ಚಂಡೀಗಢ(ಮೇ.12): ದೇಶದಲ್ಲಿ ಕೊರೋನಾದ ಎರಡನೇ ಅಲೆ ಅಬ್ಬರ ಮುಂದುವರೆದಿದೆ. ದೇಶದ ಬಹುತೇಕ ಎಲ್ಲಾ ನಗರಗಳಲ್ಲಿ ಆಕ್ಸಿಜನ್, ವೆಂಟಿಲೇಟರ್‌ ಹಾಗೂ ಬೆಡ್‌ಗಳ ಕೊರತೆ ಎದುರಾಗಿದೆ ಎಂಬ ವರದಿಗಳು ಸದ್ದು ಮಾಡಿವೆ. ಆದರೆ ಅತ್ತ ಪಂಜಾಬ್‌ನಲ್ಲಿ ಪಿಎಂ ಕೇರ್ಸ್‌ ಫಂಡ್‌ನಿಂದ ಖರೀದಿಸಿದ ವೆಂಟಿಲೇಟರ್‌ಗಳು ಧೂಳು ಹಿಡಿಯುತ್ತಿವೆ. ಈ ಸಂಬಂಧ ಕೇಂದ್ರ, ಪಂಜಾಬ್‌ ಸರ್ಕಾರಕ್ಕೆ ಪತ್ರವೊಂದನ್ನೂ ಬರೆದಿದೆ. ಹೀಗಿದ್ದರೂ ಇಲ್ಲಿನ ಸರ್ಕಾರಕ್ಕೆ ಇವುಗಳ ಬಳಕೆ ಮಾಡಲು ಸಮಯ ಸಿಕ್ಕಿಲ್ಲ.

ಆರೋಗ್ಯ ಸಚಿವ ರಾಜೇಶ್ ಭೂಷಣ್ ಏಪ್ರಿಲ್ 11 ರಂದು ಈ ಸಂಬಂಧ ಪಂಜಾಬ್ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದರಲ್ಲಿ ಅವರು 2020ರಿಂದ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಕೊರೋನಾ ಹೋರಾಟಕ್ಕಾಗಿ ವೆಂಟಿಲೇಟರ್‌ಗಳನ್ನು ನೀಡುತ್ತಿದೆ. ರಾಜ್ಯಗಳ ಬೇಡಿಕೆ ಮೇರೆಗೆ ಇವುಗಳನ್ನು ಕಳುಹಿಸಿಕೊಡಲಾಗುತ್ತಿದೆ ಎಂದಿದ್ದಾರೆ.

ಕೇಂದ್ರ, ರಾಜ್ಯ ಸರ್ಕಾರಕ್ಕೆ ಆತಂಕ ಕೊಟ್ಟಿದೆ 533 ಜಿಲ್ಲೆಗಳ ವರದಿ!

251 ವೆಂಟಿಲೇಟರ್ಸ್‌ ಬಳಸಿಲ್ಲ

ಪಂಜಾಬ್ ಬೇಡಿಕೆಯಂತೆ 809 ವೆಂಟಿಲೇಟರ್‌ಗಳನ್ನು ಕಳುಹಿಸಿಕೊಟ್ಟಿದ್ದೇವೆ. ಇದರಲ್ಲಿ ಕೇವಲ 55ನ್ನಷ್ಟೇ ಬಳಸಲಾಗಿದೆ. ಈಗಲೂ 215 ವೆಂಟಿಲೇಟರ್ಸ್‌ ಮೂಲೆ ಸೇರಿವೆ ಎಂದಿದ್ದಾರೆ.

ಕೇಂದ್ರ ಸಚಿವಾಲಯ ಈ ವೆಂಟಿಲೇಟರ್‌ಗಳನ್ನು ಕೊರೋನಾ ಕಾಲದಲ್ಲಿ ಉಪಯೋಗಕ್ಕೆ ಬರಲಿ ಎಂದು ವಿತರಿಸಿತ್ತು. ಹೀಗಿರುವಾಗ ರಾಜ್ಯ ಸರರ್ಕಾರ ಅತೀ ಶೀಘ್ರದಲ್ಲಿ ಇವುಗಳ ಬಳಕೆ ಆರಂಭಿಸಬೇಕು ಎಂದಿದ್ದಾರೆ.

ಫರೀದ್‌ಕೋಟ್‌ನಲ್ಲಿ ಧೂಳು ಹಿಡಿಯುತ್ತಿವೆ ವೆಂಟಿಲೇಟರ್ಸ್‌

ಕೋಟಕ್‌ಪುರದ ಶಾಸಕ ಕುಲ್ತಾರ್‌ ಸಿಂಗ್ ಸಾಂಧ್ವಾನ್‌ ಈ ಸಂಬಂಧ ಟ್ವೀಟ್ ಮಾಡುತ್ತಾ ಕೊರೋನಾ ಹೋರಾಟದಲ್ಲಿ ಬಳಸಲು ಕಳುಹಿಸಿಕೊಟ್ಟ ಈ ವೆಂಟಿಲೇಟರ್ಸ್‌ ಫರೀದ್‌ಕೋಟ್‌ನ ಆಸ್ಪತ್ರೆಯಲ್ಲಿ ಧೂಳು ಹಿಡಿಯುತ್ತಿವೆ ಎನ್ನುತ್ತಾ ಇದರ ಫೋಟೋ ಕೂಡಾ ಶೇರ್ ಮಾಡಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona