Asianet Suvarna News Asianet Suvarna News

Covid cases ಓಮಿಕ್ರಾನ್ ಉಪತಳಿಗೆ ದೇಹದ ಪ್ರತಿಕಾಯ ಕುಗ್ಗಿಸುವ ಸಾಮರ್ಥ್ಯ, 4ನೇ ಅಲೆ ಪರಿಣಾಮ ಎಚ್ಚರಿಸಿದ ತಜ್ಞರು!

  • ಭಾರತದಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಹೆಚ್ಚಳ
  • ಓಮಿಕ್ರಾನ್ ಉಪತಳಿಗಳಿಂದ ದೇಶದಲ್ಲಿ ಆತಂಕ
  • ಉಪತಳಿ ಕುರಿತ ಅಧ್ಯಯನ ವರದಿ ಬಹಿರಂಗ
Omicron sub-variants can creat new wave and potential to fight against vaccine ckm
Author
Bengaluru, First Published May 1, 2022, 5:59 PM IST

ನವದೆಹಲಿ(ಮೇ.01): ಭಾರತದಲ್ಲಿ ಕೊರೋನಾ ಪ್ರಕರಣ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ ಮಾಡಲಾಗಿದೆ. 4ನೇ ಅಲೆ ಕುರಿತು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದರ ನಡುವೆ ಭಾರತದಲ್ಲಿ ಕೊರೋನಾ ಏರಿಕೆಗೆ ಕಾರಣವಾಗಿರುವ ಓಮಿಕ್ರಾನ್ ಉಪತಳಿಗಳ ಅಧ್ಯಯನ ವರದಿ ಬಹಿರಂಗವಾಗಿದೆ. ಈ ವರದಿಯಲ್ಲಿ ಓಮಿಕ್ರಾನ್ ಉಪತಳಿಗಳು ಮನುಷ್ಯನ ದೇಹದಲ್ಲಿನ ಪ್ರತಿಕಾಯಗಳನ್ನು ಕುಗ್ಗಿಸುವ ಹಾಗೂ ಲಸಿಕೆ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಕಳೆದ ತಿಂಗಳ ವಿಶ್ವ ಆರೋಗ್ಯ ಸಂಸ್ಥೆ  BA.4 ಹಾಗೂ BA.5 ಎಂಬ ಎರಡು ವೈರಸ್ ಓಮಿಕ್ರಾನ್ ಉಪತಳಿ ಎಂದು ಘೋಷಿಸಿದೆ. ಸೌತ್ ಆಫ್ರಿಕಾದಲ್ಲಿ ಕಾಣಿಸಿಕೊಂಡ ಓಮಿಕ್ರಾನ್ ತಳಿ ಹಾಗೂ ಉಪತಳಿ ಕುರಿತು ಅಧ್ಯಯನ ನಡೆಸಿದ ತಜ್ಞರು ಹಲವು ಸೂಕ್ಷ್ಮ ವಿಚಾರಗಳನ್ನು ಸಂಶೋಧನೆ ಮೂಲಕ ಪತ್ತೆ ಹಚ್ಚಿದ್ದಾರೆ.  ಈ ಉಪತಳಿಗಳು ಕೊರೋನಾ ಅಲೆ ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ ಎಂದಿದ್ದಾರೆ.

Covid Crisis: ಇನ್ಮುಂದೆ ಮಾಸ್ಕ್‌ ಧರಿಸದಿದ್ರೆ 250 ದಂಡ..!

ಓಮಿಕ್ರಾನ್ ಉಪತಳಿ ಹರಡು ಸಾಮರ್ಥ್ಯದ ಜೊತೆಗೆ ಸೋಂಕಿತರ ಆರೋಗ್ಯವನ್ನೇ ಅಷ್ಟೇ ವೇಗವಾಗಿ ಕುಗ್ಗಿಸುತ್ತದೆ. ಹೀಗಾಗಿ ಆಸ್ಪತ್ರೆ ದಾಖಲಾಗುವರ ಸಂಖ್ಯೆ ಹೆಚ್ಚಾಗಲಿದೆ ಎಂದು ತಜ್ಞರು ಸೂಚಿಸಿದ್ದಾರೆ.

21 ದಿನ ಬಳಿಕ ರಾಜ್ಯದಲ್ಲಿ ಕೋವಿಡ್‌ಗೆ ಮೊದಲ ಬಲಿ
ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರುತ್ತಿದ್ದು, 21 ದಿನಗಳ ಬಳಿಕ ಮೊದಲ ಬಾರಿಗೆ ಕೋವಿಡ್‌ ಸಾವು ವರದಿಯಾಗಿದೆ. 126 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ, ಇಬ್ಬರು ಸಾವನ್ನಪ್ಪಿದ್ದಾರೆ. 76 ಮಂದಿ ಚೇತರಿಸಿಕೊಂಡಿದ್ದಾರೆ.

ಏಪ್ರಿಲ್‌ 8ರಂದು ಒಂದು ಸಾವು ದಾಖಲಾದ ಬಳಿಕ ಶನಿವಾರ ಇಬ್ಬರು ಸಾವಿಗೀಡಾಗಿದ್ದಾರೆ. ವಿಜಯಪುರದ 42 ವರ್ಷದ ಪುರುಷ ಮತ್ತು ಬೆಳಗಾವಿಯ 67 ವರ್ಷದ ಮಹಿಳೆಯೊಬ್ಬರು ಮೃತರಾಗಿದ್ದಾರೆ. ಇಬ್ಬರಲ್ಲಿಯೂ ‘ಸಾರಿ’ ಕಾಣಿಸಿಕೊಂಡಿದ್ದು ಉಸಿರಾಟದ ತೊಂದರೆಯಿಂದ ಅಸುನೀಗಿದ್ದಾರೆ. ಇವರಿಬ್ಬರ ಸಾವಿನೊಂದಿಗೆ ರಾಜ್ಯದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 40,059ಕ್ಕೆ ಏರಿದೆ.

9,944 ಕೋವಿಡ್‌ ಪರೀಕ್ಷೆ ನಡೆದಿದ್ದು ಶೇ. 1.26ರ ಪಾಸಿಟಿವಿಟಿ ದರ ದಾಖಲಾಗಿದೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 1,785ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ 120, ಚಿಕ್ಕಮಗಳೂರು 2, ಚಿತ್ರದುರ್ಗ, ಕಲಬುರಗಿ, ಮೈಸೂರು ಮತ್ತು ಉಡುಪಿಯಲ್ಲಿ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 39.47 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 39.05 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ.

Covid 19 Spike: ಅನಗತ್ಯವಾಗಿ ಕಠಿಣ ನಿರ್ಬಂಧ ಇಲ್ಲ: ಸಿಎಂ ಬೊಮ್ಮಾಯಿ

ಫೇಸ್‌ ಮಾಸ್‌್ಕ ಕಡ್ಡಾಯ: ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದು ದಂಡನಾರ್ಹ
ಕೆಲವು ದಿನಗಳಿಂದ ಕೋವಿಡ್‌ -19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ  ವಿಜಯಪುರ ಜಿಲ್ಲಾಡಳಿತ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಸರ್ಕಾರದ ಆದೇಶದ ಮೇರೆಗೆ ರಾಜ್ಯ ಕೋವಿಡ್‌ -19 ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸುಗಳ ಪ್ರಕಾರ ಕೋವಿಡ್‌ -19 ನಿಯಂತ್ರಣ ಕುರಿತು ಅಗತ್ಯ ಮುಂಜಾಗ್ರತಾ ಕ್ರಮಗಳಾದ ಫೇಸ್‌ ಮಾಸ್‌್ಕ ಧರಿಸುವಿಕೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದನ್ನು ನಿರ್ಬಂಧಿಸಲಾಗಿದೆ. ಕಾರಣ ಸಾರ್ವಜನಿಕರು, ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲು ಮತ್ತು ಕೋವಿಡ್‌-19 ಹರಡುವುದನ್ನು ತಡೆಗಟ್ಟಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಅವರು ಮನವಿ ಮಾಡಿದ್ದಾರೆ.

ಮುಖಗವುಸು: ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಮತ್ತು ಪ್ರಯಾಣದ ಸಮಯದಲ್ಲಿ ಮಾಸ್‌್ಕ ಧರಿಸುವುದು ಕಡ್ಡಾಯವಾಗಿದೆ. ಮಾಸ್‌್ಕ ಧರಿಸದಿದ್ದರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ .250 ಮತ್ತು ಇನ್ನುಳಿದ ಪ್ರದೇಶಗಳಲ್ಲಿ .100 ದಂಡ ವಿಧಿಸಲಾಗುವುದು. ಇದಲ್ಲದೇ ಸಾರ್ವಜನಿಕ ಹಾಗೂ ಜನನಿಬಿಡ ಸ್ಥಳಗಳಲ್ಲಿ ಸಾಮಾಜಿಕ ಅಂತರವನ್ನು ಪಾಲಿಸುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

Follow Us:
Download App:
  • android
  • ios