೋಕೋಪಯೋಗಿ ಇಲಾಖೆ ಉದ್ಘಾಟನೆ ಮಾಡಿತ್ತು. ಕಳಪೆ ಕಾಮಗಾರಿ ಹಾಗೂ ಅಕಾಲಿಕ ಮಳೆ ಸುರಿದ ಪರಿಣಾಮವೇ ಈ ಮೇಲ್ಸೇತುವೆಯ ಕೆಲ ಭಾಗ ಕುಸಿಯಲು ಕಾರಣವಾಗಿದೆ ಎನ್ನಲಾಗಿದೆ.

ಮತ್ತೊಂದೆಡೆ, ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ಉದಾಸೀನತೆ ಹಾಗೂ ಅದಕ್ಷತೆಯೇ ಮೇಲ್ಸೇತುವೆ ಕುಸಿತಕ್ಕೆ ಕಾರಣ ಎಂದು ಪಹಾರಿ ಗ್ರಾಮಸ್ಥರು ದೂರಿದ್ದಾರೆ.