ಪಶ್ಚಿಮ ಬಂಗಾಳದಲ್ಲಿ 4 ಲಕ್ಷ ಜನರಿಗೆ 9ಕ್ಕಿಂತ ಹೆಚ್ಚು ಸಿಮ್! ಸಂಸತ್ತಿನಲ್ಲಿ ಕೇಂದ್ರ ಶಾಕಿಂಗ್ ಮಾಹಿತಿ
ರಾಜ್ಯದಲ್ಲಿ ಎಷ್ಟು ಜನರ ಬಳಿ 9 ಕ್ಕಿಂತ ಹೆಚ್ಚು ಸಿಮ್ ಕಾರ್ಡ್‌ಗಳಿವೆ? ಈ ಪ್ರಶ್ನೆಯನ್ನು ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ಶಮಿಕ್ ಭಟ್ಟಾಚಾರ್ಯ ಕೇಳಿದರು. ಬಿಜೆಪಿ ಸಂಸದರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಂವಹನ ಖಾತೆ ರಾಜ್ಯ ಸಚಿವ ಪಿ. ಚಂದ್ರಶೇಖರ್ ಇತ್ತೀಚಿನ ಅಂಕಿಅಂಶಗಳನ್ನು ಬಹಿರಂಗಪಡಿಸಿದರು.

ಪಶ್ಚಿಮ ಬಂಗಾಳದಲ್ಲಿ ಈಗ 4 ಲಕ್ಷಕ್ಕೂ ಹೆಚ್ಚು ಜನರ ಬಳಿ 9ಕ್ಕಿಂತ ಹೆಚ್ಚು ಸಿಮ್ ಕಾರ್ಡ್‌ಗಳಿವೆ. ಗುರುವಾರ ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಈ ಮಾಹಿತಿಯನ್ನು ನೀಡಿದೆ. ಹೊಸ ದೂರಸಂಪರ್ಕ ಕಾಯ್ದೆಯ ಪ್ರಕಾರ, ಒಬ್ಬ ಬಳಕೆದಾರರ ಹೆಸರಿನಲ್ಲಿ ಗರಿಷ್ಠ 9 ಸಿಮ್‌ಗಳನ್ನು ಹೊಂದಿರಬಹುದು. ಆದರೆ 9ಕ್ಕಿಂತ ಹೆಚ್ಚು ಸಿಮ್‌ಗಳನ್ನು ಹೊಂದಿರುವುದು ಕಾನೂನುಬಾಹಿರ. ಹಾಗಾಗಿ ಕೇಂದ್ರದ ಈ ಮಾಹಿತಿ ಮಹತ್ವದ್ದಾಗಿದೆ.
ರಾಜ್ಯದಲ್ಲಿ ಎಷ್ಟು ಜನರ ಬಳಿ 9 ಕ್ಕಿಂತ ಹೆಚ್ಚು ಸಿಮ್ ಕಾರ್ಡ್‌ಗಳಿವೆ? ಈ ಪ್ರಶ್ನೆಯನ್ನು ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ಶಮಿಕ್ ಭಟ್ಟಾಚಾರ್ಯ ಕೇಳಿದರು. ಬಿಜೆಪಿ ಸಂಸದರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಂವಹನ ಖಾತೆ ರಾಜ್ಯ ಸಚಿವ ಪಿ. ಚಂದ್ರಶೇಖರ್ ಇತ್ತೀಚಿನ ಅಂಕಿಅಂಶಗಳನ್ನು ಬಹಿರಂಗಪಡಿಸಿದರು. ಪಶ್ಚಿಮ ಬಂಗಾಳದ 4,05,307 ನಿವಾಸಿಗಳನ್ನು ಕೇಂದ್ರ ಗುರುತಿಸಿದೆ ಎಂದು ಅವರು ಹೇಳಿದರು. ಸಂಬಂಧಪಟ್ಟವರ ಬಳಿ 9ಕ್ಕಿಂತ ಹೆಚ್ಚು ಸಿಮ್‌ಗಳಿವೆ. ಗರಿಷ್ಠ ಮಿತಿಯನ್ನು ಮೀರಿದ ಕಾರಣ, ಕಳೆದ ಐದು ವರ್ಷಗಳಲ್ಲಿ ಬಂಗಾಳದಲ್ಲಿ 13 ಲಕ್ಷ 59 ಸಾವಿರ 934 ಸಿಮ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದರು.
ರಿಚಾರ್ಜ್ ಇರದೇ ಇದ್ರೂ ಎಷ್ಟು ದಿನಗಳ ಕಾಲ ಸಿಮ್ ಆಕ್ಟೀವ್ ಆಗಿರುತ್ತೆ? ಇಲ್ಲಿದೆ ಟ್ರಾಯ್ ನಿಯಮ
ನಿಯಮಗಳ ಪ್ರಕಾರ, ದೇಶದಲ್ಲಿ 9ಕ್ಕಿಂತ ಹೆಚ್ಚು ಸಿಮ್‌ಗಳನ್ನು ಬಳಸುವಂತಿಲ್ಲ. ಆದರೆ ಕೆಲವು ರಾಜ್ಯಗಳಿಗೆ ಈ ನಿಯಮ ಬೇರೆ ಇದೆ. ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಈಶಾನ್ಯ ರಾಜ್ಯಗಳಲ್ಲಿ ಗರಿಷ್ಠ ೬ ಸಿಮ್‌ಗಳನ್ನು ಬಳಸಬಹುದು. ಅದಕ್ಕಿಂತ ಹೆಚ್ಚು ಸಿಮ್ ಕಾರ್ಡ್‌ಗಳನ್ನು ಬಳಸುವುದು ಕಾನೂನುಬಾಹಿರ. ಆದರೆ ಪಶ್ಚಿಮ ಬಂಗಾಳದಂತಹ ಗಡಿ ರಾಜ್ಯದಲ್ಲಿ ವ್ಯಕ್ತಿಗೆ ಸಿಮ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕೇ ಎಂದು ಬಿಜೆಪಿ ಸಂಸದರು ಪ್ರಶ್ನಿಸಿದರು. ಆದರೆ ಕೇಂದ್ರವು ಅಂತಹ ಯಾವುದೇ ಯೋಜನೆ ಇಲ್ಲ ಎಂದು ತಿಳಿಸಿದೆ.
ಪಶ್ಚಿಮ ಬಂಗಾಳದಲ್ಲಿ ನಕಲಿ ಸಿಮ್ ಸಂಪರ್ಕಗಳನ್ನು ತಡೆಯಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಬಿಜೆಪಿ ಸಂಸದರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕೇಂದ್ರ ಸಚಿವರು, ಕೇಂದ್ರ ಸಂವಹನ ಸಚಿವಾಲಯವು ಕೃತಕ ಬುದ್ಧಿಮತ್ತೆಯನ್ನು ಬಳಸುತ್ತಿದೆ ಎಂದು ಹೇಳಿದರು. ಯಾವ ಬಳಕೆದಾರರ ಹೆಸರಿನಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಸಿಮ್‌ಗಳು ಸಕ್ರಿಯವಾಗಿವೆ ಎಂಬುದನ್ನು ತಂತ್ರಜ್ಞಾನದ ಸಹಾಯದಿಂದ ಪರಿಶೀಲಿಸಲಾಗುತ್ತದೆ. ನಂತರ ಆ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಸುರಕ್ಷಿತ ವೇದಿಕೆಯ ಮೂಲಕ ಸಂಬಂಧಪಟ್ಟ ದೂರಸಂಪರ್ಕ ಕಂಪನಿಗೆ ನೀಡಲಾಗುತ್ತದೆ.
ದೂರಸಂಪರ್ಕ ಕಂಪನಿಗಳು ಅದನ್ನು ಮರುಪರಿಶೀಲಿಸಿ ಸಿಮ್‌ಗಳನ್ನು ನಿಷ್ಕ್ರಿಯಗೊಳಿಸುತ್ತವೆ. ಕಳೆದ ವರ್ಷ ಜೂನ್‌ನಲ್ಲಿ ಕೇಂದ್ರವು ಹೊಸ ದೂರಸಂಪರ್ಕ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆಯ ಪ್ರಕಾರ, 9ಕ್ಕಿಂತ ಹೆಚ್ಚು ಸಿಮ್‌ಗಳನ್ನು ಬಳಸುವುದು ಅಪರಾಧ. ಮೊದಲ ಬಾರಿಗೆ ಕಾನೂನು ಮುರಿದರೆ, ಗರಿಷ್ಠ 50 ಸಾವಿರ ರೂಪಾಯಿವರೆಗೆ ದಂಡ ವಿಧಿಸಬಹುದು.
ಸಿಮ್ ಕಾರ್ಡ್ ವ್ಯಾಲಿಡಿಟಿ ಕುರಿತಾದ ಯಾವುದೇ ನಿಯಮ ಬದಲಾಗಿಲ್ಲ: ಸ್ಪಷ್ಟನೆ ನೀಡಿದ TRAI

