ಚೆನ್ನೈ(ಜು.30): ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ‘ವೇದ ನಿಲಯಂ’ ನಿವಾಸದಲ್ಲಿ ಸುಮಾರು 4 ಕೆ.ಜಿ ಚಿನ್ನ, 601 ಕೆ.ಜಿ ಬೆಳ್ಳಿ, ಸುಮಾರು 8,300 ಪುಸ್ತಕಗಳು ಮತ್ತು 10,438 ಡ್ರೆಸ್‌ ಮೆಟೀರಿಯಲ್‌, ಪೂಜಾ ಸಾಮಗ್ರಿಗಳು ಸೇರಿದಂತೆ ಮತ್ತಿತರ ಸ್ಥಿರ ಮತ್ತು ಚರಾಸ್ತಿಗಳು ಇವೆ ಎಂದು ತಮಿಳುನಾಡು ಸರ್ಕಾರ ಪಟ್ಟಿಮಾಡಿದೆ.

ಜಯಲಲಿತಾ 900 ಕೋಟಿ ರೂ. ಆಸ್ತಿ ದೀಪಾ, ದೀಪಕ್‌ಗೆ!

ಅಣ್ಣಾಡಿಎಂಕೆ ಪಕ್ಷದ ಅಧಿನಾಯಕಿಯಾಗಿದ್ದ ಜಯಲಲಿತಾ ಅವರು ಮೂರು ಅಂತಸ್ತಿನ ವೇದ ನಿಲಯಂ ನಿವಾಸದಲ್ಲಿ ವಾಸಿಸುತ್ತಿದ್ದರು. 2016ರಲ್ಲಿ ಜಯಲಲಿತಾ ಅವರು ಇಹಲೋಕ ತ್ಯಜಿಸಿದ ನಂತರ ಈ ನಿಲಯವನ್ನು ಸ್ಮಾರಕವನ್ನಾಗಿ ಪರಿವರ್ತಿಸುವುದಾಗಿ ತಮಿಳುನಾಡು ಸರ್ಕಾರ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಸ್ಮಾರಕ ನಿರ್ಮಾಣಕ್ಕೆ ಸಿದ್ಧತೆ ಕೈಗೊಳ್ಳುವ ಉದ್ದೇಶದಿಂದ ವೇದ ನಿಲಯಂನಲ್ಲಿರುವ ಸ್ಥಿರ ಮತ್ತು ಚರ ಸ್ವತ್ತನ್ನು ತಮಿಳುನಾಡು ಸರ್ಕಾರ ಪುರಚ್ಚಿ ತಲೈವಿ ಡಾ.ಜಯಲಲಿತಾ ಮೆಮೋರಿಯಲ್‌ ಫೌಂಡೇಷನ್‌ಗೆ ಕಳುಹಿಸಿಕೊಡುತ್ತಿದೆ. ಹೀಗಾಗಿ ಅಲ್ಲಿರುವ ವಸ್ತುಗಳನ್ನು ಪಟ್ಟಿಮಾಡಿದೆ. ಜಯಲಲಿತಾ ಅವರ ನಿವಾಸದಲ್ಲಿ ಪೀಠೋಪಕರಣಗಳು, ಪುಸ್ತಕಗಳು, ಆಭರಣಗಳು ಸೇರಿ ಒಟ್ಟು 32,721 ಚರ ಸ್ವತ್ತುಗಳಿವೆ ಎಂದು ತಿಳಿಸಿದೆ.

'ತಲೈವಿ' ಗೆಳತಿ ಶಶಿಕಲಾ ಪಾತ್ರಕ್ಕೆ ಕನ್ನಡದ ನಟಿ; ನೆಟ್ಟಿಗರ ಗರಂ!

ಇದಕ್ಕೂ ಮುನ್ನ ಜಯಲಲಿತಾ ಅವರ ವೇದ ನಿಲಯಂ ನಿವಾಸವನ್ನು ಸ್ವಾಧೀನಪಡಿಸಿಕೊಂಡಿದ್ದಕ್ಕೆ ಪ್ರತಿಯಾಗಿ ತಮಿಳುನಾಡು ಸರ್ಕಾರ ಸ್ಥಳೀಯ ಸಿವಿಲ್‌ ನ್ಯಾಯಾಲಯದಲ್ಲಿ 67.9 ಕೋಟಿ ಠೇವಣಿ ಹೂಡಿತ್ತು. ಅದರಲ್ಲಿ 36.9ಕೋಟಿಯನ್ನು ಜಯಲಲಿತಾ ಅವರು ಬಾಕಿ ಉಳಿಸಿಕೊಂಡಿದ್ದರು ಎನ್ನಲಾದ ತೆರೆಗೆ ಇಲಾಖೆಗೆ ಪಾವತಿಸಲಾಗಿದೆ.