ನವದೆಹಲಿ, (ಜುಲೈ.25): ದೇಶದಲ್ಲಿ ಕೋವಿಡ್​ 19 ಸೋಂಕಿತ ಸಂಖ್ಯೆ ದಿನ ದಿನೇ ಹೆಚ್ಚಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ48,916 ಹೊಸ ಕೇಸ್​ಗಳು ಪತ್ತೆಯಾಗಿವೆ.  ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 13,36,861ಕ್ಕೆ ಏರಿಕೆಯಾಗಿದೆ. ಇದ್ರಲ್ಲಿ 8,49,432 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಪ್ರಸ್ತುತ  4,56,071 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

"

ಮತ್ತೊಂದು ವೈರಸ್‌ ಹರಡಲು ಚೀನಾ ನಿರ್ಧಾರ, ದುಬಾರಿಯಾಯ್ತು ಬಂಗಾರ; ಜು.25ರ ಟಾಪ್ 10 ಸುದ್ದಿ!

ಇನ್ನು 24 ತಾಸುಗಳಲ್ಲಿ  757 ಮಂದಿ ಒಂದೇ ದಿನ ಬಲಿಯಾಗಿದ್ದಾರೆ. ಈ ಮೂಲಕ ಇಲ್ಲಿಯವರೆಗೆ ಸಾವನ್ನಪ್ಪಿದವರ ಸಂಖ್ಯೆ 31,358ಕ್ಕೇರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ ಕೊರೋನಾ ಸೋಂಕಿನ ಕಾರಣಕ್ಕೆ 4,20,898 ಮಂದಿಯ ಮಾದರಿಗಳನ್ನು ಪರೀಕ್ಷಿಸಲಾಗಿದೆ. ನಿನ್ನೆ  (ಶುಕ್ರವಾರ) ಒಂದೇ ದಿನ ದೇಶಾದ್ಯಂತ 4,20,898 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದ್ದು, ಆ ಮೂಲಕ ದೇಶದಲ್ಲಿ ಈ ವರೆಗೂ ಅಂದರೆ ಜು.24 ರವರೆಗೂ 1,58,49,068 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ.

ರಾಜ್ಯವಾರ ಅಂಕಿ-ಅಂಶಗಳನ್ನ ನೋಡುವುದಾದ್ರೆ ಮಹಾರಾಷ್ಟ್ರ 3,57,117 ಕೇಸ್‌ದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ತಮಿಳುನಾಡು 1,99,749 ಪ್ರಕರಣಗೊಂದಿಗೆ 2ನೇ ಸ್ಥಾನದಲ್ಲಿದೆ. ಇನ್ನು ದೆಹಲಿ ಮೂರು ಮತ್ತು ಕರ್ನಾಟಕದಲ್ಲಿ ಒಟ್ಟು 85,870 ಕೊರೋನಾ ಕೇಸ್‌ನೊಂದಿಗೆ ದೇಶದಲ್ಲಿ  4ನೇ ಸ್ಥಾನದಲ್ಲಿ. ಎಲ್ಲಾ ರಾಜ್ಯಗಳ ಮಾಹಿತಿಗಾಗಿ ಈ ಕೆಳಗಿನ ಚಾರ್ಟ್‌ನಲ್ಲಿದೆ ನೋಡಿ.