ವಯನಾಡು ಭೂಕುಸಿತ: ಯದ್ವಾತದ್ವಾ ಕಿರುಚಾಡಿ ಹಲವು ಕುಟುಂಬಗಳನ್ನು ಉಳಿಸಿದ ಗಿಳಿ..!
ನಾನು ನನ್ನ ಮನೆಯಲ್ಲಿ ಕಿಂಗಿಣಿ ಎಂಬ ಗಿಣಿ ಸಾಕಿದ್ದೇನೆ. ಭೂಕುಸಿತಕ್ಕೂ ಹಿಂದಿನ ದಿನ ನಾನು ಕುಟುಂಬ ಸಮೇತ ಸಮೀಪದಲ್ಲೇ ಇದ್ದ ಸೋದರಿಯ ಮನೆಗೆ ಹೋಗಿದ್ದೆ. ಜೊತೆಗೆ ಗಿಳಿಯನ್ನೂ ಕೊಂಡೊಯ್ದಿದ್ದೆ. ಮಾರನೇ ದಿನ ಬೆಳಗ್ಗೆ ಇದ್ದಕ್ಕಿದ್ದಂತೆ ಗಿಳಿ ಜೋರಾಗಿ ಕೂಗಲು ಆರಂಭಿಸಿತು. ಮೊದಲಿಗೆ ನಾನು ಅದನ್ನು ಸುಮ್ಮನಿರಿಸಲು ಪ್ರಯತ್ನಿಸಿದೆ: ವಿನೋದ್
ಬೆಂಗಳೂರು(ಆ.06): ಸಾಕು ಗಿಳಿಯೊಂದು ತಾನು ಗಾಯ ಮಾಡಿಕೊಂಡು ತನ್ನ ಮಾಲೀಕರಿಗೆ ನೀಡಿದ ಎಚ್ಚರಿಕೆಯ ಪರಿಣಾಮವಯನಾಡು ಜಿಲ್ಲೆಯ ಚೂರಲ್‌ಮಲೆ ನಾಲ್ಕು ಕುಟುಂಬ ಗಳು ಪ್ರಾಣ ಉಳಿಸಿಕೊಂಡ ಅಚ್ಚರಿಯ ಘಟನೆ ನಡೆದಿದೆ. ವಿನೋದ್ ಎಂಬುವವರು ತಮ್ಮ ಸಾಕು ಗಿಣಿ ಕಿಂಗಿಣಿಯ ಈ ಸಾಹಸವನ್ನು ಸೋಮವಾರ ಮಾಧ್ಯಮಗಳ ಮುಂದೆ ತೆರೆದಿಟ್ಟಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ವಿನೋದ್, 'ನಾನು ನನ್ನ ಮನೆಯಲ್ಲಿ ಕಿಂಗಿಣಿ ಎಂಬ ಗಿಣಿ ಸಾಕಿದ್ದೇನೆ. ಭೂಕುಸಿತಕ್ಕೂ ಹಿಂದಿನ ದಿನ ನಾನು ಕುಟುಂಬ ಸಮೇತ ಸಮೀಪದಲ್ಲೇ ಇದ್ದ ಸೋದರಿಯ ಮನೆಗೆ ಹೋಗಿದ್ದೆ. ಜೊತೆಗೆ ಗಿಳಿಯನ್ನೂ ಕೊಂಡೊಯ್ದಿದ್ದೆ. ಮಾರನೇ ದಿನ ಬೆಳಗ್ಗೆ ಇದ್ದಕ್ಕಿದ್ದಂತೆ ಗಿಳಿ ಜೋರಾಗಿ ಕೂಗಲು ಆರಂಭಿಸಿತು. ಮೊದಲಿಗೆ ನಾನು ಅದನ್ನು ಸುಮ್ಮನಿರಿಸಲು ಪ್ರಯತ್ನಿಸಿದೆ'.
ಅನ್ನ ಹಾಕಿದ ಒಡತಿಯ ಮೃತದೇಹ ಪತ್ತೆ ಹಚ್ಚಿದ ನಾಯಿ, ತುಂಡಾದ ಶವ ಹೊರತೆಗೆದ ರಕ್ಷಣಾ ತಂಡ!
ಬೆಟ್ಟದಿಂದ ಇಳಿದು ಓಡಿಹೋದ ಆನೆಗಳು ವಿಡಿಯೋದಲ್ಲಿ ಸೆರೆ?
ವಯನಾಡು: ಕೇರಳದಲ್ಲಿ ಭೂಕುಸಿತಕ್ಕೆ ತುತ್ತಾದ ಅರಣ್ಯ ಪ್ರದೇಶವೊಂದ ರಲ್ಲಿ, ಭೂಕುಸಿತಕ್ಕೂ ಕೆಲ ಕಾಲ ಮೊದಲು ಆನೆಗಳ ಗುಂಪೊಂದು ಆತುರಾತುರವಾಗಿ ಬೆಟ್ಟ ಪ್ರದೇಶದಿಂದ ತಗ್ಗು ಪ್ರದೇಶಕ್ಕೆ ಓಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಅದರಲ್ಲಿ ಆನೆಗಳ ಗುಂಪು, ದಟ್ಟ ಅರಣ್ಯದಿಂದ ಇಳಿದು ರಸ್ತೆಯೊಂದನ್ನು ದಾಟಿ ಸುರಕ್ಷಿತ ತಗ್ಗುಪ್ರದೇಶಕ್ಕೆ ಹೋಗುತ್ತದೆ. ಆದರೆ ಇದು ಹಳೆಯ ವಿಡಿಯೋ ಎಂದು ಕೆಲವರು ಹೇಳಿದ್ದರೆ, ವಯನಾಡಿನದೇ ವಿಡಿ ಯೋ ಕೆಲವರು ವಾದಿಸಿದ್ದಾರೆ.
30 ಜನರ ಕಾಪಾಡಿ ಮೃತಪಟ್ಟ ಸೇವಾ ಭಾರತಿ ಸಾಹಸಿಗಳು
ವಯನಾಡ್: ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ನಿಂತ ಇಬ್ಬರು ಯುವಕರು ಕೊನೆಗೆ ತಾವೇ ಬಲಿಯಾದ ಹೃದಯವಿದ್ರಾವಕ ಘಟನೆ ಚೂರಲ್‌ಮಲೈನಲ್ಲಿ ನಡೆದಿದೆ. ಆರ್‌ಎಸ್ ಎಸ್‌ನ ಅಂಗ ಸಂಸ್ಥೆಯಾದ ಸೇವಾಭಾರತಿ ಸಂಸ್ಥೆಯ ಪ್ರಜೀಶ್ ಮತ್ತು ಶರತ್ ಬಾಬು ಈ ಸಾಹಸಿಗಳು. ಗೆಳೆಯರ ಎಚ್ಚರಿಕೆಯನ್ನೂ ಲೆಕ್ಕಿಸದ ಪ್ರಜೀಶ್ ಮುಂಡಕೈನಲ್ಲಿ ಭೂಕುಸಿತದ ಸ್ಥಳಕ್ಕೆ ಧಾವಿಸಿ ಹಲವರನ್ನು ಕಾಪಾಡಿದ್ದಾರೆ. ಬಳಿಕ ಅವರೇ ಬಂಡೆಯಡಿ ಸಿಲುಕಿ ಮೃತಪಟ್ಟಿದ್ದಾರೆ. ಇನ್ನೊಂದೆಡೆ, ತನ್ನ ಮನೆಯ ಮಾಡು ಹಾರಿದಾಗ ಹೆತ್ತವರನ್ನು ಸುರಕ್ಷಿತ ಜಾಗಕ್ಕೆ ತಲುಪಿಸಿದ ಶರತ್, ಇನ್ನೂ 18 ಮಂದಿಯನ್ನು ರಕ್ಷಿಸಿ ಕಾಣೆಯಾಗಿದ್ದಾರೆ. ಆತ ಸಾವನ್ನಪ್ಪಿರಬಹುದು ಎನ್ನಲಾಗಿದೆ.