* ಆನ್‌ಲೈನ್‌ ತರಗತಿಯ ವೇಳೆ ಬೆಟ್ಟದ ಮೇಲಿಂದ ಬಿದ್ದು 13 ವರ್ಷದ ಆದಿವಾಸಿ ಬಾಲಕ ಮೃತ* ಓಡಿಶಾ ರಾಜ್ಯದ ರಾಯಘಡ ಜಿಲ್ಲೆಯ ಪದ್ಮಾಪುರದಲ್ಲಿ ಘಟನೆ* ಇಂಟರ್‌ನೆಟ್‌ಗಾಗಿ ಬಾಲಕ ಬೆಟ್ಟಹತ್ತಿದ್ದ ಸಮಯದಲ್ಲಿ ಈ ದುರ್ಘಟನೆ  

ಭುವನೇಶ್ವರ(ಆ.19): ಆನ್‌ಲೈನ್‌ ತರಗತಿಯ ವೇಳೆ ಬೆಟ್ಟದ ಮೇಲಿಂದ ಬಿದ್ದು 13 ವರ್ಷದ ಆದಿವಾಸಿ ಬಾಲಕ ಮೃತ ಪಟ್ಟಿರುವ ದುರ್ಘಟನೆ ಓಡಿಶಾ ರಾಜ್ಯದ ರಾಯಘಡ ಜಿಲ್ಲೆಯ ಪದ್ಮಾಪುರದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಂದ್ರಿಯಾ ಜಗರಂಗ ಮೃತ ದುರ್ದೈವಿ. ಆನ್ಲೈನ್‌ ತರಗತಿ ಕೇಳಲು ಇಂಟರ್‌ನೆಟ್‌ಗಾಗಿ ಬಾಲಕ ಬೆಟ್ಟಹತ್ತಿದ್ದ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. 8ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಇಂಟರ್‌ನೆಟ್‌ ಸಂಪರ್ಕಕ್ಕಾಗಿ ಬೆಟ್ಟದ ಮೇಲಿದ್ದ ಬಂಡೆಯ ಮೇಲೆ ಏರಿ ಕುಳಿತಿದ್ದ.

ಈ ಸಮಯದಲ್ಲಿ ಬಂಡೆ ಜಾರಿದ್ದರಿಂದ ಬಾಲಕ ಬೆಟ್ಟದಿಂದ ಉರುಳಿ ಬಿದ್ದಿದ್ದಾನೆ. ಆತನ ಎಡ ಕಾಲಿನ ಮೇಲೆ ಬಂಡೆ ಬಿದ್ದು ಗಾಯಗೊಂಡಿದ್ದ ಬಾಲಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಆತ ಸಾವೀಗೀಡಾಗಿದ್ದಾನೆ.