ಕಾಸರಗೋಡು(ಏ.29): ವಿದೇಶಗಳಲ್ಲಿ ನೆಲೆಸಿರುವ, ಉದ್ಯೋಗಿಗಳಾಗಿರುವ ಹಾಗೂ ಇತರ ರಾಜ್ಯದಲ್ಲಿರುವ ಕೇರಳ ಮೂಲನಿವಾಸಿಗಳಿಗೆ ತವರಿಗೆ ಮರಳಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ನೋಂದಣಿ ಕಾರ್ಯವನ್ನು ಆರಂಭಿಸಿದೆ. ವಿದೇಶದಲ್ಲಿರುವ ಹಾಗೂ ಇತರ ರಾಜ್ಯದಲ್ಲಿರುವ ಕೇರಳ ಮೂಲ ನಿವಾಸಿಗಳು ಆನ್‌ಲೈನ್ ಮೂಲಕ ನೋಂದಣಿ ಮಾಡಿಸಿಕೊಳ್ಳಬೇಕಿದೆ. ಈ ಕುರಿತು ಮಾಹಿತಿಯನ್ನು ಕಾಸರಗೋಡು ಜಿಲ್ಲಾ ಮಾಹಿತಿ ವಿಭಾಗ ಸೂಚನೆ ನೀಡಿದೆ.

ಗಡಿ ಬಂದ್: ಸುಪ್ರೀಂ ಮುಂದೆ ಕರ್ನಾಟಕದ ವಿರುದ್ಧ ಕೇರಳ ಗಂಭೀರ ಆರೋಪ

ವಿಶೇಷ ಅಂದರೆ ಕಾಸರಗೋಡು ಜಿಲ್ಲಾ ಮಾಹಿತಿ ವಿಭಾಗ ಸಾಮಾಜಿಕ ಜಾಲತಾಣದಲ್ಲಿ ಕನ್ನಡದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ. ಈ ಮೂಲಕ ಕೇರಳ ಹಾಗೂ ಕರ್ನಾಟಕ ಗಡಿ ಭಾಗವಾಗಿರುವ ಕಾಸರಗೋಡು ನಿವಾಸಿಗಳಿಗೆ ಅನೂಕೂಲವಾಗುವಂತೆ ಮಾಡಿದೆ. ನೋಂದಣಿ ಕಾರ್ಯ ಇಂದು (29-4-2020) ಸಂಜೆ ಆರಂಭಗೊಳ್ಳಲಿದೆ. ಇದಕ್ಕಾಗಿ https://www.registernorkaroots.org/ ವೆಬ್‌ಸೈಟ್ ಮೂಲಕ ನೋಂದಣಿ ಮಾಡಲು ಸೂಚಿಸಿದೆ.

ಎರಡೇ ತಿಂಗಳಲ್ಲಿ ಸಿದ್ಧವಾಗಲಿದೆ ಕೊರೋನಾ ಆಸ್ಪತ್ರೆ..! ಟಾಟಾ ಗ್ರೂಪ್‌ನಿಂದ ಕೆಲಸ ಸ್ಟಾರ್ಟ್

ಕೇರಳದ ಎಲ್ಲಾ ಜಿಲ್ಲೆಗಳ ಪೈಕಿ ಕಾಸರಗೋಡು ಜಿಲ್ಲೆಯಲ್ಲಿ ಗರಿಷ್ಠ ಕೊರೋನಾ ಪ್ರಕರಣಗಳು ಪತ್ತೆಯಾಗಿತ್ತು.  ಸದ್ಯ ಕಾಸರಗೋಡಿನ  ಕಾಞಂಗಾಡು ನಗರಸಭೆ, ಕಾಸರಗೋಡು ನಗರಸಭೆ, ಕುಂಬಳೆ, ಮಧೂರು, ಚೆಮ್ನಾ ಡ್, ಚೆಂಗಳ, ಮೊಗ್ರಾಲ್ ಪುತ್ತೂರು, ಮುಳಿಯಾರು ಗ್ರಾಮ ಪಂಚಾಯತ್‌ಗಳಲ್ಲದೆ ಅಜಾನೂರು ಗ್ರಾಮ ಪಂಚಾಯತ್ ಕೂಡ ಹಾಟ್ ಸ್ಪಾಟ್ ಪಟ್ಟಿಯಲ್ಲಿ ಸೇರಿದೆ.