ನವದೆಹಲಿ(ಸೆ.25): ರೋಮಿಯೋ ವಿರೋಧಿ ಪಡೆ ತಂದು ರೋಡ್‌ ರೋಮಿಯೋಗಳಿಗೆ ಬಿಸಿಮುಟ್ಟಿಸಿದ ಉತ್ತರಪ್ರದೇಶ ಸರ್ಕಾರ ಈಗ ಇನ್ನೊಂದು ವಿನೂತನ ಯೋಜನೆ ರೂಪಿಸಿದೆ. 

ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವ, ಪೀಡಿಸುವ ಪುರುಷರು ಇನ್ನು ಮುಂದೆ ಉತ್ತರಪ್ರದೇಶದ ರಸ್ತೆಗಳಲ್ಲಿ, ಜಂಕ್ಷನ್‌ಗಳಲ್ಲಿ ಪೋಸ್ಟರ್‌ ಮೂಲಕ ರಾರಾಜಿಸಲಿದ್ದಾರೆ. ಈ ಮೂಲಕ ಮಾನ ಹರಾಜಾಗಲಿದೆ.

ಕಂಗನಾ ಮನೆ ಕೆಡವಿದ್ದ ಮುಂಬೈ ಪಾಲಿಕೆಗೆ ಬಿಸಿ ಮುಟ್ಟಿಸಿದ ಕೋರ್ಟ್

ಸೆಕ್ಸ್ ಆರೋಪವನ್ನೆದುರಿಸಿ ಆರೋಪಿಯಾಗಿ ಸಾಬೀತಾದವರ ಫೋಟೋಗಳನ್ನು ದೊಡ್ಡದಾಗಿ ಪೋಸ್ಟರ್ ಹಾಕಿ ಅಂಟಿಸಲಾಗುತ್ತದೆ. ಈ ಮೂಲಕ ಮಾನ ಹರಾಜು ಹಾಕೋ ಸುಲಭ ಮಾರ್ಗವನ್ನು ಅನುಸರಿಸಿದೆ ಸರ್ಕಾರ.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆಪರೇಷನ್ ದುರಾಚಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಸುಮ್ಮನೆ ಹೆಣ್ಮಕ್ಕಳನ್ನು ಚುಡಾಯಿಸಿದ್ರೂ ಅವರ ಫೋಟೋಗಳು ರಸ್ತೆಗೆ ಬಂದು ಮಾನ ಹರಾಜಾಗಲಿದೆ. ಮಹಿಳೆಯರಿಗೆ ತೊಂದರೆಕೊಡುವವರ ಹೆಸರು, ಪರಿಚಯ ಬಹಿರಂಗಗೊಳಿಸಿ ಮಾನ ಹರಾಜು ಮಾಡಲು ಇಂತಹ ನಿರ್ಧಾರ ಮಾಡಲಾಗಿದೆ.

ದೆಹಲಿ ಉಪ ಮುಖ್ಯಮಂತ್ರಿ ಆರೋಗ್ಯ ಸ್ಥಿತಿ ಗಂಭೀರ

2017ರಲ್ಲಿ ಉತ್ತರ ಪ್ರದೇಶ ಸರ್ಕಾರ ರೋಮಿಯೋ ವಿರೋಧಿ ಯೋಜನೆ ಜಾರಿ ಮಾಡಿತ್ತು. ಇದಲ್ಲಿ ಆರೋಪಿಯಾಗಿ ಸಾಬೀತಾದರೆ ಅಂತವರ ತಲೆ ಕೂದಲು ಬೋಳಿಸಿ, ಮುಖಕ್ಕೆ ಕರಿ ಹಚ್ಚಿ, ಕಿವಿಗೆ ಕೈ ಹಚ್ಚಿ ಕುಳ್ಳಿರಿಸಲಾಗುತ್ತಿತ್ತು. 2017ರಲ್ಲಿ ಯೋಗಿ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ನಿಯಮಗಳನ್ನು ಜಾರಿ ಮಾಡಲಾಗಿತ್ತು