Asianet Suvarna News Asianet Suvarna News

Parliament session: ಇಡೀ ಚಳಿಗಾಲದ ಕಲಾಪ ಬಹಿಷ್ಕರಿಸಲು ವಿಪಕ್ಷಗಳ ನಿರ್ಧಾರ!?

ನ.29ರಂದು ಆರಂಭವಾದ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ  ಕೃಷಿ ಮಸೂದೆ ಸೇರಿ ಒಟ್ಟು ಮೂರು ಕಾನೂನುಗಳನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಇವುಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಸೋಮವಾರ ವಿರೋಧ ಪಕ್ಷಗಳು ಸದನದಲ್ಲಿ ಗಲಾಟೆಯೆಬ್ಬಿಸಿದ್ದವು. ನಂತರ ಸದನವನ್ನು ಇಂದಿಗೆ ಮುಂದೂಡಲಾಗಿತ್ತು. ಇಂದು ಸದನ ಮತ್ತೆ ಶುರುವಾಗಿದ್ದು, ಗದ್ದಲ ಮುಂದುವರೆದ ಕಾರಣ ಮತ್ತೆ ಮುಂದೂಡಲ್ಪಟ್ಟಿದೆ.

Opposition parties likely to skip entire winter sessions of parliament Strategy planned akb
Author
New Delhi, First Published Nov 30, 2021, 1:28 PM IST

ನವದೆಹಲಿ(ನ.30): ನಿನ್ನೆ ಶುರುವಾದ ಸಂಸತ್‌ನ ಚಳಿಗಾಲದ ಅಧಿವೇಶನ(parliment winter session) ಎರಡನೇ ದಿನವಾದ ಇಂದು  ಮುಂದುವರಿದ್ದು ವಿರೋಧ ಪಕ್ಷಗಳ ಗಲಾಟೆಯಿಂದ ಮುಂದೂಡಲ್ಪಟ್ಟಿದೆ. ಅಷ್ಟೇ ಅಲ್ಲ ವಿರೋಧ ಪಕ್ಷಗಳು ಸಂಪೂರ್ಣ ಚಳಿಗಾಲದ ಅಧಿವೇಶನವನ್ನೇ ಬಹಿಷ್ಕರಿಸುವ ಬಗ್ಗೆ,  ಸದನದಲ್ಲಿ ಪ್ರತಿಭಟನೆ ಮುಂದುವರೆಸುವ ಹಾಗೂ ಕಲಾಪಕ್ಕೆ ಅಡ್ಡಿಪಡಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ನಿನ್ನೆ ಸದನ ಶುರುವಾಗುತ್ತಿದ್ದಂತೆ ಸರ್ಕಾರ ಧ್ವನಿ ಮತದ ಮೂಲಕ ಕೃಷಿ ಕಾನೂನು ರದ್ಧತಿ ಮಸೂದೆಯನ್ನು ಲೋಕಸಭೆ ಹಾಗೂ ರಾಜ್ಯಸಭೆ ಉಭಯ ಸದನಗಳಲ್ಲೂ ಯಾವುದೇ ಚರ್ಚೆ ಇಲ್ಲದೇ ಅಂಗೀಕರಿಸಿತ್ತು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್‌ ಸೇರಿದಂತೆ 13 ಇತರ ಪಕ್ಷಗಳು ಇಡೀ ಚಳಿಗಾಲದ ಅಧಿವೇಶನವನ್ನೇ ಬಹಿಷ್ಕರಿಸುವ ಬಗ್ಗೆ ಚಿಂತನೆ ನಡೆಸಿವೆ. ಈ ಮಧ್ಯೆ ನಿನ್ನೆ ರಾಜ್ಯಸಭೆಯಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದ ವಿರೋಧ ಪಕ್ಷದ 12 ಸಂಸದರನ್ನು ಅಮಾನತು ಮಾಡಲಾಗಿದೆ. 

ಇಂದು ಬೆಳಗ್ಗೆ ವಿರೋಧ ಪಕ್ಷಗಳ ನಾಯಕರ ಸಭೆ ನಡೆದಿದ್ದು, ಇದರಲ್ಲಿ ತೃಣಮೂಲ ಕಾಂಗ್ರೆಸ್‌(TMC)ಭಾಗಿಯಾಗಿಲ್ಲ. ಇದು ತನ್ನ ಮುಂದಿನ ಯೋಜನೆಯ ಬಗ್ಗೆ  ನಿರ್ಧರಿಸಲು ಬೇರೆಯದೇ ಸಭೆ ಕರೆದಿದೆ ಎಂದು ಟಿಎಂಸಿಯ ರಾಜ್ಯಸಭಾ ಸದಸ್ಯ ಡೆರೆಕ್‌ ಒಬ್ರೆನ್‌(Derek O'Brien) ಹೇಳಿದ್ದಾರೆ. ಇತ್ತ ಅಮಾನತಿಗೊಳಗಾದ 12 ಸಂಸದರ ಪೈಕಿ ತೃಣಮೂಲ ಕಾಂಗ್ರೆಸ್‌ಗೆ ಸೇರಿದ ಸಂಸದರೂ ಕೂಡ ಇದ್ದಾರೆ.

Bitcoin: ಬಿಟ್‌ಕಾಯಿನ್‌ಗೆ ಕರೆನ್ಸಿ ಮಾನ್ಯತೆ ನೀಡಲ್ಲ: ಕೇಂದ್ರ

ಇಂದು ರಾಜ್ಯಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಸಂಸದರ ಅಮಾನತು ಹಿಂಪಡೆಯುವಂತೆ ಪ್ರತಿಪಕ್ಷಗಳ ಸದಸ್ಯರು ಮತ್ತೆ ಗಲಾಟೆ ಎಬ್ಬಿಸಿದರು. ಇದರಿಂದ ಕಲಾಪದ ವಾತಾವರಣ ಮತ್ತೆ ಗದ್ದಲಕ್ಕೀಡಾಯಿತು. ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು(Venkayya Naidu) ಅವರಿಗೆ ವಿರೋಧ ಪಕ್ಷಗಳ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಅಮಾನತು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. ಆದರೆ ಅವರು ಅಮಾನತು ಹಿಂಪಡೆಯಲಾಗದು ರಾಜ್ಯಸಭಾ ಅಧ್ಯಕ್ಷರು ಕ್ರಮ ಕೈಗೊಳ್ಳಲು ಅಧಿಕಾರ ಹೊಂದಿದ್ದಾರೆ ಎಂದಿದ್ದಾರೆ. ಇದರಿಂದ ಆಕ್ರೋಶಗೊಂಡು ಕಲಾಪದಿಂದ ಹೊರ ನಡೆದ ವಿರೋಧ ಪಕ್ಷದ ಸದಸ್ಯರು, ಲೋಕಸಭೆಯ ವಿರೋಧ ಪಕ್ಷದ ನಾಯಕ ಖರ್ಗೆ(Mallikarjuna Kharge) ಅವರ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದಾರೆ.  

ಇತ್ತ ಲೋಕಸಭೆಯಲ್ಲೂ ತೀವ್ರ ಗದ್ದಲವೆಬ್ಬಿಸಿರುವ ವಿರೋಧ ಪಕ್ಷಗಳು ಇಂದು ಇಡೀ ದಿನ ತಾವು ಕಲಾಪಕ್ಕೆ ತೆರಳುವುದಿಲ್ಲ ಎಂದು ಹೇಳಿದ್ದು, ಸಂಸತ್‌ನ ಗಾಂಧಿ ಪ್ರತಿಮೆ ಬಳಿ ಟಿಆರ್‌ಎಸ್‌, ಎಎಪಿ ಮುಂತಾದ ಪಕ್ಷಗಳ ಸಂಸದರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ತೃಣಮೂಲ ಕಾಂಗ್ರೆಸ್ ಭಾಗಿಯಾಗಿಲ್ಲ. ವಿರೋಧ ಪಕ್ಷಗಳು ಸದನದಿಂದ ಹೊರ ನಡೆದ ಹಿನ್ನೆಲೆ ಕಲಾಪವನ್ನು ಮಧ್ಯಾಹ್ನ 2  ಗಂಟೆಗೆ ಮುಂದೂಡಲಾಗಿದೆ. 

12 Rajya Sabha MPs suspended: ಆಗ ಗಲಾಟೆ ಮಾಡಿದ್ದವರಿಗೆ ಈಗ ಸಸ್ಪೆಂಡ್ ಶಿಕ್ಷೆ

ಸದನ ಆರಂಭವಾಗುತ್ತಿದ್ದಂತೆ ಮಾತನಾಡಿದ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು, ಮಳೆಗಾಲದ ಅಧಿವೇಶನದಲ್ಲಿ ಆದ ಕಹಿ ಘಟನೆ ಇನ್ನೂ ನಮ್ಮನ್ನು ಕಾಡುತ್ತಲೇ ಇದೆ. ಕಳೆದ ಅಧಿವೇಶನದಲ್ಲಿ  ಏನಾಯಿತು ಎಂಬ ಬಗ್ಗೆ ಸಂಸತ್‌ನ ಪ್ರಮುಖರು ಮಾತನಾಡುತ್ತಾರೆ ಎಂದು ಭಾವಿಸಿದ್ದೆ ಆದರೆ ಅದಾಗಲಿಲ್ಲ ಎಂದು ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದರು. 
 

Follow Us:
Download App:
  • android
  • ios