ನವದೆಹಲಿ (ನ. 07): ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಸರ್ಕಾರ ಕ್ರಮಗಳನ್ನು ಕೈಗೊಂಡಿದ್ದರೂ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈರುಳ್ಳಿ ದರ ಒಂದೇ ವಾರದಲ್ಲಿ ಡಬ್ಬಲ್‌ ಆಗಿದೆ. ವಾರದ ಹಿಂದೆ ಕೇಜಿಗೆ 45-50ರು.ಗೆ ಬಿಕರಿಯಾಗುತ್ತಿದ್ದ ಈರುಳ್ಳಿ 80ರು. ಗೆ ತಲುಪಿದೆ.

ಮಕ್ಕಳನ್ನು ಶಾಲೆಗೆ ಸೇರಿಸೋ ವಿಚಾರದಲ್ಲಿ ಸರ್ಕಾರದ ನಿರಾಸಕ್ತಿ: ಕೋರ್ಟ್ ತರಾಟೆ

ದೆಹಲಿಗೆ ಅತೀ ಹೆಚ್ಚು ಈರುಳ್ಳಿ ಸರಬರಾಜು ಮಾಡುವ ಮಹಾರಾಷ್ಟ್ರ, ಕರ್ನಾಟಕ ಸೇರಿ ದಕ್ಷಿಣ ಹಾಗೂ ಮಧ್ಯ ಭಾರತದಲ್ಲಿ ಅನಿರೀಕ್ಷಿತ ಮಳೆ ಉಂಟಾಗಿದ್ದರಿಂದ ಸಾಗಣೆಯಲ್ಲಿ ಏರುಪೇರು ಉಂಟಾಗಿ ಬೆಲೆ ಹೆಚ್ಚಾಗಿದೆ. ಹೊಸ ಇಳುವರಿ ಬಂದ ಬಳಿಕ ದರ ಸ್ಥಿರವಾಗಲಿದೆ ಎಂದು ಗ್ರಾಹಕ ವ್ಯವಹಾರ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸರ್ಕಾರಿ ಗೋದಾಮುಗಳಲ್ಲಿ ಕೂಡ ದಾಸ್ತಾನುಗಳ ಕೊರತೆಯುಂಟಾಗಿದ್ದು, ಅಷ್ಘಾನಿಸ್ತಾನ, ಈಜಿಪ್ಟ್‌, ಟರ್ಕಿ ಹಾಗೂ ಇರಾನ್‌ನಿಂದ ಈರುಳ್ಳಿ ಆಮದಿಗೆ ಸರ್ಕಾರ ಚಿಂತನೆ ನಡೆಸಿದೆ. ಅಲ್ಲದೇ ಆಮದು ನೀತಿಗಳ ಸಡಿಲಿಕೆಗೂ ಸರ್ಕಾರ ಮುಂದಾಗಿದೆ.