ನವದೆಹಲಿ(ಏ.26): ಭಾನುವಾರ ಬೆಳಗ್ಗೆ 11 ಗಂಟೆಗೆ ಮನ್‌ ಕೀ ಬಾತ್‌ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೊರೋನಾ ವಿರುದ್ಧದ ಸಮರದಲ್ಲಿ ಸರ್ಕಾರದ ಜೊತೆಗೆ ಇಡೀ ದೇಶವೇ ಒಂದಾಗಿ ಹೋರಾಡುತ್ತಿದೆ. ಈ ಸಮರದಲ್ಲಿ ದೇಶದ ಪ್ರತಿಯೊಬ್ಬನೂ ಯೋಧನೇ ಎಂದು ಶ್ಲಾಘಿಸಿದ್ದಾರೆ. 

"

ಮನ್‌ ಕೀ ಬಾತ್‌ನಲ್ಲಿ ಮೋದಿ ಉಲ್ಲೇಖಿಸಿದ ಪ್ರಮುಖ ಅಂಶಗಳು

* ದೇಶದ ಪ್ರತಿಯೊಬ್ಬ ನಾಗರಿಕ ಈ ಮಸರದಲ್ಲಿ ಸೈನಿಕರಾಗಿದ್ದಾರೆ. ಇದು ನಮ್ಮ ಭಾಗ್ಯ. ನೀವು ಎಲ್ಲೇ ನೋಡಿದ್ರೂ ಇದು ಕೊರೋನಾ ವಿರುದ್ಧ ಜನರ ಸಮರ ಎಂದು ತಿಳಿಯುತ್ತದೆ. ಇಡೀ ವಿಶ್ವವೇ ಈ ಮಹಾಮಾರಿ ವಿರುದ್ಧ ಹೋರಾಡುತ್ತಿದೆ. ಹೀಗಿರುವಾಗ ಭವಿಷ್ಯದಲ್ಲಿ ಈ ಕುರಿತು ಉಲ್ಲೇಖವಾದಾಗೆಲ್ಲಾ ಭಾರತದ ಜನರ ಹೋರಾಟ ತಪ್ಪದೇ ನೆನಪಿಸಿಕೊಳ್ಳಲಾಗುತ್ತದೆ ಎಂದಿದ್ದಾರೆ.

ದೇಶದ ಜನಕ್ಕೆ ತುಸು ನೆಮ್ಮದಿ: ಲಾಕ್‌ಡೌನ್‌ನಿಂದ ತಪ್ಪಿದ ಭಾರೀ ಅಪಾಯ!

* ಮನ್‌ ಕೀ ಬಾತ್‌ ಕಾರ್ಯಕ್ರಮದ 64 ನೇ ಸಂಚಿಕೆಯಲ್ಲಿ ಮಾತನಾಡಿದ ನರೇಂದ್ರ ಮೋದಿ ಲಾಕ್​ಡೌನ್​ ಸಮಯದಲ್ಲಿ ಚಪ್ಪಾಳೆ ತಟ್ಟುವಂತೆ, ದೀಪ ಬೆಳಗುವಂತೆ ಹೇಳಿದ್ದೆ. ಜನರು ಇದನ್ನು ಶಿಸ್ತಿನಿಂದ ಪಾಲಿಸಿದ್ದರು. ಈಈ ರೀತಿಯ ಆಂದೋಲನಗಳು ಪ್ರತಿಯೊಬ್ಬರಲ್ಲೂ ಸ್ಫೂರ್ತಿ ತುಂಬಿವೆ ಎಂದಿದ್ದಾರೆ.

* ಈ ಹೋರಾಟದಲ್ಲಿ ಎಲ್ಲರೂ ಪರಸ್ಪರ ಸಹಾಯ ಮಾಡಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಕೆಲವರು ತಮ್ಮ ವೇತನ ಈ ಸಮರಕ್ಕೆ ದಾನ ಮಾಡಿದರೆ, ಕೆಲವರು ಮಾಸ್ಕ್ ತಯಾರಿಸುತ್ತಿದ್ದಾರೆ. ಇನ್ನು ಕೆಲವರು ತಾವು ಬೆಳೆದ ತರಕಾರಿಯನ್ನು ಬಡವರಿಗೆ ನಿಡುತ್ತಿದ್ದಾರೆ. ಇನ್ನು ಕೆಲ ಕಾರ್ಮಿಕರು ಕ್ವಾರಂಟೈನ್ ಮಾಡಲಾದ ಶಾಲೆಯನ್ನು ದುರಸ್ಥಿ ಮಾಡುತ್ತಿದ್ದಾರೆ. ಇದೇ ಕೊರೊನಾ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಬಲ ತುಂಬುತ್ತದೆ.

* ನಮ್ಮ ಸಮಾಜ ಬದಲಾಗಿದೆ. ಹೊಸ ಹೊಸ ವಿಚಾರಗಳನ್ನು ನಾವು ತಿಳಿದುಕೊಳ್ಳುತ್ತಿದ್ದೇವೆ. ನಮಗೆ ಸಹಾಯ ಮಾಡುತ್ತಿರುವವರಿಗೆ ಧನ್ಯವಾದ ಹೇಳಲು ಹೊಸ ಹೊಸ ಮಾರ್ಗಗಳನ್ನು ಕಂಡು ಹಿಡಿದಿದ್ದೇವೆ. ಕೊರೋನಾ ವಾರಿರ್ಯಸ್​ ಬಗ್ಗೆ ಅನೇಕು ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಪೊಲೀಸರ ಬಗ್ಗೆ ನಮಗೆ ಇದ್ದ ಅಭಿಪ್ರಾಯ ಕೂಡ ಬದಲಾಗಿದೆ. ಈ ಬದಲಾವಣೆ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರಲಿದೆ

ಬಿಜೆಪಿಯ ಹಿರಿಯ ನಾಯಕ ಮಲ್ಪೆ ಸೋಮಶೇಖರ್‌ ಭಟ್‌ಗೆ ಮೋದಿ ಕರೆ

* ನಾನು ದೇಶದ 130 ಕೋಟಿ ಜನರಿಗೂ ಆಭಾರಿಯಾಗಿದ್ದೇನೆ. ಪ್ರತಿಯೊಬ್ಬ ವ್ಯಕ್ತಿಯೂ ಕೊರೋನಾ ವಿರುದ್ಧ ಹೋರಾಡುತ್ತಿದ್ದಾರೆ. ರೈಲ್ವೆ, ವಿಮಾನ ಸಂಸ್ಥೆಗಳು ಔಷಧಗಳನ್ನು ದೇಶದ ಮೂಲೆ ಮೂಲೆಗೆ ತಲುಪಿಸುವ ಕೆಲಸ ಮಾಡುತ್ತಿವೆ

* ಭಾರತದ ಆಯುರ್ವೇದವನ್ನೂ ಜನರು ಇಂದು ಗೌರವದಿಂದ ಹಾಗೂ ವಿಶಿಷ್ಟ ಭಾವದಿಂದ ಕಾಣುತ್ತಿದ್ದಾರೆ.