ನವದೆಹಲಿ(ಫೆ.02):  ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ದೆಹಲಿ ಗಡಿಯಲ್ಲಿ ಕಳೆದೆರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆ ಹಿಂಸಾ ರೂಪ ಪಡೆದು ಕೋಲಾಹಲ ಸೃಷ್ಟಿಸಿದೆ. ಇದೀಗ ಫೆ.6 ರಂದು ದೇಶಾದ್ಯಂತ ರಸ್ತೆ ತಡೆ ನಡೆಸಲು ಕರೆ ನೀಡಿದೆ. ಇದರ ನಡುವೆ ಎಲ್ಲರನ್ನು ಒಂದು ಪ್ರಶ್ನೆ ಕಾಡುತ್ತಿದೆ. ರೈತ ಪ್ರತಿಭಟನೆ ಎಲ್ಲೀವರಗೆ ನಡೆಯಲಿದೆ?  ಇದೀಗ  ಈ ಕುತೂಹಲಕ್ಕೆ ಭಾರತೀಯ ಕಿಸಾನ್ ಯೂನಿಯನ್ ಸಂಘದ ನಾಯಕ ರಾಕೇಶ್ ಟಿಕೈಟ್ ಅಧೀಕೃತ ಹೇಳಿಕೆ ನೀಡಿದ್ದಾರೆ.

ಫೆ.6ಕ್ಕೆ ಭಾರತ್ ಬಂದ್? ಏನಿದು ರೈತರು ಘೋಷಿಸಿದ ಚಕ್ಕಾ ಜಾಮ್ ಪ್ರತಿಭಟನೆ?

ಕೇಂದ್ರ ಸರ್ಕಾರ ರೈತರ ಬೇಡಿಕೆ ಈಡೇರಿಸುವ ವರೆಗೆ ಪ್ರತಿಭಟನೆ ಮುಂದುವರೆಯಲಿದೆ. ಅಕ್ಟೋಬರ್ ವರೆಗೆ ಪ್ರತಿಭಟನೆ ಮುಂದುವರಿಯುವುದು ಎಂದು ರಾಕೇಶ್ ಟಿಕೈಟ್ ಹೇಳಿದ್ದಾರೆ. ಸಿಂಘು ಗಡಿಯಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ಟಿಕೈಟ್, ಬೇಡಿಕೆ ಈಡೇರುವವರೆಗೆ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಅಕ್ಟೋಬರ್ ವರೆಗೆ ಖಚಿತ ಎಂದಿದ್ದಾರೆ.

 

ವಿರೋಧ ಪಕ್ಷಗಳು ರೈತ ಪ್ರತಿಭಟನೆಗೆ ಆಗಮಿಸುವುದರ ಕುರಿತ ನಮಗೇನು ಅಭ್ಯಂತರವಿಲ್ಲ. ಆದರೆ ಪ್ರತಿಭಟನೆನಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಟಿಕೈಟ್ ಹೇಳಿದ್ದಾರೆ.

ಜನವರಿ 26 ರಂದು ರೈತರು ಆಯೋಜಿಸಿದ್ದ ಟ್ರಾಕ್ಟರ್ ರ್ಯಾಲಿ ಹಿಂಸಾ ರೂಪ ಪಡೆದಿತ್ತು. 500ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ದೆಹಲಿ ಕೆಂಪು ಕೋಟೆಯಲ್ಲಿ ಸಿಖ್ ಧ್ವಜ ಹಾರಿಸಿ, ಕೆಂಪು ಕೋಟೆಗೆ ಮುತ್ತಿಗೆ ಹಾಕಲಾಗಿತ್ತು