ತಿರುಪತಿ(ಜ. 26)  ಕಡಪ ಜಿಲ್ಲೆಯಲ್ಲಿನ ಈ ಪ್ರಕರಣದ ವಿವರ ಹೇಳುತ್ತೇವೆ ಕೇಳಿ. ಪಾಕಿಸ್ತಾನದ ಅಪ್ಪ ಭಾರತದ ಅಮ್ಮನಿಗೆ ಜನಿಸಿದ ಪುತ್ರ ಅಂತಿಮವಾಗಿ ತಾಯಿಯೊಂದಿಗೆ ವಾಸಿಸುವ ಅವಕಾಶ ಪಡೆದುಕೊಂಡಿದ್ದಾನೆ.

ಈ ಬಗ್ಗೆ ರೈಲ್ವೆ ಕೊಡೂರು ಪೊಲೀಸರು ಸಕಲ ವಿವರ ನೀಡಿದ್ದಾರೆ. ಸ್ಥಳೀಯ ನಿವಾಸಿ ಶೇಕ್ ನೂರಾ ಎಂಬುವರು 22 ವರ್ಷದ ಹಿಂದೆ ಕೆಲಸ ಅರಸಿ ಕುವೈತ್‌ಗೆ ತೆರಳಿದ್ದರು. ಅಲ್ಲಿ ಅಂದರೆ 1997ರಲ್ಲಿ ಪಾಕಿಸ್ತಾನ ಮೂಲದ ಜಫರ್ ಸಹೀದ್ ಎಂಬುವರನ್ನು ಮದುವೆಯಾಗಿದ್ದರು. ದಂಪತಿಗೆ ಗಂಡು ಮಗುವು ಜನಿಸಿತ್ತು. ಮಗುವಿಗೆ ವಲೀದ್ ಜಫರ್ ಎಂದು ನಾಮಕರಣ ಮಾಡಲಾಗಿತ್ತು.

'ಅಖಂಡ ಭಾರತ ಒಡೆಯಲು ನೆಹರು ಕುಟುಂಬವೇ ಕಾರಣ'

ಇದೀಗ ಪತ್ನಿಯನ್ನು ತ್ಯಜಿಸಿದ ತಂದೆ ಜಫರ್ ಮಗನನ್ನು ಕರೆದುಕೊಂಡು ಪಾಕಿಸ್ತಾನಕ್ಕೆ ಹೋಗಿದ್ದರು.  ರೈಲ್ವೆ ಕೋಡೂರು ಮಹಿಳೆ ಹಿಂದಿರುಗಿದ್ದರು.

ಆದರೆ ಮಗ ವಲಿದ್ ತಂದೆಯೊಂದಿಗೆ ನೆಮ್ಮದಿಯಾಗಿ ಇಲ್ಲದರಿರುವುದು ನೂರಾ ಅವರಿಗೆ ಗೊತ್ತಾಗಿದೆ. ಹೀಗಾಗಿ ಮಗನ ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಜನವರಿ 17 ರಂದು ಟೂರಿಸ್ಟ್ ವೀಸಾ ಅಡಿಯಲ್ಲಿ ಮಗ ಭಾರತಕ್ಕೆ ಬಂದಿದ್ದಾರೆ. ಪಾಕಿಸ್ತಾನದ ಪ್ರವಾಸಿಗನೊಬ್ಬ ವಾಸಮಾಡುತ್ತಿರುವುದನ್ನು ಪತ್ತೆ ಮಾಡಿದ ಪೊಲೀಸರು ನೂರಾ ಕುಟುಂಬಕ್ಕೆ ಸಮನ್ಸ್ ನೀಡಿ ಹಾಜರಾಗಲು ತಿಳಿಸಿದ್ದಾರೆ.

ವಿಚಾರಣೆ ವೇಳೆ ಮಗ ನಾನು ತಾಯಿಯೊಂದಿಗೆ ಇರುತ್ತೇನೆ ಎಂದು ಹೇಳಿದ್ದಾರೆ.  ಇದೆಲ್ಲವನ್ನು ಆಲಿಸಿದ ಪೊಲೀಸರು ಮಗ ತಾಯಿಯೊಂದಿಗೆ ಇರಲು ಅವಕಾಶ ಮಾಡಿಕೊಟ್ಟಿದ್ದಾರೆ. ತಾಯಿಯ ಆರೋಗ್ಯ ಸರಿ ಇಲ್ಲದಿರುವುದನ್ನು ಪೊಲೀಸರು ಮನಗಂಡಿದ್ದಾರೆ.  ಟೂರಿಸ್ಟ್ ವೀಸಾ 45 ದಿನಕ್ಕೆ ಮುಗಿಯಲಿದ್ದು ವಲಿದ್ ಮೇಲೆ ಒಂದು ಕಣ್ಣು ಇಡುವಂತೆಯೂ ಸೂಚನೆ ನೀಡಲಾಗಿದೆ.