* ಹರಿಯಾಣದಲ್ಲಿ ಒಂದೇ ಸ್ಥಳದಲ್ಲಿ 200 ಕ್ಕೂ ಹೆಚ್ಚು ಬಾಂಬ್‌ಗಳು ಪತ್ತೆಯಾಗಿವೆ* ಭಾರೀ ಸಂಚಲನ ಮೂಡಿಸಿದೆ ಬೆಳವಣಿಗೆ* ಸೇನೆ ಹಾಗೂ ಪೊಲೀಸರಿಂದ ತನಿಖೆ
ಅಂಬಾಲಾ(ಫೆ.26): ಅಂಬಾಲಾ ಜಿಲ್ಲೆಯಿಂದ ಪ್ರಮುಖ ಮಾಹಿತಿಯೊಂದು ಹೊರಬಿದ್ದಿದೆ. ಹೌದು ಇಲ್ಲಿನ ಶಹಜಾದ್‌ಪುರ ಪ್ರದೇಶದ ಅರಣ್ಯದಲ್ಲಿ ಶುಕ್ರವಾರ 200 ಕ್ಕೂ ಹೆಚ್ಚು ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಾಂಬ್‌ಗಳನ್ನು ನೆಲದೊಳಗೆ ಹೂತಿಡಲಾಗಿತ್ತು ಎಂಬುವುದು ಉಲ್ಲೇಖನೀಯ. ಮಾಹಿತಿಯ ಪಡೆದ ಪೊಲೀಸರು ಮತ್ತು ಸೇನೆಯು ಸ್ಥಳಕ್ಕೆ ಧಾವಿಸಿ ಇಡೀ ಪ್ರದೇಶವನ್ನು ಸೀಲ್ ಮಾಡಿದ್ದಾರೆ. ಬಾಂಬ್‌ನ ನೋಡಲು ಹಳೆಯ ಮತ್ತು ತುಕ್ಕು ಹಿಡಿದ ಕಬ್ಬಿಣದ ಬಾಂಬ್‌ಗಳಂತಹ ತುಂಡುಗಳು ಗೋಚರಿಸುತ್ತವೆ. ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಸೇನಾ ಸಿಬ್ಬಂದಿ ಇಡೀ ಪ್ರದೇಶವನ್ನು ಸೀಲ್ ಮಾಡಿ ಜನರ ಓಡಾಟವನ್ನು ನಿಷೇಧಿಸಿ, ತನಿಖೆ ಮುಂದುವರೆಸಿದ್ದಾರೆ.
ಸೈನ್ಯ ತಲುಪಿ ಪರಿಸ್ಥಿತಿ ಹತೋಟಿಗೆ
ಶಹಜಾದ್‌ಪುರ ಅರಣ್ಯದ ಮಂಗಳೂರು ಗ್ರಾಮದ ಮೂಲಕ ಹಾದು ಹೋಗುವ ಬೇಗಮ ನದಿಯ ಬಳಿ ನೆಲದಲ್ಲಿ ಬಾಂಬ್‌ಗಳನ್ನು ಹೂತಿಟ್ಟಿರುವ ಬಗ್ಗೆ ಗ್ರಾಮಸ್ಥರು ಶುಕ್ರವಾರ ಅಂಬಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ನಂತರ ಈ ಪ್ರದೇಶದಲಲ್ಲಿ ಕೋಲಾಹಲ ಉಂಟಾಯಿತು. ಕೂಡಲೇ ಪೊಲೀಸ್ ತಂಡ ಸ್ಥಳಕ್ಕೆ ತಲುಪಿದೆ. ಬಾಂಬ್‌ನಂತಹ ವಸ್ತುವನ್ನು ನೋಡಿದ ನಂತರ ಸೇನೆಗೆ ಮಾಹಿತಿ ನೀಡಲಾಯಿತು. ಅದೇ ಸಮಯದಲ್ಲಿ ಬಾಂಬ್ ನಿಷ್ಕ್ರಿಯ ದಳವನ್ನೂ ಸ್ಥಳಕ್ಕೆ ಕರೆಸಲಾಯಿತು.
ಸೇನೆ ಮತ್ತು ಪೊಲೀಸರು ಹಲವು ಗ್ರಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ
ಇದಾದ ನಂತರ ಸೇನೆ ಮತ್ತು ಪೊಲೀಸರು ಇಡೀ ಪ್ರದೇಶವನ್ನು ಸೀಲ್ ಮಾಡಿದರು. ಬಳಿಕ ಬೇಗಾನದಿ ಬಳಿ ನೂರಾರು ಹಳೆಯ ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳಿಗೆ ತುಕ್ಕು ಹಿಡಿದಿತ್ತು. ಕೂಡಲೇ ಸುತ್ತಮುತ್ತಲಿನ ಗ್ರಾಮಗಳ ಜನರ ಸಂಚಾರವನ್ನು ನಿಲ್ಲಿಸಿ, ಸೇನೆ ಮತ್ತು ಪೊಲೀಸರು ಸುತ್ತಮುತ್ತಲಿನ ಪ್ರದೇಶದಲ್ಲಿ ತನಿಖೆಯಲ್ಲಿ ತೊಡಗಿದ್ದಾರೆ. ಸಮೀಪದಲ್ಲಿ ಇನ್ನಷ್ಟು ಬಾಂಬ್‌ಗಳು ಪತ್ತೆಯಾಗುವ ಆತಂಕವಿದೆ.
ಈ ಬಾಂಬ್‌ಗಳು ಎಲ್ಲಿಂದ ಬಂದವು?
ಇಷ್ಟೊಂದು ಪ್ರಮಾಣದಲ್ಲಿ ಈ ಬಾಂಬ್‌ಗಳು ಎಲ್ಲಿಂದ ಬಂದವು ಎಂದು ಸೇನೆ ತನಿಖೆ ನಡೆಸುತ್ತಿದೆ. ಮತ್ತು ಅವುಗಳನ್ನು ಯಾವಾಗಿನಿಂದ ಇಲ್ಲಿ ನೆಲದಲ್ಲಿ ಸಮಾಧಿ ಮಾಡಲಾಯಿತು? ಸೇನಾ ತಂಡದೊಂದಿಗೆ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಅದೇ ಸಮಯದಲ್ಲಿ ಬಾಂಬ್ ನಿಷ್ಕ್ರಿಯ ದಳವನ್ನೂ ಸ್ಥಳಕ್ಕೆ ಕರೆಸಲಾಯಿತು. ಈ ಬಾಂಬ್ ಸಕ್ರಿಯವಾಗಿದೆಯೇ ಅಥವಾ ಇಲ್ಲವೇ? ಅದರ ತನಿಖೆಯೂ ನಡೆಯುತ್ತಿದೆ.
