Asianet Suvarna News Asianet Suvarna News

ಪಂಜಾಬ್‌ನಲ್ಲಿ ಇನ್ಮುಂದೆ ಶಾಸಕರಿಗೆ ಒಂದೇ ಬಾರಿ ಪಿಂಚಣಿ: ಸರ್ಕಾರದ ಬೊಕ್ಕಸಕ್ಕೆ 5 ವರ್ಷದಲ್ಲಿ 100 ಕೋಟಿ ಉಳಿತಾಯ..!

ಒಬ್ಬರು ಶಾಸಕರಿಗೆ ಒಂದೇ ಬಾರಿ ಪಿಂಚಣಿ ನೀಡುವ ಮಸೂದೆಯನ್ನು ಪಂಜಾಬ್‌ನ ಎಎಪಿ ಸರ್ಕಾರ ಅಧಿಸೂಚನೆಗೊಳಿಸಿದೆ. ಪಂಜಾಬ್‌ ರಾಜ್ಯಪಾಲರು ಈ ತಿದ್ದುಪಡಿ ಮಸೂದೆಗೆ ಅಂಕಿತ ಹಾಕಿದ್ದಾರೆ.

one mla one pension scheme notified in punjab bhagwant mann ash
Author
Bangalore, First Published Aug 14, 2022, 12:51 PM IST

ಪಂಜಾಬ್‌ನಲ್ಲಿ ಇನ್ಮುಂದೆ ಮಾಜಿ ಶಾಸಕರಿಗೆ ಒಂದೇ ಬಾರಿ ಪಿಂಚಣಿ ಸಿಗಲಿದೆ. ಈ ಸಂಬಂಧ ಎಎಪಿ ಸರ್ಕಾರ ಹೊರಡಿಸಿದ್ದ ಮಸೂದೆ ಒಪ್ಪಿಗೆ ದೊರೆತಿದ್ದು, ರಾಜ್ಯಪಾಲರು ಅಂಕಿತ ಹಾಕಿದ ಬಳಿಕ ಇದಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ 5 ವರ್ಷಗಳಲ್ಲಿ ರೂ. 100 ಕೋಟಿ ಉಳಿತಾಯವಾಗಲಿದೆ ಎಂದು ಪಂಜಾಬ್‌ ಮುಖ್ಯಮಂತ್ರಿ ಹೇಳಿದ್ದಾರೆ. 

ಮಾಜಿ ಶಾಸಕರಿಗೆ (Member of Legislative Assembly) ಬಹು ಪಿಂಚಣಿಗಳನ್ನು ಸೀಮಿತಗೊಳಿಸುವ ಮಸೂದೆಗೆ ಪಂಜಾಬ್ ರಾಜ್ಯಪಾಲರು ಒಪ್ಪಿಗೆ ನೀಡಿದ ನಂತರ, ಎಎಪಿ ಸರ್ಕಾರ ಶನಿವಾರ ಈ ಸಂಬಂಧ ಅಧಿಸೂಚನೆಯನ್ನು ಹೊರಡಿಸಿದ್ದು, ಐದು ವರ್ಷಗಳಲ್ಲಿ ರೂ 100 ಕೋಟಿ ಉಳಿತಾಯವಾಗಲಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ.ಇನ್ನು, ಪಂಜಾಬ್‌ನಲ್ಲಿ 'ಒನ್‌ ಎಂಎಲ್‌ಎ, ಒನ್‌ ಪೆನ್ಷನ್‌’ (One MLA One Pension)' ಜಾರಿಗೊಳಿಸುವ ಅಧಿಸೂಚನೆಯು ದೇಶದ ರಾಜಕೀಯ ವ್ಯವಸ್ಥೆಯನ್ನು ಕ್ರಾಂತಿಗೊಳಿಸುತ್ತದೆ ಮತ್ತು ಸುಧಾರಿಸುತ್ತದೆ. "ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಮತ್ತು ರಾಷ್ಟ್ರೀಯ ವೀರರ ಕನಸುಗಳನ್ನು ನನಸಾಗಿಸಲು ಇದು ಎಎಪಿ ಸರ್ಕಾರದ ವಿನಮ್ರ ಉಪಕ್ರಮವಾಗಿದೆ" ಎಂದು ಭಗವಂತ್ ಮಾನ್ ಹೇಳಿದರು.

ಇದನ್ನು ಓದಿ: ಕಸ ಎಸೆಯುತ್ತಿದ್ದ ಪಂಜಾಬ್‌ ಸಿಎಂ ನಿವಾಸಕ್ಕೆ 10 ಸಾವಿರ ದಂಡ..!

ಪಂಜಾಬ್ ವಿಧಾನಸಭೆಯು ಜೂನ್ 30 ರಂದು ಪಂಜಾಬ್ ರಾಜ್ಯ ಶಾಸಕಾಂಗ ಸದಸ್ಯರ (ಪಿಂಚಣಿ ಮತ್ತು ವೈದ್ಯಕೀಯ ಸೌಲಭ್ಯಗಳ ನಿಯಂತ್ರಣ) ತಿದ್ದುಪಡಿ ಮಸೂದೆ, 2022 ಅನ್ನು ಅಂಗೀಕರಿಸಿದೆ. ಇದು ರಾಜ್ಯ ವಿಧಾನಸಭೆಯ ಸದಸ್ಯರಿಗೆ ಒಂದೇ ಅವಧಿಗೆ ಮಾತ್ರ ಪ್ರತಿ ತಿಂಗಳಿಗೆ 60,000 ರೂಪಾಯಿಗಳ ಜೊತೆಗೆ ತುಟ್ಟಿ ಭತ್ಯೆ ಸೇರಿ ಹೊಸ ದರದಲ್ಲಿ ಪಿಂಚಣಿ ನೀಡುವ ಗುರಿಯನ್ನು ಹೊಂದಿದೆ. 'ಒನ್‌ ಎಂಎಲ್‌ಎ, ಒನ್‌ ಪೆನ್ಷನ್‌’ ಮಸೂದೆಗೆ ರಾಜ್ಯಪಾಲರು ತಮ್ಮ ಒಪ್ಪಿಗೆ ನೀಡಿದ್ದಾರೆ ಎಂದು ಪಂಜಾಬಿಗಳಿಗೆ ತಿಳಿಸಲು ನನಗೆ ತುಂಬಾ ಸಂತೋಷವಾಗಿದೆ. ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿದೆ" ಎಂದು ಭಗವಂತ್ ಮಾನ್ ಶನಿವಾರ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಈ ಕ್ರಮದ ಮೂಲಕ ರಾಜ್ಯ ಸರ್ಕಾರಕ್ಕೆ ವಾರ್ಷಿಕ ₹ 19.53 ಕೋಟಿ ಉಳಿತಾಯವಾಗಲಿದೆ ಎಂದು ಅವರು ಹೇಳಿದರು. 

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಚೀಮಾ ಅವರು, ಈ ಅಧಿಸೂಚನೆಯೊಂದಿಗೆ, ಇನ್ನು ಮುಂದೆ ರಾಜಕಾರಣಿಗಳಿಗೆ ಉಚಿತ ಕೊಡುಗೆಗಳು ಇರುವುದಿಲ್ಲ ಎಂದು ಹೇಳಿದ್ದಾರೆ. ‘’ಪಂಜಾಬ್ ತೀವ್ರ ಆರ್ಥಿಕ ಸಂಕಷ್ಟದಿಂದ ತತ್ತರಿಸುತ್ತಿರುವಾಗ, ಹಿಂದಿನ ಸರ್ಕಾರಗಳ ಅಡಿಯಲ್ಲಿ ಶಾಸಕರು ಬಹು ಪಿಂಚಣಿಗಳನ್ನು ಅನುಭವಿಸುತ್ತಿದ್ದರು. ಸಿಎಂ ಭಗವಂತ್ ಮಾನ್ ಅವರ ನೇತೃತ್ವದಲ್ಲಿ ಇದು ಕೊನೆಗೊಳ್ಳುತ್ತದೆ" ಎಂದು ಹರ್ಪಾಲ್ ಚೀಮಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಅಲ್ಲದೆ, ಈ ಬಗ್ಗೆ ಚಂಡೀಗಢದಲ್ಲಿ ಹೇಳಿಕೆ ಬಿಡುಗಡೆ ಮಾಡಿದ ಭಗವಂತ್ ಮಾನ್‌, ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ವರ್ಗರಹಿತ ಪ್ರಜಾಪ್ರಭುತ್ವದ ಕನಸು ಕಂಡಿದ್ದರು, ಅಲ್ಲಿ ಚುನಾಯಿತ ಪ್ರತಿನಿಧಿಗಳು ಜನರ ನಿಜವಾದ ಸೇವಕರಾಗಿ ಕೆಲಸ ಮಾಡುತ್ತಾರೆ ಮತ್ತು ಅವರ ಯೋಗಕ್ಷೇಮವನ್ನು ಖಚಿತಪಡಿಸುತ್ತಾರೆ. ಆದರೆ ಕಳೆದ 75 ವರ್ಷಗಳಲ್ಲಿ ಈ ಚುನಾಯಿತ ಪ್ರತಿನಿಧಿಗಳು ರಾಜ್ಯದ ಬೊಕ್ಕಸದಿಂದ ದುಂದು ವೆಚ್ಚದ ಸಂಬಳ ಮತ್ತು ಪಿಂಚಣಿಗಳನ್ನು ಪಡೆಯುವ ಮೂಲಕ ರಾಜಕೀಯ ಕಾರ್ಯನಿರ್ವಾಹಕರಾಗಿ ಬದಲಾಗಿದ್ದಾರೆ ಎಂದು ಹೇಳಿದ್ದಾರೆ. ಈ ನಾಯಕರಿಗೆ ನೀಡಲಾದ ಸೌಲಭ್ಯದ ಸಂಪೂರ್ಣ ಹೊರೆಯನ್ನು ತೆರಿಗೆದಾರರ ಹಣದಿಂದ ಪೂರೈಸಲಾಗಿದೆ ಎಂದೂ ಭಗವಂತ್ ಮಾನ್ ಹೇಳಿದರು.

ಇದನ್ನೂ ಓದಿ: ಜಲಾಶಯದ 'ಪವಿತ್ರ ನೀರು' ಕುಡಿದ ಬಳಿಕ ಅಸ್ವಸ್ಥರಾದ ಪಂಜಾಬ್‌ ಸಿಎಂ..!

ಅವರ ಹಣವನ್ನು ಸಾರ್ವಜನಿಕ ಕಲ್ಯಾಣಕ್ಕೆ ಬಳಸುವ ಬದಲು ಈ ನಾಯಕರ ಜೇಬು ತುಂಬಲು ದುರುಪಯೋಗಪಡಿಸಿಕೊಳ್ಳಲಾಗುತ್ತಿತ್ತು. ಶಾಸಕರು ಜನರ ಸೇವೆ ಮಾಡಲು ಇಚ್ಛೆಯಿಂದ ರಾಜಕೀಯಕ್ಕೆ ಬಂದಿದ್ದಾರೆ, ಆದ್ದರಿಂದ ಈ ಸೇವೆಗೆ ಬದಲಾಗಿ ಬಹು ಪಿಂಚಣಿಗಳನ್ನು ಪಡೆಯಲು ಅವರಿಗೆ ಯಾವುದೇ ನೈತಿಕ ಹೊಣೆಗಾರಿಕೆ ಇಲ್ಲ ಎಂದೂ ಚಂಡೀಗಢದಲ್ಲಿ ಪಂಜಾಬ್‌ ಸಿಎಂ ಭಗವಂತ್ ಮಾನ್ ಹೇಳಿದರು.

Follow Us:
Download App:
  • android
  • ios