ಚುನಾವಣೆಯಲ್ಲಿ ಬಿಜೆಪಿಗೆ 370 ಸ್ಥಾನ, ಎನ್‌ಡಿಎ ಕೂಟಕ್ಕೆ 400ಕ್ಕಿಂತ ಹೆಚ್ಚು ಸೀಟು, ಮೋದಿ ಭವಿಷ್ಯ!

ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಮೋದಿ, ವಿಪಕ್ಷಗಳಿಗೆ ಟಾಂಗ್ ನೀಡುತ್ತಲೇ ಬಿಜೆಪಿ 2 ಅವಧಿಯ ಸರ್ಕಾರದ ಸಾಧನೆ ಹಾಗೂ 3ನೇ ಅವಧಿಯಲ್ಲಿ ಮತ್ತೆ ಸರ್ಕಾರ ರಚಿಸುವ ವಿಶ್ವಾಸವನ್ನು ಮೋದಿ ವ್ಯಕ್ತಪಡಿಸಿದರು

Parliament budget session PM Modi predicts BJG bags 370 seat NDA score 400 plus in Upcoming Lok sabha Election ckm

ನವದೆಹಲಿ(ಫೆ.05) ಬಿಜೆಪಿ ಎರಡನೇ ಅವಧಿ ಸರ್ಕಾರದಲ್ಲಿ ಕಾಶ್ಮೀರದ ವಿಶೇಷ ಸ್ಥಾನಮಾನ ಆರ್ಟಿಕಲ್ 370ನ್ನು ರದ್ದಪಡಿಸಲಾಯಿತು. ಇದೀಗ ಇಡೀ ದೇಶವೇ ಹೇಳುತ್ತಿದೆ ಅಬ್ ಕಿ ಬಾರ್ ಮೋದಿ ಸರ್ಕಾರ. ಮಲ್ಲಿಕಾರ್ಜುನ ಖರ್ಗೆ ಕೂಡ ಹೇಳಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 370 ಸ್ಥಾನ ಸಿಗಲಿದೆ. ಎನ್‌ಡಿಎ ಮೈತ್ರಿಗೆ 400ಕ್ಕಿಂತ ಹೆಚ್ಚಿನ ಸ್ಥಾನ ಸಿಗಲಿದೆ ಎಂದು ಪ್ರಧಾನಿ ಮೋದಿ ಭವಿಷ್ಯ ನುಡಿದಿದ್ದಾರೆ. 

ಲೋಕಸಭೆಯಲ್ಲಿ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಮೋದಿ, ವಿಪಕ್ಷಗಳಿಗೆ ಟಾಂಗ್ ನೀಡುತ್ತಲೇ ಬಿಜೆಪಿ 2 ಅವಧಿಯ ಸರ್ಕಾರದ ಸಾಧನೆ ಹಾಗೂ 3ನೇ ಅವಧಿಯಲ್ಲಿ ಮತ್ತೆ ಸರ್ಕಾರ ರಚಿಸುವ ವಿಶ್ವಾಸವನ್ನು ಮೋದಿ ವ್ಯಕ್ತಪಡಿಸಿದರು. ನಮ್ಮ ಮೊದಲ ಅವಧಿಯಲ್ಲಿ ಯುಪಿಎ ಸರ್ಕಾರ ಮಾಡಿದ ತಪ್ಪು ಸರಿಪಡಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳಲಾಯಿತು. 2ನೇ ಅವಧಿಯಲ್ಲಿ ನಾವು ಹೊಸ ಯೋಜನೆ ಮೂಲಕ ಭವ್ಯ ಭಾರತದ ಭವಿಷ್ಯ ರೂಪಿಸಿದ್ದೇವೆ. ಇದೀಗ 3ನೇ ಅವಧಿಯಲ್ಲಿ ವಿಕಸಿತ ಭಾರತ ಸಂಕಲ್ಪ ಪೂರ್ಣಗೊಳಿಸುತ್ತೇವೆ.

ಆಯುಷ್ಮಾನ್ ಭಾರತ್, ಸ್ವಚ್ಚ ಭಾರತ್ , ಬೇಟಿ ಪಡಾವೋ ಬೇಟಿ ಬಚಾವೋ, ಜಿಎಸ್‌ಟಿ ನಿರ್ಣಯ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಾವು ರೂಪಿಸಿದ್ದೇವು. ಇದನ್ನು ಜನರು ಮೆಚ್ಚಿನ ನಮಗೆ ಭರಪೂರ ಆಶೀರ್ವಾದ ಮಾಡಿದ್ದರು. ಹೀಗಾಗಿ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿ ಸರ್ಕಾರ ರಚಿಸಿದೆವು. 2ನೇ ಅವಧಿಯಲ್ಲಿ ಈ ದೇಶದ ಜನರು ಸುದೀರ್ಘ ದಿನಗಳಿಂದ ಕಾಯುತ್ತಿದ್ದ ಬೇಡಿಕೆಯನ್ನು ಪೂರೈಸಿದ್ದೇವೆ.

370ರ ವಿಧಿಯನ್ನು ರದ್ದುಗೊಳಿಸಿದ್ದೇವೆ. ನಾರಿ ಶಕ್ತಿ ವಂದನ ಅಧಿನಿಯಮ, ಅಂತರಿಕ್ಷದಿಂದ ಒಲಿಪಿಂಕ್ಸ್ ವರಗೆ, ಸಶಸ್ತ್ರ ಬಲದಿಂದ ಸಂಸತ್ ವರೆಗೆ ನಾರಿ ಶಕ್ತಿ ಮೊಳಗುತ್ತಿದೆ. ನಾರಿ ಶಕ್ತಿ ಸಶಕ್ತಿರಣವನ್ನು ದೇಶ ನೋಡಿದೆ. ಉತ್ತರದಿಂದ ದಕ್ಷಿಣದವರೆಗೆ, ಪೂರ್ವದಿಂದ ಪಶ್ಚಿಮದ ವರೆಗೆ ಅಪೂರ್ಣಗೊಂಡಿದ್ದ ಯೋಜನೆಗಳನ್ನು ನಾವು ಪೂರ್ಣಗೊಳಿಸಿದ್ದೇವೆ. 

ಪ್ರಧಾನಿ ಮೋದಿ ಭಾಷಣಕ್ಕೆ ವಿಪಕ್ಷಗಳು ತೀವ್ರ ಅಡ್ಡಿಪಡಿಸಿತ್ತು. ಈ ವೇಳೆ ಭಾಷಣ ನಿಲ್ಲಿಸಿದ ಮೋದಿ, ಕೆಲ ಹೊತ್ತಿನ ಬಳಿಕ ಭಾಷಣ ಮುಂದುವರಿಸಿದರು. ಬ್ರಿಟಿಷರ್ ಮಾಡಿದ ಕಾನೂನುಗಳನ್ನೇ ಇಲ್ಲಿವರೆಗೆ ಪಾಲಿಸಿಕೊಂಡ ಬರಲಾಗುತ್ತಿತ್ತು. ಇದೀಗ ನಮ್ಮ ಸರ್ಕಾರ ನ್ಯಾಯ ಸಂಹಿತೆ ಕಾನೂನು ಜಾರಿಗೆ ತಂದಿದ್ದೇವೆ. 

ಭಗವಾನ್ ರಾಮ ತನ್ನದೇ ಮನೆಗೆ ಆಗಮಿಸಿದ್ದಾನೆ. ಭಾರತೀಯ ಮಹಾನ್ ಸಂಸ್ಕೃತಿಗೆ ಮತ್ತಷ್ಟು ಉತ್ತೇಜನ ನೀಡುವ ಭವ್ಯ ಮಂದಿರ ನಿರ್ಮಾಣಗೊಂಡಿದೆ. ಅಬ್ ಕಿ ಬಾರ್ ಮೋದಿ ಸರ್ಕಾರ ಎಂದು ಇಡಿ ದೇಶವೇ ಹೇಳುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಕೂಡ ಹೇಳುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಬಿಜೆಪಿ 370 ಸೀಟು, ಎನ್‌ಡಿಎ ಕೂಟಕ್ಕೆ ಒಟ್ಟು 400ಕ್ಕಿಂತ ಹೆಚ್ಚಿನ ಸ್ಥಾನ ಈ ಚುನಾವಣೆಯಲ್ಲಿ ಸಿಗಲಿದೆ ಎಂದು ಮೋದಿ ಹೇಳಿದ್ದಾರೆ.

25 ಕೋಟಿ ಮಂದಿ ಬಡತನದಿಂದ ಹೊರಬಂದಿದ್ದಾರೆ. ಬಡವರಿಗೆ ಅವಕಾಶ ಸಿಕ್ಕರೆ, ಅವರಿಗೆ ಸ್ವಾಭಿಮಾನ ಸಿಕ್ಕರೆ, ಅವರಿಗೆ ವೇದಿಕೆ ಒದಗಿಸಿದರೆ ಬಡತನದಿಂದ ಹೊರಬರುತ್ತಾರೆ. 

Latest Videos
Follow Us:
Download App:
  • android
  • ios