Asianet Suvarna News Asianet Suvarna News

ಪಾಕಿಸ್ತಾನದಲ್ಲಿ ಕಿರುಕಳ, ಭಾರತದಲ್ಲಿ ನಿರ್ಲಕ್ಷ್ಯ; ತ್ರಿಶಂಕು ಸ್ಥಿತಿಯಲ್ಲಿ ಹಿಂದೂ ವಲಸಿಗರು!

  • ಪಾಕಿಸ್ತಾನದ ಕಿರುಕುಳ ತಾಳಲಾರದೆ ಭಾರತಕ್ಕೆ ವಲಸೆ ಬಂದ ಹಿಂದೂಗಳು
  • ಶೋಚನೀಯ ಸ್ಥಿತಿಯಲ್ಲಿ ಹಿಂದೂಗಳ ಪರಿಸ್ಥಿತಿ
  • ಭಾರತದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿರುವ ಹಿಂದೂ ನಿರಾಶ್ರಿತರು
Pakistani Hindus have migrated to India in quest of safety and citizenship ckm
Author
Bengaluru, First Published Jun 12, 2021, 8:08 PM IST

ನವದೆಹಲಿ(ಜೂ.12):  ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ಹಿಂದೂಗಳ ಪರಿಸ್ಥಿತೆ ಶೋಚನೀಯವಾಗಿದೆ. ಜಟಿಲ ನಿಯಮದಿಂದ ಭಾರತಕ್ಕೆ ವಲಸೆ ಬಂದು 20 ವರ್ಷಗಳಾದರೂ ಯಾವ ಸೌಲಭ್ಯವೂ ಇಲ್ಲದೆ, ಇನ್ನೂ ನಿರಾಶ್ರಿತರಾಗಿಯೇ ದಿನದೂಡುವ ಪರಿಸ್ಥಿತಿ ಇದೆ. ಅತ್ತ ಪಾಕಿಸ್ತಾನ  ಕಿರುಕುಳ ತಾಳಲಾರದೆ ಭಾರತಕ್ಕೆ ಬಂದರೆ ಇಲ್ಲಿನ ನಿರ್ಲಕ್ಷ್ಯ ನಿರಾಶ್ರಿತ ಹಿಂದೂಗಳನ್ನು ಅತಂತ್ರರನ್ನಾಗಿ ಮಾಡಿದೆ.

ಪೌರತ್ವ ತಿದ್ದುಪಡಿ ಕಾಯ್ದೆ: ನಿರಾಶ್ರಿತರಿಗೆ ಹೊಸ ಬದುಕಿನ ವಾಯ್ದೆ!.

ಈ ರೀತಿ ಭಾರತದಿಂದ ಕಡೆಗಣಿಸಲ್ಪಟ್ಟ ಪಾಕಿಸ್ತಾನದಿಂದ ವಲಸೆ ಬಂದ ಹಿಂದೂಗಳ ಕತೆ ಮನಕಲುಕುತ್ತಿದೆ.  20 ವರ್ಷಗಳ ಹಿಂದೆ ಪಾಕಿಸ್ತಾನದಿಂದ ವಲಸೆ ಬಂದ ಜೋಗದಾಸ್ ಮಹರಾಜ್, ಭಾರತೀಯ ಪೌರತ್ವಕ್ಕಾಗಿ, 3 ಹೊತ್ತು ಊಟ ಮಾಡಲು 20 ವರ್ಷ ಸತತ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಜೋಗದಾಸ್ ಮಹರಾಜ ರಾಜಸ್ಥಾನದ ಜೋದ್‌ಪುರದಲ್ಲಿರುವ ಪಾಕಿಸ್ತಾನಿ ಹಿಂದೂ ವಲಸಿಗರ ಕೇಂದ್ರದಲ್ಲಿ ನಿಧನರಾದರು. ತಮ್ಮ 82ನೇ ವಯಸ್ಸಿನಲ್ಲಿ ಜೋಗದಾಸ್ ಪೌರತ್ವವೂ ಇಲ್ಲದೆ, ಯಾವುದೇ ಸವಲತ್ತುಗಳಿಲ್ಲದೆ ನಿಧನರಾದರು.

2000ನೇ ಇಸವಿಯ ಆಗಸ್ಟ್ ತಿಂಗಳಲ್ಲಿ ತಮ್ಮ 9 ಕುಟುಂಬಸ್ಥರೊಂದಿಗೆ ಜೋಗದಾಸ್ ಮಹರಾಜ ಭಾರತದ ಗಡಿ ದಾಟಿದರು. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಹೀಮಾರ್ ಖಾನ್ ಜಿಲ್ಲೆಯಲ್ಲಿ ಎದುರಿಸುತ್ತಿದ್ದ ಕಿರುಕುಳ, ಆರ್ಥಿಕ ಸಂಕಷ್ಟದಿಂದ ಪಾರಾಗಲು ಭಾರತಕ್ಕೆ ಆಗಮಿಸಿದರು. ಇದೀಗ ನಾವು 19 ಸದಸ್ಯರಿದ್ದೇವೆ. ನಮ್ಮ ತಂದೆ ಪೌರತ್ವಕ್ಕಾಗಿ ಕಾದು ಕಾದು ಪ್ರಾಣ ಬಿಟ್ಟರು ಎಂದು ಜೋಗದಾಸ್ ಪುತ್ರ ಹರ್ಜಿರಾಮ್ ಭೀಲ್ ಹೇಳಿದ್ದಾರೆ.

ಪಾಕಿಸ್ತಾನಿ ಹಿಂದೂ ಶರಣಾರ್ಥಿಗಳು: ಕಷ್ಟ ಹೇಳುವ ಸರಣಿ ಲೇಖನಗಳು!

ಪೌರತ್ವಕ್ಕಾಗಿ ಇರುವ ಹಲವು ತೊಡಕುಗಳನ್ನು ನಿವಾರಿಸಲ ನಮಗೆ ತಿಳಿದಿಲ್ಲ. ಕಾನೂನಿ ಪರಿಜ್ಞಾನವೂ ನಮಗಿಲ್ಲ. ನಮಗೆ ಪಾಕಿಸ್ತಾನದಲ್ಲಿ ಕಿರುಕಳ ತಾಳಲು ಸಾಧ್ಯವಾಗಿಲ್ಲ. ಕುಟುಂಬ ಒಬ್ಬೊಬ್ಬ ಸದಸ್ಯರನ್ನೇ ಮುಗಿಸುತ್ತಿದ್ದರು. ಜೀವ ಭಯದಿಂದ ಭಾರತಕ್ಕೆ ಬಂದರೆ ಇಲ್ಲಿ ನಮಗೆ ಯಾವ ಪರಿಗಣನೆಯು ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ನಿರಾಶ್ರಿತ ಕೇಂದ್ರದಲ್ಲಿರುವ ಪ್ರತಿಯೊಬ್ಬ ಹಿಂದೂಗಳ ಕತೆ ಇದೆ. 2015ರಲ್ಲಿ ಭಾರತಕ್ಕೆ ವಲಸೆ ಬಂದ ಕರಮಾಶಿ ಕೋಲಿ ಯಾವುದೇ ಸೌಲಭ್ಯವಿಲ್ಲದೆ ಸಂಕಷ್ಟದಲ್ಲಿ ದಿನದೂಡುತ್ತಿದ್ದಾರೆ. ಕುಟುಂಬ ನಿರ್ವಹಿಸಲು ಸಾಧ್ಯವಾಗದೆ, ಕೆಲಸವೂ ಇಲ್ಲದೆ ಒಂದು ಹೊತ್ತಿನ ಊಟಕ್ಕೆ ದೇವಸ್ಥಾನವೇ ಗತಿಯಾಗಿದೆ ಎಂದು ಕೋಲಿ ಹೇಳಿದ್ದಾರೆ.

Follow Us:
Download App:
  • android
  • ios