Asianet Suvarna News Asianet Suvarna News

ಆಮ್ಲಜನಕ ಸಿಲಿಂಡರ್‌ ದರದಲ್ಲಿ ಭಾರೀ ಹೆಚ್ಚಳ!

ಆಮ್ಲಜನಕ ಸಿಲಿಂಡರ್‌ ದರದಲ್ಲಿ ಭಾರಿ ಹೆಚ್ಚಳ| ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಸಿಲಿಂಡರ್‌ಗಳ ಕೊರತೆ

Oxygen cylinder prices surge In India pod
Author
Bangalore, First Published Sep 16, 2020, 10:51 AM IST

ನವದೆಹಲಿ(ಸೆ.16):: ಕೊರೋನಾ ವೈರಸ್‌ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರ ಪರಿಣಾಮವಾಗಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಆಮ್ಲಜನಕ ಸಿಲಿಂಡರ್‌ಗಳ ಕೊರತೆ ಉಂಟಾಗಿದೆ. ಜೊತೆಗೆ ಬೇಡಿಕೆ ಹೆಚ್ಚಿದ್ದರಿಂದ ಆಮ್ಲಜನಕ ಸಿಲಿಂಡರ್‌ಗಳ ದರ ಗಗನಕ್ಕೆ ಏರಿದೆ.

ಕರ್ನಾಟಕದಲ್ಲಿ ಆಮ್ಲಜನಕ ಸಿಲಿಂಡರ್‌ಗಳ ದರ ಉತ್ಪಾದನಾ ಕಂಪನಿಗಳಿಗೆ ನೀಡಲಾದ ಗುತ್ತಿಗೆಯ ಮೇಲೆ ಅವಲಂಬಿತವಾಗಿದೆ. ಉತ್ಪಾದನಾ ಕಂಪನಿಗಳು ಮತ್ತು ಆಸ್ಪತ್ರೆಗಳ ಜೊತೆ ಮಾಡಿಕೊಳ್ಳಲಾದ ಹಳೆಯ ಗುತ್ತಿಗೆಯ ಪ್ರಕಾರ, ಪ್ರತಿ ಕ್ಯುಬಿಕ್‌ ಮೀಟರ್‌ಗೆ 13ರಿಂದ 18 ರು. ದರ ನಿಗದಿಪಡಿಸಲಾಗಿದೆ. ಆದರೆ, ಈಗ ಅವುಗಳ ದರ ಪ್ರತಿ ಕ್ಯುಬಿಕ್‌ ಮಿಟರ್‌ಗೆ 40 ರು.ವರೆಗೂ ಹೆಚ್ಚಳಗೊಂಡಿದೆ. ಕೋವಿಡ್‌ ಪೂರ್ವದಲ್ಲಿ ಕರ್ನಾಟಕದಲ್ಲಿ 100ರಿಂದ 150 ಮೆಟ್ರಿಕ್‌ ಟನ್‌ನಷ್ಟುಇದ್ದ ಆಮ್ಲಜನ ಸಿಲಿಂಡರ್‌ನ ಬೇಡಿಕೆ ಈಗ 500 ಮೆಟ್ರಿಕ್‌ ಟನ್‌ಗಳಿಗೆ ಏರಿಕೆ ಆಗಿದೆ ಎಂದು ವರದಿಗಳು ತಿಳಿಸಿವೆ.

ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ಆದೇಶವೊಂದನ್ನು ಹೊರಡಿಸಿದ್ದ ಮಹಾರಾಷ್ಟ್ರ ಸರ್ಕಾರ, ಆಮ್ಲಜನಕ ಸಿಲಿಂಡರ್‌ಗಳನ್ನು ಹೊರ ರಾಜ್ಯಗಳಿಗೆ ಪೂರೈಸುವುದಕ್ಕೆ ನಿಷೇಧ ಹೇರಿದ್ದೇ ಈ ಸಮಸ್ಯೆಗೆ ಪ್ರಮುಖ ಕಾರಣ ಎನ್ನಲಾಗಿದೆ.

Follow Us:
Download App:
  • android
  • ios