ಭಾರತ ಚುನಾವಣೆಯಲ್ಲಿ ಇಸ್ರೇಲಿ ಸಂಸ್ಥೆ ಹಸ್ತಕ್ಷೇಪ, ಒಪ್ಪಿಕೊಂಡ ಕೃತಕ ಬುದ್ಧಿಮತ್ತೆ ಸಂಸ್ಥೆ!

ಇಸ್ರೇಲಿ ಸಂಸ್ಥೆ ಸ್ಟಾಯ್ಕ್‌ ಭಾರತೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿರುವ ಆರೋಪ ಕೇಳಿಬಂದಿದ್ದು, ವಿವಿಧ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಬಿಜೆಪಿ ವಿರೋಧಿ ಬರಹಗಳನ್ನು ಪ್ರಕಟ ಮಾಡಿದ್ದನ್ನು ತೆಗೆದು ಹಾಕಿರುವುದಾಗಿ ಕೃತಕ ಬುದ್ಧಿಮತ್ತೆ ಸಂಸ್ಥೆ ಓಪನ್‌ ಎಐ ತಿಳಿಸಿದೆ.

OpenAI claims Network Run By Israeli Firm Tried Peddling Anti-BJP Agenda During Lok Sabha  election 2024 gow

ನವದೆಹಲಿ: ಇಸ್ರೇಲಿ ಸಂಸ್ಥೆ ಸ್ಟಾಯ್ಕ್‌ ಭಾರತೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿರುವ ಆರೋಪ ಕೇಳಿಬಂದಿದ್ದು, ವಿವಿಧ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಬಿಜೆಪಿ ವಿರೋಧಿ ಬರಹಗಳನ್ನು ಪ್ರಕಟ ಮಾಡಿದ್ದನ್ನು ತೆಗೆದು ಹಾಕಿರುವುದಾಗಿ ಕೃತಕ ಬುದ್ಧಿಮತ್ತೆ ಸಂಸ್ಥೆ ಓಪನ್‌ ಎಐ ತಿಳಿಸಿದೆ.

ಸ್ಟಾಯ್ಕ್‌ ಕಂಪನಿಯು ಪ್ರಪಂಚದಲ್ಲಿ ನಡೆಯುತ್ತಿರುವ ಪ್ರಚಲಿತ ವಿದ್ಯಮಾನಗಳ ಕುರಿತು ಮಾಹಿತಿ ರಚಿಸಿಕೊಡುವ ಕೆಲಸ ಮಾಡುತ್ತಿದ್ದು, ಬಿಜೆಪಿ ವಿರೋಧಿ ಹಾಗೂ ಕಾಂಗ್ರೆಸ್‌ ಪರ ಕೆಲವು ಆಕ್ಷೇಪಾರ್ಹ ಬರಹಗಳನ್ನು ಬರೆದು ತನ್ನ ಟೆಲಿಗ್ರಾಂ, ಎಕ್ಸ್‌, ಇನ್ಸ್‌ಟಾಗ್ರಾಂ ಹಾಗೂ ಇತರ ಸಾಮಾಜಿಕ ಜಾಲತಾಣಗಳ ವೇದಿಕೆಯಲ್ಲಿ ಪ್ರಕಟಿಸಿತ್ತು. ಅದರಲ್ಲಿ ಕೃತಕ ಬುದ್ಧಿಮತ್ತೆ ಬಳಸಿ ತನ್ನ ಸ್ವಂತ ಅಭಿಪ್ರಾಯಗಳನ್ನು ರಚಿಸಿರುವಂತೆ ತೋರಿಸಲಾಗಿತ್ತು. ಅಲ್ಲದೆ ತನ್ನದೇ ಕೆಲವು ನಕಲಿ ಅಕೌಂಟ್‌ಗಳನ್ನು ಸೃಷ್ಟಿಸಿ ಬಿಜೆಪಿ ವಿರೋಧಿ ಅಭಿಪ್ರಾಯ ಬರೆದು ಅದನ್ನು ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಅವುಗಳನ್ನು ಅಳಿಸಿ ಹಾಕಿರುವುದಾಗಿ ಸಹಯೋಗ ಸಂಸ್ಥೆ ಓಪನ್‌ ಎಐ ತಿಳಿಸಿದೆ.

Goa EOLC : ದೇಶದಲ್ಲೇ ಮೊದಲ ಬಾರಿ ಮರಣಕ್ಕೆ ‘ಫ್ರೀವಿಲ್’ ಜಾರಿ

ಇದಕ್ಕೂ ಮೊದಲು ಹಮಾಸ್‌ ಪರ ಬರಹಗಳನ್ನು ಪ್ರಕಟಿಸಿ ತನ್ನದೇ ದೇಶದಲ್ಲಿ ಸ್ಟಾಯ್ಕ್‌ (STOIC) ಟೀಕೆಗೆ ಗುರಿಯಾಗಿತ್ತು. ಮೇ ಆರಂಭದಲ್ಲಿ, ಇದು (ನೆಟ್‌ವರ್ಕ್) ಇಂಗ್ಲಿಷ್ ಭಾಷೆಯ ವಿಷಯದೊಂದಿಗೆ ಭಾರತದಲ್ಲಿ ಪ್ರೇಕ್ಷಕರನ್ನು ಗುರಿಯಾಗಿಸಲು ಪ್ರಾರಂಭಿಸಿತು ಎಂದು ವರದಿ ತಿಳಿಸಿದೆ. ಈ ಕಾರ್ಯಾಚರಣೆಯು ಕೆನಡಾ, ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್‌ನಲ್ಲಿ ಇಂಗ್ಲಿಷ್ ಮತ್ತು ಹೀಬ್ರೂ ಭಾಷೆಯಲ್ಲಿನ ವಿಷಯದೊಂದಿಗೆ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡಿದೆ. ಮೇ ಆರಂಭದಲ್ಲಿ, ಇದು ಇಂಗ್ಲಿಷ್ ಭಾಷೆಯ ವಿಷಯದೊಂದಿಗೆ ಭಾರತದಲ್ಲಿ ಪ್ರೇಕ್ಷಕರನ್ನು ಗುರಿಯಾಗಿಸಲು ಪ್ರಾರಂಭಿಸಿತು ಎಂದು OpenAI ಹೇಳಿದೆ. ಇದು ಪ್ರಾರಂಭವಾದ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಭಾರತದ ಚುನಾವಣೆಗಳ ಮೇಲೆ ಕೇಂದ್ರೀಕರಿಸಿದ ಕೆಲವು ಚಟುವಟಿಕೆಗಳಿಗೆ ಅಡ್ಡಿಪಡಿಸಿದೆ ಎಂದು ಕಂಪನಿ ಹೇಳಿದೆ.

ನೀಲಿ ಚಿತ್ರ ತಾರೆ ಜತೆ ಲೈಂಗಿಕ ಸಂಬಂಧ, ಅಮೆರಿಕ ಅಧ್ಯಕ್ಷ ಚುನಾವಣೆಗೂ ಮುನ್ನ ಟ್ರಂಪ್‌ಗೆ ಕೋರ್ಟ್ ಶಾಕ್‌!

ವರದಿಗೆ ಪ್ರತಿಕ್ರಿಯಿಸಿದ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್, ಇದು ನಮ್ಮ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ.  ಕೆಲವು ಭಾರತೀಯ ರಾಜಕೀಯ ಪಕ್ಷಗಳಿಂದ ಮತ್ತು ಅವರ ಪರವಾಗಿರುವವರಿಂದ  ಬಿಜೆಪಿ ಮೇಲೆ ಪ್ರಭಾವ ಬೀರಿ ತಪ್ಪು ಮಾಹಿತಿ ಮತ್ತು ವಿದೇಶಿ ಹಸ್ತಕ್ಷೇಪದ ಕಾರ್ಯಾಚರಣೆಯ ಗುರಿಯಾಗಿತ್ತು ಎಂಬುದು ಈಗ ಸ್ಪಷ್ಟವಾಗಿದೆ. ಭಾರತ ಮತ್ತು ಹೊರಗಿನ ಕೆಟ್ಟ ಹಿತಾಸಕ್ತಿಗಳು ಇದನ್ನು ಸ್ಪಷ್ಟವಾಗಿ ನಡೆಸುತ್ತಿವೆ ಮತ್ತು ಈ ಬಗ್ಗೆ ಆಳವಾದ ತನಿಖೆ ನಡೆಸಿ ಬಹಿರಂಗಪಡಿಸಬೇಕಿದೆ ಎಂದಿದ್ದಾರೆ.

ಕದನವಿರಾಮಕ್ಕೆ ಇಸ್ರೇಲ್‌ ಹೊಸ ಪ್ರಸ್ತಾವ: ಬೈಡೆನ್‌
ವಾಷಿಂಗ್ಟನ್: ಗಾಜಾ ಸಮರದ ಬಗ್ಗೆ ಇಸ್ರೇಲ್‌ ಕದನ ವಿರಾಮ ಪ್ರಸ್ತಾಪ ಇರಿಸಿದೆ. ಇದನ್ನು ಒಪ್ಪಿಕೊಳ್ಳಬೇಕು ಎಂದು ಹಮಾಸ್‌ ಉಗ್ರರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮನವಿ ಮಾಡಿದ್ದಾರೆ. ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದು, ಸೇನಾ ಹಿಂತೆಗೆತ ಸೇರಿ ಹಲವು ಪ್ರಸ್ತಾವವನ್ನು ಇಸ್ರೇಲ್‌ ಇರಿಸಿದೆ. ಅದಕ್ಕೆ ಹಮಾಸ್‌ ಒಪ್ಪಬೇಕು. ಏಕೆಂದರೆ ಕಳೆದ ವರ್ಷದಷ್ಟು ಅವರು ಶಕ್ತರಿಲ್ಲ. ಇದು ಮಾರಣಾಂತಿಕ ಸಂಘರ್ಷವನ್ನು ಅಂತ್ಯಗೊಳಿಸಲು ಇದು ಉತ್ತಮ ಮಾರ್ಗವಾಗಿದೆ ಎಂದು ಹೇಳಿದ್ದಾರೆ.
 

Latest Videos
Follow Us:
Download App:
  • android
  • ios