ಅರವಿಂದ್ ಕೇಜ್ರಿವಾಲ್ ಮಧ್ಯಮಂತರ ಜಾಮೀನು ಪಡೆದು ಈಗಾಲೇ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ಕೇಜ್ರಿವಾಲ್ ಜಾಮೀನಿಗೆ ಪಾಕಿಸ್ತಾನದ ಕೆಲ ನಾಯಕರು ಸಂತಸ ವ್ಯಕ್ತಪಡಿಸಿದ್ದಾರೆ. ಮತ್ತೊಂದು ಯುದ್ಧದಲ್ಲಿ ಮೋದಿಗೆ ಸೋಲಾಗಿದೆ ಎಂದು ಪಾಕ್ ಮಾಜಿ ಸಚಿವ ಫಾವದ್ ಚೌಧರಿ ಹೇಳಿದ್ದಾರೆ. 

ಇಸ್ಲಾಮಾಬಾದ್(ಮೇ.11) ಅಬಕಾರಿ ನೀತಿ ಹಗರಣದಲ್ಲಿ ಜೈಲು ಸೇರಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದಾರೆ. ಈಗಾಗಲೇ ಆಮ್ ಆದ್ಮಿ ಪಾರ್ಟಿ ರೋಡ್ ಶೋನಲ್ಲಿ ಪಾಲ್ಗೊಂಡಿರುವ ಕೇಜ್ರಿವಾಲ್, ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಸಕ್ರಿಯರಾಗಿದ್ದಾರೆ. ಕೇಜ್ರಿವಾಲ್ ಜಾಮೀನಿಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.ಆಪ್, ವಿಪಕ್ಷ ನಾಯಕರು ಸಂತಸ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಪಾಕಿಸ್ತಾನದಲ್ಲೂ ಕೇಜ್ರಿವಾಲ್ ಜಾಮೀನಿಗ ಸಂಭ್ರಮ ಶುರುವಾಗಿದೆ. ಪಾಕಿಸ್ತಾನ ಮಾಜಿ ಸಚಿವ ಫಾವದ್ ಚೌಧರಿ, ಕೇಜ್ರಿವಾಲ್ ಜಾಮೀನಿಗೆ ಸಂತಸ ವ್ಯಕ್ತಪಡಿಸಿದ್ದು, ಮತ್ತೊಂದು ಹೋರಾಟದಲ್ಲಿ ಮೋದಿಗೆ ಸೋಲಾಗಿದೆ ಎಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಫಾವದ್ ಚೌಧರಿ, ಮೋದಿಜಿ ಮತ್ತೊಂದು ಹೋರಾಟದಲ್ಲಿ ಮುಗ್ಗರಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಬಿಡುಗಡೆ ಆಧುನಿಕ ಭಾರತಕ್ಕೆ ಸಿಕ್ಕಿದ ಗುಡ್ ನ್ಯೂಸ್ ಎಂದಿದ್ದಾರೆ. ಫಾವದ್ ಚೌಧರಿ ಟ್ವೀಟ್‌ಗೆ ಪಾಕಿಸ್ತಾನದ ಹಲವು ನಾಗರೀಕರು ಪ್ರತಿಕ್ರಿಯೆ ನೀಡಿದ್ದಾರೆ. ನಿಜಕ್ಕೂ ಇದು ಗುಡ್ ನ್ಯೂಸ್, ಭಾರತದಲ್ಲಿ ಕೋರ್ಟ್ ಕಾರ್ಯನಿರ್ವಹಿಸುತ್ತಿದೆ ಅನ್ನೋದು ಖಾತ್ರಿಯಾಯಿತು. ಭಾರತದಲ್ಲಿ ನ್ಯಾಯಕ್ಕೆ ಸತತ ಹೋರಾಟದ ಅವಶ್ಯಕತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹಾರಿತು ತಿರಂಗ, ಪಾಕ್ ಸೇನೆ ಮೇಲೆ ಸ್ಥಳೀಯರ ದಾಳಿ!

ಮೋದಿ ಹಾಗೂ ಬಿಜೆಪಿ ವಿರುದ್ದ ಸದಾ ದ್ವೇಷ ಕಾರುವು ಫಾವದ್ ಚೌಧರಿ ಇದೀಗ ಭಾರತದ ಲೋಕಸಭಾ ಚುನಾವಣೆ ವೇಳೆ ವಿಪಕ್ಷಗಳ ಪರ ಬ್ಯಾಟ್ ಬೀಸುತ್ತಿದ್ದಾರೆ. ಇಂಡಿಯಾ ಒಕ್ಕೂಟ ಆಡಳಿಕ ಚುಕ್ಕಾಣಿ ಹಿಡಿಯಲು ತಮ್ಮದೇ ರೀತಿಯಲ್ಲಿ ಕೊಡುಗೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಫಾವದ್ ಚೌಧರಿ ಭಾರಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ರಾಹುಲ್ ಗಾಂಧಿಯನ್ನು ಹೊಗಳಿ ಟ್ವೀಟ್ ಮಾಡಿದ್ದ ಫಾವದ್ ಚೌಧರಿ, ಸಂಪತ್ತು ಹಂಚಿಕೆ ಆಜೆಂಡಾವನ್ನು ಹೊಗಳಿದ್ದರು. ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷ ನಾಯಕರನ್ನು ಹೊಗಳಿ ಅಟ್ಟಕ್ಕೇರಿಸುತ್ತಿರುವ ಪಾಕಿಸ್ತಾನ ಮಾಜಿ ಸಚಿವ ಇದೀಗ ಕೇಜ್ರಿವಾಲ್ ಪರ ಬ್ಯಾಟ್ ಬೀಸಿದ್ದಾರೆ.

Scroll to load tweet…

ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಜೂನ್ 1ರ ವರೆಗೆ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಜೂನ್ 2ರಂದು ಶರಣಾಗುವಂತೆ ಸೂಚಿಸಿದೆ. ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಮಧ್ಯಂತರ ಜಾಮೀನು ನೀಡಲಾಗಿದೆ. ಈ ವೇಳೆ ಮುಖ್ಯಮಂತ್ರಿ ಕಚೇರಿಗೆ ತೆರಳುಂತಿಲ್ಲ. ಯಾವುದೇ ಕಡತಗಳಿಗೆ ಸಹಿ ಹಾಕುವಂತಿಲ್ಲ ಎಂದು ಷರತ್ತು ವಿಧಿಸಿದೆ.

ರಾಹುಲ್ ಗಾಂಧಿ ಬೆಂಕಿ ಭಾಷಣ: ಪಾಕಿಸ್ತಾನ ಮಾಜಿ ಸಚಿವ ಮೆಚ್ಚುಗೆ