ಲಕ್ನೋ(ಫೆ.15): ಚೌಧರಿ ಚರಣ್‌ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಹುದೊಡ್ಡ ಕಾರ್ಯಾಚರಣೆ ನಡೆಸಿದ್ದಾರೆ. ಮಾಮೂಲಿ ಚೆಕ್ಕಿಂಗ್ ವೇಳೆ ನಾಲ್ವರು ಯಾತ್ರಿಗಳು ಒಂದೂವರೆ ಕೋಟಿ ಮೌಲ್ಯದ ಮೂರು ಕೆ. ಜಿ ಚಿನ್ನದೊಂದಿಗೆ ಸಿಕ್ಕಾಕೊಂಡಿದ್ದಾರೆ. ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು ಆರೋಪಿಗಳು ಚಿನ್ನವನ್ನು ಪೇಸ್ಟ್‌ನಂತೆ ತಮ್ಮ ಚಡ್ಡಿಯ ಬೆಲ್ಟ್‌ ಭಾಗದಲ್ಲಿ ಮುಚ್ಚಿಟ್ಟು ತರಲು ಯತ್ನಿಸಿದ್ದರೆನ್ನಲಾಗಿದೆ.

ಗುದನಾಳದಲ್ಲಿ 9 ಜನರಿಂದ 9 ಕೇಜಿ ಅಕ್ರಮ ಚಿನ್ನ ಸಾಗಣೆ!

ಎರಡೆರಡು ಅಂಡರ್‌ವೇರ್ ಧರಿಸಿದ್ದ ಆರೋಪಿಗಳು

ವಿಭಾಗದ ಉಪ ಆಯುಕ್ತೆ ನಿಹಾರಿಕಾ ಲಾಖಾ ಅನ್ವಯ ತಪಾಸಣಾಧಿಕಾರಿಗಳ ಕಣ್ತಪ್ಪಿಸಲು ಆರೋಪಿಗಳು ಎರಡೆರಡು ಚಡ್ಡಿ ಧರಿಸಿದ್ದರು. ಹೀಗಿದ್ದರೂ ನಾಲ್ವರು ಆರೋಪಿಗಳು ಸಿಕ್ಕಾಕೊಂಡಿದ್ದಾರೆ ಎಂದಿದ್ದಾರೆ.

ಮೂರೂವರೆ ಕೆ. ಜಿ ಚಿನ್ನದೊಂದಿಗೆ ಸಿಕ್ಕಾಕೊಂಡರು

ಮಯನ್ಮಾರ್‌ನಿಂದ ಅಕ್ರಮವಾಗಿ ಚಿನ್ನ ತರಲು ಯತ್ನಿಸುತ್ತಿದ್ದಬಿಹಾರ ಮೂಲದ ಇಬ್ಬರು ಸ್ಮಗ್ಲರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ.