ಆಪ್ ಮತ್ತು ಖಲೀಸ್ತಾನಿ ನಂಟಿನ ಬಗ್ಗೆ ಮತ್ತೊಂದು ಆರೋಪಸಿಖ್ ಫಾರ್ ಜಸ್ಟೀಸ್ ಪ್ರಧಾನ ಕಾರ್ಯದರ್ಶಿಯ ನೇರ ಆರೋಪಆಪ್ ಗೆಲುವಿಗೆ ಖಲೀಸ್ತಾನಿ ಮತ ಹಾಗೂ ಬಂಡವಾಳ ಕಾರಣ
ನವದೆಹಲಿ (ಮಾ.12): ಪಂಜಾಬ್‌ನಲ್ಲಿ ( Punjab ) ಆಮ್ ಆದ್ಮಿ ಪಕ್ಷ (Aam Admi Party) ಗೆಲ್ಲಲು ಖಲಿಸ್ತಾನ ಪರವಾದ ಮತ ಮತ್ತು ಬಂಡವಾಳ ಕಾರಣ ಎಂದು ಖಲಿಸ್ತಾನಿ (khalistani ) ಪರ ಸಂಘಟನೆ ಸಿಖ್ ಫಾರ್ ಜಸ್ಟೀಸ್ (sikh for justice) ಗಂಭೀರ ಆರೋಪ ಮಾಡಿದೆ.
ಈ ಕುರಿತು ಪಂಜಾಬ್‌ನ ನೂತನ ನಿಯೋಜಿತ ಸಿಎಂ ಭಗವಂತ್ ಸಿಂಗ್ ಮಾನ್‌ಗೆ (Bagwant Mann) ಪತ್ರ ಬರೆದಿರುವ ಎಸ್‌ಎಫ್‌ಜೆ ಪ್ರಧಾನ ಕಾರ್ಯದರ್ಶಿ ಗುರುಪತ್ವಂತ್ ಸಿಂಗ್, ‘ಪ್ರತ್ಯೇಕ ಪಂಜಾಬ್ ರಾಜ್ಯ ಸ್ಥಾಪನೆಯ ಪರವಾಗಿರುವ ಮತದಾರರನ್ನು ಬೇಡಿಕೊಳ್ಳುವ ಮೂಲಕ ಅತಿ ಹೆಚ್ಚು ಮತಗಳನ್ನು ಆಪ್ ಪಡೆದುಕೊಂಡಿದೆ. ಅಷ್ಟೇ ಅಲ್ಲದೇ ಅಮೆರಿಕ, ಬ್ರಿಟನ್, ಕೆನಡಾ, ಆಸ್ಪ್ರೇಲಿಯಾ ಮತ್ತು ಯುರೋಪಿನ ರಾಷ್ಟ್ರಗಳಲ್ಲಿರುವ ಖಲಿಸ್ತಾನ ಪರವಾದ ಸಿಖ್ಖರಿಂದ ದೊಡ್ಡಮಟ್ಟದ ಹಣಕಾಸಿನ ಸಹಕಾರ ಪಡೆದುಕೊಂಡಿದೆ. ಆಪ್ ಗ್ರಾಮೀಣ ಪ್ರದೇಶಗಳಲ್ಲಿ ಶೇ.70ರಷ್ಟುಮತಗಳನ್ನು ಪಡೆದುಕೊಂಡಿದೆ. ಖಲಿಸ್ತಾನ್ ಎನ್ನುವುದು ಸಿಖ್ ಮತ್ತು ಭಾರತದ ನಡುವಿನ ವಿವಾದ. ಈ ವಿಷಯದಲ್ಲಿ ಆಮ್‌ಆದ್ಮಿ ಪಕ್ಷ ಮಧ್ಯಪ್ರವೇಶ ಮಾಡಬಾರದು. ಖಲಿಸ್ತಾನ ಪರ ಪಂಜಾಬ್‌ನಲ್ಲ ಜನಮತಗಣನೆಗೆ ಅವಕಾಶ ನೀಡಿ. ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಿದ ಹಿಂದಿನ ನಾಯಕರ ಕಥೆ ಏನಾಯಿತು ಎಂದು ಮರೆಯಬೇಡಿ’ ಎಂದು ಮಾನ್‌ಗೆ ಎಚ್ಚರಿಕೆ ನೀಡಿದೆ.
ಮಾಧ್ಯಮಗಳ ಬಿಜೆಪಿ ಬಿ ಟೀಂ ಎಂದಿದ್ದಕ್ಕೆ ಬಿಎಸ್‌ಪಿ ಸೋತಿದೆ
ಲಖನೌ: ಜಾತಿವಾದಿ ಮಾಧ್ಯಮಗಳು ಸಮಾಜವಾದಿ ಪಕ್ಷವನ್ನು ‘ಬಿಜೆಪಿಯ ಬಿ ಟೀಂ’ ಎಂದು ಬಿಂಬಿಸಿದ್ದರಿಂದ ಮುಸ್ಲಿಮರು ಹಾಗೂ ಬಿಜೆಪಿ ವಿರೋಧಿ ಮತದಾರರೂ ಬಹುಜನ ಸಮಾಜವಾದಿ ಪಕ್ಷವನ್ನು ಬೆಂಬಲಿಸಲಿಲ್ಲ ಎಂದು ಬಿಎಸ್‌ಪಿ (BSP) ನಾಯಕಿ ಮಾಯಾವತಿ (Mayawati) ಶುಕ್ರವಾರ ಆರೋಪಿಸಿದ್ದಾರೆ.
ಮಾಧ್ಯಮಗಳು ‘ಬಿಜೆಪಿ ಬಿ ಟೀಂ’ ಎಂದು ಬಿಂಬಿಸಿದ್ದೇ ಬಿಎಸ್‌ಪಿಗೆ ಮಾರಕವಾಯಿತು. ಮುಸ್ಲಿಂ ಸಮುದಾಯದವರು, ಬಿಜೆಪಿ ವಿರೋಧಿ ಮತದಾರರೂ ಸಮಾಜವಾದಿ ಪಕ್ಷದತ್ತ ಹೊರಳಿದರು. ಇನ್ನೊಂದೆಡೆ ಮೇಲ್ಜಾತಿ, ಹಿಂದುಳಿದ ವರ್ಗದವರು ಹಾಗೂ ಇನ್ನಿತರ ಸಮುದಾಯಗಳು ಸಮಾಜವಾದಿ ಪಕ್ಷವು ಮರಳಿ ಅಧಿಕಾರಕ್ಕೆ ಬಂದರೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯಿಲ್ಲದ ‘ಜಂಗಲ್ ರಾಜ್’ ಆರಂಭವಾಗಬಹುದು ಎಂಬ ಭಯದಲ್ಲಿ ಪಕ್ಷದ ಬೆಂಬಲಿಗರು ಬಿಜೆಪಿಯತ್ತ ಮುಖ ಮಾಡಿದರು ಹೀಗಾಗಿ ಬಿಎಸ್‌ಪಿ ಉತ್ತರ ಪ್ರದೇಶದ ಚುನಾವಣೆಯಲ್ಲಿ ಅತಿ ಕಡಿಮೆ ಸ್ಥಾನವನ್ನು ಗೆದ್ದಿದೆ ಎಂದು ಮಾಯಾವತಿ ಹೇಳಿದ್ದಾರೆ. ಬಹುಜನ ಸಮಾಜವಾದಿ ಪಕ್ಷವು 403 ಸೀಟುಗಳುಳ್ಳ ಉತ್ತರಪ್ರದೇಶದ ಚುನಾವಣೆಯಲ್ಲಿ ಕೇವಲ 1 ಸ್ಥಾನವನ್ನು ಮಾತ್ರ ಗೆದ್ದಿದೆ.
Punjab CM ಪಂಜಾಬ್ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಪ್ರಮಾಣವಚನಕ್ಕೆ ಮುಹೂರ್ತ ಫಿಕ್ಸ್!
‘ಮಾಧ್ಯಮಗಳು ‘ಬಿಜೆಪಿ ಬಿಟೀಂ’ ಎಂದು ಬಿಂಬಿಸಿದ್ದೇ ಬಿಎಸ್‌ಪಿಗೆ ಮಾರಕವಾಯಿತು. ಮುಸ್ಲಿಂ ಸಮುದಾಯದವರು, ಬಿಜೆಪಿ ವಿರೋಧಿ ಮತದಾರರು ಸಮಾಜವಾದಿ ಪಕ್ಷದತ್ತ ಹೊರಳಿದರು. ಇನ್ನೊಂದೆಡೆ ಮೇಲ್ಜಾತಿ, ಹಿಂದುಳಿದ ವರ್ಗದವರು ಹಾಗೂ ಇನ್ನಿತರ ಸಮುದಾಯಗಳು ಸಮಾಜವಾದಿ ಪಕ್ಷವು ಮರಳಿ ಅಧಿಕಾರಕ್ಕೆ ಬಂದರೇ ರಾಜ್ಯದಲ್ಲಿ ‘ಜಂಗಲ್ ರಾಜ’ ಆರಂಭವಾಗಬಹುದು ಎಂಬ ಭಯದಲ್ಲಿ ಪಕ್ಷದ ಬೆಂಬಲಿಗರು ಬಿಜೆಪಿಯತ್ತ ಮುಖ ಮಾಡಿದರು.’ ಎಂದು ಬಿಎಸ್ ಪಿ ಅಧಿನಾಯಕಿ ಹೇಳಿದ್ದಾರೆ.
ಸಿಎಂ ಸ್ಥಾನಕ್ಕೆ ಚನ್ನಿ ರಾಜೀನಾಮೆ: ಪಂಜಾಬ್ ಬದಲಾವಣೆಗೆ ಮತ ನೀಡಿದೆ ಎಂದು ಅಚ್ಚರಿಯ ಹೇಳಿಕೆ!
ವಿಧಿವಿಜ್ಞಾನ ಪರೀಕ್ಷೆ ನಡೆಯಲಿದೆ
ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಶೇಕಡಾವಾರು ಪ್ರಮಾಣ ಶೇ.20 ರಿಂದ ಶೇ.37ಕ್ಕೆ ಏರಿಕೆಯಾಗಿದೆ. ಕಳೆದ ಬಾರಿ ಅಖೀಲೇಶ್ ಸರ್ಕಾರ ರಚಿಸಿದಾಗ ಮತಗಳಿಕೆ ಪ್ರಮಾಣ ಶೇ.36 ರಷ್ಟಿತ್ತು. ಇದು ಇವಿಎಂ ದುರ್ಬಳಕೆಯಾಗಿದ್ದನ್ನು ಸೂಚಿಸುತ್ತದೆ. ಹೀಗಾಗಿ ಅಖೀಲೇಶ್ ಯಾದವ್ ನಿರಾಶರಾಗದೇ ಎವಿಎಂ ಯಂತ್ರಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಬೇಕು ಎಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
