ಸ್ವಿಗ್ಗಿಯಿಂದ ಆಫೀಸ್‌ ಗೆ ಕಾಂಡೋಮ್‌ ಆರ್ಡರ್‌ ಮಾಡಿದವನ ಕಥೆ ಬೇಡ!

ಈಗ್ಲೂ ಭಾರತದಲ್ಲಿ ಕಾಂಡೋಮ್ ಎನ್ನುವ ಪದ ನಿಷೇಧಿತ. ಜನರು ಇದರ ಬಗ್ಗೆ ಬಹಿರಂಗವಾಗಿ ಮಾತನಾಡೋದಿಲ್ಲ. ಇನ್ನು ಎಲ್ಲರ ಎದುರೇ ಆರ್ಡರ್ ಮಾಡಿದ ಕಾಂಡೋಮ್ ಡೆಲಿವರಿ ಆದ್ರೆ ಕಥೆ ಏನಾಗ್ಬೇಡ? 
 

Ordered  condom from Swiggy in the office Then something happened roo

ಮೆಡಿಕಲ್ ಶಾಪ್ (Medical Shop) ಗೆ ಹೋಗಿ ಕಾಂಡೋಮ್ (Condom) ಖರೀದಿ ಮಾಡಲು ಅನೇಕರು ನಾಚಿಕೊಳ್ತಾರೆ. ಬೇರೆಯವರಿಗೆ ಗೊತ್ತಾಗದಂತೆ ಕದ್ದು ಮುಚ್ಚಿ ಕಾಂಡೋಮ್ ಖರೀದಿ ಮಾಡುವವರ ಸಂಖ್ಯೆ ಭಾರತದಲ್ಲಿ ಹೆಚ್ಚಿದೆ. ಹಾಗಾಗಿಯೇ ಅನೇಕರು ಆನ್ಲೈನ್ (Online) ನಲ್ಲಿ ಕಾಂಡೋಮ್ ಖರೀದಿಗೆ ಮುಂದಾಗ್ತಾರೆ. ಯಾರಿಗೂ ತಿಳಿಯಬಾರದು ಅಂತ ನೀವು ಆನ್ಲೈನ್ನಲ್ಲಿ ಖರೀದಿ ಮಾಡಿದ ಕಾಂಡೋಮ್ ಕಚೇರಿಗೆ ಬಂದಿದ್ದು, ಅದು ಎಲ್ಲರಿಗೂ ಗೊತ್ತಾದ್ರೆ, ನಿಮ್ಮ ಪರಿಸ್ಥಿತಿ ಹೇಗಿರಬೇಡ. ಕಚೇರಿಯಲ್ಲೆಲ್ಲ ನಿಮ್ಮದೇ ಸುದ್ದಿ ಒಂದ್ಕಡೆಯಾದ್ರೆ ಇನ್ನೊಂದ್ಕಡೆ ಮುಜುಗರದಲ್ಲಿ ನೀವು ಅರ್ಧ ಸತ್ತಿರ್ತೀರಿ. ಈಗ ವ್ಯಕ್ತಿಯೊಬ್ಬನ ಜೀವನದಲ್ಲಿ ಇದು ನಡೆದಿದೆ. ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ (Swiggy Instamart) ನಿಂದ ಕಾಂಡೋಮ್ ಖರೀದಿ ಮಾಡಿದ ವ್ಯಕ್ತಿ ಎಲ್ಲರ ಮುಂದೆ ಮುಜುಗರಕ್ಕೊಳಗಾಗಿದ್ದಾನೆ. ರೆಡ್ಡಿಟ್ ಪೋಸ್ಟ್ ಮೂಲಕ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾನೆ.

ಮನನ್ ಸಿಂಗ್ ಎಂಬಾತ ಪೋಸ್ಟ್ ಹಂಚಿಕೊಂಡಿದ್ದಾನೆ. ಮನನ್ ಸಿಂಗ್ ದೆಹಲಿಯಲ್ಲಿ ಕೆಲಸ ಮಾಡ್ತಿದ್ದಾನೆ. ಸ್ವಿಗ್ಗಿ ಇನ್‌ಸ್ಟಾಮಾರ್ಟ್ ನನ್ನನ್ನು ಹಾಳುಮಾಡಿದೆ ಎಂದು ಆತ ರೆಡ್ಡಿಟ್ ನ ದೆಹಲಿ ಕಮ್ಯೂನಿಟಿಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾನೆ. ಮನನ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಿಂದ ಕಾಂಡೋಮ್‌  ಪ್ಯಾಕ್ ಅನ್ನು ಆರ್ಡರ್ ಮಾಡಿದ್ದಾನೆ. ಡೆಲಿವರಿ ಬಾಯ್ ಬಂದು ಫೋನ್ ಮಾಡ್ತಿದ್ದಂತೆ, ಅದನ್ನು ರಿಸೆಪ್ಶನ್‌ನಲ್ಲಿ ನೀಡುವಂತೆ ಮನನ್ ಹೇಳಿದ್ದಾನೆ. ಸ್ವಲ್ಪ ಸಮಯದ ನಂತ್ರ  ರಿಸೆಪ್ಶನ್ಗೆ ಹೋದ ಮನನ್, ಪ್ಯಾಕ್ ನೋಡಿ ದಂಗಾಗಿದ್ದಾನೆ. ಸ್ವಿಗ್ಗಿ ಇನ್ಸ್ಟಾಮಾರ್ಟ್ನಿಂದ ಬಂದ ಕಾಂಡೋಮನ್ನು ಸರಿಯಾಗಿ ಪ್ಯಾಕ್ ಮಾಡಿರಲಿಲ್ಲ. ಪಾಸ್ಟಿಕ್ನ ಪಾರದರ್ಶಕ ಕವರ್ನಲ್ಲಿ ಅದನ್ನು ನೀಡಲಾಗಿತ್ತು. ಬ್ಯಾಗ್ ಒಳಗೆ ಕಾಂಡೋಮ್ ಇದೆ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಾಗುವಂತೆ ಪ್ಯಾಕ್ ಮಾಡಲಾಗಿತ್ತು. ಇದನ್ನು ನೋಡಿದ ಮನನ್ ಎಲ್ಲರ ಎದುರು ಮುಜುಗರಕ್ಕೊಳಗಾಗಿದ್ದಾನೆ. 

91ರ ಪತ್ನಿ, 23ರ ಪತಿ, ಹನಿಮೂನ್‌ಗೆ ಹೋದಾಗ ಆಗಿದ್ದೇನು? ಸತ್ಯ ತಿಳಿದು ಪೊಲೀಸ್‌ ಶಾಕ್‌

ಕಾಂಡೋಮ್ ಖರೀದಿ ಮಾಡೋದು ದೊಡ್ಡ ವಿಷ್ಯವಲ್ಲ. ನಾನು ಪ್ರತಿ ಬಾರಿ ಬ್ಲಿಂಕಿಟ್ ನಲ್ಲಿ ಆರ್ಡರ್ ಮಾಡ್ತಿದ್ದೆ. ಅವರು ಬ್ರೌನ್ ಪ್ಯಾಕೆಟ್ನಲ್ಲಿ ಕಾಂಡೋಮ್ ನೀಡ್ತಿದ್ದರು. ಸ್ವಿಗ್ಗಿ ಕೂಡ ಅದೇ ರೀತಿ ಪ್ಯಾಕಿಂಗ್ ಮಾಡಲಿದೆ ಎಂದು ನಾನು ಭಾವಿಸಿದ್ದೆ. ಇದ್ರ ಜೊತೆ ನಾನು ಮತ್ತೊಂದು ಮೂರ್ಖ ಕೆಲಸ ಮಾಡಿದ್ದೇನೆ. ರಿಸೆಪ್ಶನ್ನಲ್ಲಿ ಇಟ್ಟು ಹೋಗುವಂತೆ ಹೇಳಿದ್ದೇನೆ. ರಿಸೆಪ್ಶನ್ ಟೇಬಲ್ ಮೇಲೆ ಈ ಪ್ಯಾಕೆಟ್ ಓಪನ್ ಆಗಿ ಬಿದ್ದಿತ್ತು ಎಂದು ಮನನ್ ತನ್ನ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾನೆ. ಮನನ್ ಕಾಂಡೋಮ್ ಫೋಟೋವನ್ನೂ ರೆಡ್ಡಿಟ್ ನಲ್ಲಿ ಪೋಸ್ಟ್ ಮಾಡಿದ್ದ. ಗುಲಾಬಿ ಬಣ್ಣದ ಕವರ್ ಒಳಗೆ ಕಾಂಡೋಮ್ ಇರೋದನ್ನು ನೀವು ಕಾಣ್ಬಹುದು. ಈಗ ಮನನ್ ತನ್ನ ಪೋಸ್ಟ್ ಡಿಲೀಟ್ ಮಾಡಿದ್ದಾನೆ. ಆದ್ರೆ ಈಗ್ಲೂ ಪೋಸ್ಟ್ಗೆ ಬಂದ ಕಮೆಂಟ್ ನೋಡ್ಬಹುದು. 9 ಸಾವಿರಕ್ಕೂ ಹೆಚ್ಚು ಮಂದಿ ಈ ಪೋಸ್ಟ್ ಲೈಕ್ ಮಾಡಿದ್ದಾರೆ. 

ವಾರದಲ್ಲಿ 30 ಗಂಟೆ ಕೆಲಸ ಮಾಡಿ 2 ಕೋಟಿ ಸಂಪಾದನೆ ಮಾಡ್ತಾನೆ ಈತ !

ಕಮೆಂಟ್ ಮೇಲೆ ಕಣ್ಣು ಹಾಯಿಸೋದಾದ್ರೆ, ಬುದ್ದಿ ಇರೋ ಯಾರು ಆಫೀಸ್ನಲ್ಲಿ ಕಾಂಡೋಮ್ ಆರ್ಡರ್ ಮಾಡೋದಿಲ್ಲ  ಎಂದು ಬಳಕೆದಾರರೊಬ್ಬರು ಕೇಳಿದ್ದಾರೆ. ಕೆಲವರು ತಮ್ಮ ಜೀವನದಲ್ಲಾದ ಅನುಭವವನ್ನು ಹಂಚಿಕೊಂಡಿದ್ದಾರೆ. ನಾನು ಪಿಜಿಯಲ್ಲಿರುವಾಗ Zeptoದಲ್ಲಿ ಕಾಂಡೋಮ್ ಆರ್ಡರ್ ಮಾಡಿದ್ದೆ. ಅಲ್ಲಿಗೆ ಬಂದ ಡೆಲಿವರಿ ಬಾಯ್, ಓನರ್ ಎದುರು ಕಾಂಡೋಮ್ ತೆಗೆದಿಟ್ಟು ಫೋಟೋ ಹೊಡೆದುಕೊಂಡಿದ್ದರು ಎಂದು ಬಳಕೆದಾರನೊಬ್ಬ ತನ್ನ ಅನುಭವವನ್ನು ಹೇಳಿದ್ದಾನೆ. 

Latest Videos
Follow Us:
Download App:
  • android
  • ios