ಪಂಚರಾಜ್ಯ ಚುನಾವಣೆ, ಮುಂದುವರೆದ ವಾಗ್ದಾಳಿ| ದೇಶದ ಕೈಗಾರಿಕೆಗಳು ನಿಷ್ಕ್ರಿಯ, ಮೋದಿ ಗಡ್ಡ ಮಾತ್ರ ಅಭಿವೃದ್ಧಿ| ಶಾ ರಾಕ್ಷಸ: ದೀದಿ ವಾಗ್ದಾಳಿ

ಕೋಲ್ಕತಾ(ಮಾ.27): ಮೊದಲ ಹಂತದ ಮತದಾನದ ಮುನ್ನಾದಿನ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವೈಯಕ್ತಿಕ ವಾಗ್ದಾಳಿ ನಡೆಸಿದ್ದಾರೆ.

ಇಲ್ಲಿ ಪಕ್ಷದ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಮಮತಾ, ದೇಶಾದ್ಯಂತ ಕೈಗಾರಿಕೆಗಳ ಅಭಿವೃದ್ಧಿ ನಿಷ್ಕಿ್ರಯವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಗಡ್ಡ ಮಾತ್ರ ಬೆಳೆಯುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಂದೆಡೆ ‘ದೇಶದ ಗೃಹ ಸಚಿವ ಅಮಿತ್‌ ಶಾ ಅವರನ್ನು ರಾಕ್ಷಸ’ ಎಂದು ಕಿಡಿಕಾರಿದ್ದಾರೆ.

ಕೆಲವೊಮ್ಮೆ ಮೋದಿ ಅವರು ತಮ್ಮನ್ನು ಸ್ವಾಮಿ ವಿವೇಕಾನಂದ ಅವರಿಗೆ ಹೋಲಿಸಿಕೊಳ್ಳುತ್ತಾರೆ. ಆದರೆ ಅಂಥವರು ಕ್ರೀಡಾಂಗಣಗಳಿಗೆ ತಮ್ಮ ಹೆಸರನ್ನು ನಾಮಕರಣ ಮಾಡುತ್ತಾರೆ. ಅವರ ಮೆದುಳಿನಲ್ಲಿ ಏನೋ ಸಮಸ್ಯೆ ಇದ್ದು, ಅವರಿಗೆ ಹುಚ್ಚು ಹಿಡಿದಂತೆ ಭಾಸವಾಗುತ್ತಿದೆ ಎಂದರು.